Asianet Suvarna News Asianet Suvarna News

Davanagere: ಸರ್ಕಾರಿ ಅಧಿಕಾರಿಗೆ ಧಮ್ಕಿ ಹಾಕಿದ ಆರೋಪ, ಶಾಸಕ ರೇಣುಕಾಚಾರ್ಯ ವಿರುದ್ಧ ಕೇಸ್

ಸರ್ಕಾರಿ ಅಧಿಕಾರಿಗೆ ಧಮ್ಕಿ ಹಾಕಿ  ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ   ದಾವಣಗೆರೆ  ಜಿಲ್ಲೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ಧ ಇದೀಗ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Case against MLA Renukacharya on assaulting a government official in Davanagere gow
Author
First Published Nov 15, 2022, 8:15 PM IST

ವರದಿ : ವರದರಾಜ್  ಏಷ್ಯಾನೆಟ್ ಸುವರ್ಣ ನ್ಯೂಸ್ 

ದಾವಣಗೆರೆ (ನ.15): ದಾವಣಗೆರೆ  ಜಿಲ್ಲೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ಧ ಇದೀಗ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಾರಿ ಅಧಿಕಾರಿಗೆ ಧಮ್ಕಿ ಹಾಕಿ  ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ  ಐಪಿಸಿ ಕಲಂ 186 ನಂತೆ ಪ್ರಕರಣ ದಾಖಲಾಗಿದೆ.  ನ್ಯಾಮತಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾದಂತೆ ಪ್ರಕರಣದ  ಸಾರಂಶ ಇಂತಿದೆ. ಎಮ್ ಎಸ್ ಪ್ರಶಾಂತಕುಮಾರ ತಂದೆ ಶಿವಪ್ಪ, 40 ವರ್ಷ ಹಾಲಿ ನ್ಯಾಮತಿ ತಾಲೂಕ್ ಬೆಳಗುತ್ತಿ ಹೋಬಳಿ ಕಂದಾಯ ಘಟಕ ಕುಂಕುವ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದು  ದಿನಾಂಕ:30.10.2022 ರಂದು ಪ್ರಶಾಂತ್ ಗೆ  ಬೆಳಿಗ್ಗೆ  11-31 ಗಂಟೆಗೆ ಕೂಗೆನಹಳ್ಳಿ ಗ್ರಾಮದ ದೇವರಾಜ್ ಅರಸ್‌  ನನಗೆ ದೂರವಾಣಿ ಕರೆ ಮಾಡಿದ್ದು. ಕಾಲ್ ಕಟ್ ಆಗಿರುತ್ತದೆ.  ನಂತರ  ದೇವರಾಜ್ ಅರಸ್ ಇವರಿಗೆ  ನಾನು ವಾಪಾಸ್‌ ಕರೆ ಮಾಡಿದಾಗ  ಸಾಹೇಬರು ನಿಮ್ಮ ಬಳಿ ಮಾತನಾಡುತ್ತಾರೆ ಎಂದು ಹೊನ್ನಾಳಿಯ ಮಾನ್ಯ ಶಾಸಕ ರೇಣುಕಾಚಾರ್ಯ ಅವರಿಗೆ ಪೋನ್ ಕೊಡುತ್ತಾರೆ.. ಶಾಸಕರು ನನ್ನ ಬಳಿ ಮಾತನಾಡಿ ತಕ್ಷಣ ಮನೆಗೆ ಬಾ ಎಂದು ಹೇಳಿದರು ಬಳಿಕ ನಾನು ಸುಮಾರು 11-40 ಗಂಟೆಗೆ ಅವರ ಮನೆಗೆ ಹೋದನು.

ಆಗ ಅವರ ಮನೆಯ ಹಾಲ್ ನಲ್ಲಿ ಕುಂಕುವ ವ್ಯಕ್ತಿ  ಸೇರಿದಂತೆ  ಕೂಗನಹಳ್ಳಿ ಗ್ರಾಮದ  ದೇವರಾಜ್ ಅರಸ್,  ಕೆ ಹೆಚ್ ಉಮೇಶನಾಯ್ಕ, ಮಂಜಾನಾಯ, ಸೇರಿದಂತೆ ಕೆಲವು ಗ್ರಾಮಸ್ಥರು ಮತ್ತು ಇತರೆ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು ಆಗ ನಾನು ಮಾನ್ಯ  ಶಾಸಕರಿಗೆ ಗೌರವ ಸಲ್ಲಿಸಿ ವಿಷಯವನ್ನು ಕೇಳಿದಾಗ ಅವರು ಕೂಗನಹಳ್ಳಿ, ಗ್ರಾಮಕ್ಕೆ ಸಂಭಂದಿಸಿದಂತೆ  ರೂಪಬಾಯಿ ಗಂಡ ಛತ್ರಪತಿನಾಯ, 2) ಶ್ರೀಮತಿ ಸಾವಿತ್ರಿಬಾಯಿ ಗಂಡ ಮಂಜುನಾಥನಾಯ್ಕ, 3) ಶಿವರಾಜ ನಾಯ್ಡು ತಂದೆ ಯೋಗನಾಯ್ಕ, ಇವರುಗಳ ಮನೆಗಳಿಗೆ ಮಳೆಯಿಂದ ಹಾನಿಯಾದ ಬಗ್ಗೆ ಪರಿಹಾರ ಬರುವಂತೆ ಕಡತವನ್ನು ತಯಾರಿಸಿ ಕೊಡಬೇಕೆಂದು ಹೇಳಿದರು.  ನಾನು ಈ ಪ್ರಕರಣಗಳಿಗೆ ಸಂಭಂದಿಸಿದಂತೆ ಅವರಿಗೆ ವಾಸ್ತವಾಂಶದ ಬಗ್ಗೆ ವಿವರಣೆಯನ್ನು ನೀಡಿದನು.  ಸದರಿ ಕಡತಗಳನ್ನು ಈ ಹಿಂದೆಯೇ ವಾಸ್ತವಾಂಶದ ವರದಿಯೊಂದಿಗೆ ಮೇಲಾಧಿಕಾರಿಗಳಿಗೆ ಸಲ್ಲಿಸಿರುವುದಾಗಿ ತಿಳಿಸಿದೆನು ಆಗ ಮಾನ್ಯ  ಶಾಸಕರು ನೀನು ವಾಸ್ತುವಾಂಶದ ವರದಿಯನ್ನು ಸಲ್ಲಿಸಿದರೆ ಅವರಿಗೆ ಪರಿಹಾರ ಸಿಗುವುದಿಲ್ಲ, ನಿನ್ನ ವರದಿಯನ್ನು ಬದಲಾಯಿಸಿ ಕೊಡು ಎಂದರು. 

 ಆದರೆ ನಾನು ಆಗುವುದಿಲ್ಲ ಎಂದು ತಿಳಿಸಿದೆ.  ಆಗ  ಶಾಸಕ ರೇಣುಕಾಚಾರ್ಯರು  ತಾಲ್ಲೂಕಿನಲ್ಲಿ ಈ  ತರಹದ ಪ್ರಕಣಗಳನ್ನು ನಾನೇ ಸಾಕಷ್ಟು  ಮಾಡಿಸಿದ್ದೇನೆ.  ನಿನ್ನದೆನು ಸ್ಪೆಶಲ್  ಎಂದು ಗದರಿಸಿದರು ಅದಕ್ಕೆ ನಾನು ಆಗುವುದಿಲ್ಲ ಸಾರ್ ಎಂದು  ತಿಳಿಸಿದನು. ಆಗ ನೀನು ಸತ್ಯ ಹರಿಶ್ಚಂದ್ರನಾಗಲು  ಹೋಗಬೇಡ ನಾನು ಹೇಳಿದಂತೆ ಮಾಡು ಇಲವಾದಲ್ಲಿ, ನನ್ನ ತಾಲೂಕನ್ನು ಬಿಟ್ಟು ಬೇರೆ ಕಡೆ ಹೋಗು ಎಂದು ಗದರಿಸಿದರು.  ಆಗ ನಾನು ಟ್ರಾನ್ಸ್ ಪರ್ ಮಾಡಿದರೆ ಎಲ್ಲಿಗೆ ಬೇಕಾದರೂ ಹೋಗಿ ಡ್ಯೂಟಿ ಮಾಡುತ್ತೇನೆ ಎಂದು ತಿಳಿಸಿದೆ..  ಆಗ ಪುನಃ ಶಾಸಕರು ನೀನು ನಾಳೆಯಿಂದ ಡ್ಯೂಟಿಗೆ ಬರಬೇಡ ರಜೆ ಹಾಕಿ ಹೋಗು ಎಂದು  ಗದರಿಸಿದರು. ಆಗ ನಾನು ರಜೆ ಹಾಕುವುದು ನನ್ನ ವೈಯಕ್ತಿಕ ವಿಚಾರ ಎಂದು ಹೇಳಿದಾಗ ಮಾತ್ರ ಶಾಸಕರು ನನಗೆ ಗೆಟ್ ಔಟ್ ಎಂದು ಗದರಿಸಿದರು ತಕ್ಷಣ ನಾನು ಅವರ ಮನೆಯಿಂದ ಹೊರಗೆ ಬಂದೆನು

ಮಾನ್ಯ ಶಾಸಕರು ತಾವೇ ಫೋನ್ ಮಾಡಿ ತಮ್ಮ ಮನೆಗೆ  ಕರೆಯಿಸಿ ನನ್ನನ್ನು ಸಾರ್ವಜನಿಕರ ಎದುರು ಗೆಟ್ ಔಟ್ ಎಂದು ಗದರಿಸಿರುವುದು ಒಬ್ಬ ಸಾಮಾನ್ಯ ವ್ಯಕ್ತಿಗೂ ಸಹ ತರವಲ್ಲದ ರೀತಿಯಾಗಿರುತ್ತದೆ ಇದು ನನ್ನ ಮನಸ್ಸಿಗೆ ಸಾಕಷ್ಟು ಅವಮಾನ ಮತ್ತು ಕಸಿವಿಸಿ ಉಂಟು ಮಾಡಿದಂತಾಗಿರುತ್ತದೆ. 

ಮನೆಹಾನಿ ಪ್ರಕ್ಷಣಕ್ಕೆ ಸಂಭಂದಿಸಿದಂತೆ ದಿನಾಂಕ 29.10.2022 ರಂದು ಬೆಳಗೆ, ಸುಮಾರು 11-40 ಗಂಟೆಗೆ ಸದರಿ ಮಾನ್ಯ ಶಾಸಕರು ಅವರ ಮೊಬೈಲ್ ನಂಬರ್ ನಿಂದ  ನನಗೆ ಕರೆ ಮಾಡಿ ಕೂಗನಹಳ್ಳಿ ಗ್ರಾಮದ ಶ್ರೀ ಸುರೇಶನಾಯ್ಕ (ಶ್ರೀಮತಿ ಜಮುನಾ) ಇವರ ಮನೆಹಾನಿ ವಿಷಯಕ್ಕೆ ಸಂಭಂದಿಸಿದಂತೆ ಬಿ-1  ಶ್ರೇಣಿಯ  ಪರಿಹಾರ ಬರುವಂತೆ ಕಡತವನ್ನು ತಯಾರು ಮಾಡುವಂತೆ ತಿಳಿಸಿದರು. ಆಗ ನಾನು ಸರ್ ಇದು ಅನರ್ಹ ಪ್ರಕರಣ ಎಂದು ಹೇಳಿದೆನು ಆಗ ಅವರು ನೀನು ಏನಾದರೂ ಮಾಡು ಎಂದು ಅಸಮಾದಾನದಿಂದ ಹೇಳಿ ಫೋನ್ ಕಟ್ ಮಾಡಿದರು. 

 ದಿನಾಂಕ;15.08.2022 ರಂದು ಭಾರತದ ಸ್ವಾತಂತ್ರೋತ್ಸವದ  ದಿನಾಚರಣೆಯ ಕಾರ್ಯಕ್ರಮದ ನಂತರ   ಹೊನ್ನಾಳಿ ತಾ ಪಂ  ಇ ಓ  ರಾಜಸ್ವ ನಿರೀಕ್ಷಕರು ಪಿಡಿಒ ರವರೊಂದಿಗೆ ಕುಂಕುವ ಕೂಗನಹಳ್ಳಿ ಗಡೆಕಟ್ಟೆ  ಒಡೆಯರ ಹತ್ತೂರು  ಗ್ರಾಮಗಳಿಗೆ   ಮಾನ್ಯ ಶಾಸಕರು ಜೊತೆ ಮಳೆಹಾನಿ  ಪರಿಶೀಲನೆ ಮಾಡುವಾಗ ಕೆಲವ ಅಸಹಜ  ಇರುವ ಮನೆಗಳಿಗೂ ಪರಿಹಾರ ಬರುವಂತೆ ಪ್ರಸ್ತಾವನೆ ಸಲ್ಲಿಸುವಂತೆ ನನಗೆ ಸೂಚಿಸಿದ್ದು, ನಾನು ಇದಕ್ಕೆ ವಿವರಣೆ ಕೊಡುವಾಗ  ಹೇಯ್  ಏನ್  ಮಾತನಾಡಬೇಡ ಎಂದು ನನಗೆ ಗದರಿಸಿ ಇದಕ್ಕೆ 30 ಮಾಡು ಇದಕ್ಕೆ 5 ಲಕ್ಷ ಮಾಡು ಎಂದು ಗದರಿಕೆ ದ್ವನಿಯಲ್ಲಿ ಹೇಳಿದರು. 

3 ಲಕ್ಷ ಮಾಡುವುದಾಗಲಿ 5 ಲಕ್ಷ ಮಾಡುವುದಾಗಲಿ ನನ್ನ ಕಾರ್ಯವ್ಯಾಪ್ತಿಗೆ  ಒಳಪಡುವುದಿಲ್ಲವಾದರೂ ಸಾರ್ವಜನಿಕರಿಗೆ ಗ್ರಾಮ ಲೆಕ್ಕಿಗರು ಕಡತ ತಯಾರಿಸಿ ವರದಿ ಮಾಡಿದರೆ  ನಿಮ್ಮ ಮನೆಗಳಿಗೆ  ಪರಿಹಾರದ ಹಣ ದೊರೆಯುತ್ತದೆ ಎಂದು ಸಾರ್ವಜನಿಕರಿಗೆ ಹೇಳಿ ಕೊಟ್ಟು  ನನ್ನ ವಿರುದ್ದ ಸಾರ್ವಜನಿಕರನ್ನು ಎತ್ತಿಕಟ್ಟುವ ಕೆಲಸವನ್ನು ಶಾಸಕರು ಮಾಡಿರುತ್ತಾರೆ.   ನನ್ನ ಕರ್ತವ್ಯದ ವ್ಯಾಪ್ತಿ ಗ್ರಾಮಗಳಲ್ಲಿ  ನನಗೆ ಕರ್ತವ್ಯ ನಿರ್ವಹಿಸುವಲ್ಲಿ   ಭಯ ಹುಟ್ಟು ಹಾಕುವ ಹಾಗು ಕಸಿವಿಸಿಗೊಳಿಸುವ ಪ್ರಯತ್ನ ಮಾಡಿರುತ್ತಾರೆ, ನಾನು ನನ್ನ ಕರ್ತವ್ಯವನ್ನು ಸುಗಮವಾಗಿ ಮಾಡಿಕೊಂಡು ಹೋಗಲು ಈ ರೀತಿಯ ಎಡರು ತೊಡರುಗಳನ್ನು  ಹೊನ್ನಾಳಿಯ  ಶಾಸಕರು ವಿನಾಃಕಾರಣ ಸೃಷ್ಟಿ ಮಾಡಿದ್ದಾರೆ.  

Hindu word Row: ಜಾರಕಿಹೊಳಿಯವರನ್ನ ಪಕ್ಷದಿಂದ ಉಚ್ಛಾಟಿಸಲಿ ಎಂದ ಎಂಪಿ ರೇಣುಕಾಚಾರ್ಯ

ಆದ್ದರಿಂದ  ಶಾಸಕರಾದ  ಎಂ.ಪಿ.ರೇಣುಕಾಚಾರ್ಯರ ವಿರುದ್ಧ ಸೂಕ್ತ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ  ಈ ದೂರು ಸಲ್ಲಿಸಿರುತ್ತೆನೆ.  ಠಾಣಾ ನೇರ ಅರ್ಜಿ ಸಂಖ್ಯೆ 537/2022 ರಲ್ಲಿ ನೊಂದಾಯಿಸಿಕೊಂಡು  ದೂರಿನ ಮೇರೆಗೆ ಕಲಂ: 186 ಐಪಿಸಿ ರಿತ್ಯ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಲು ಕೋರಿ ಠಾಣಾ ಸಿಪಿಸಿ 59  ರವರು  ಚಂದ್ರಕುಮಾರರವರೊಂದಿಗೆ ಕಳುಹಿಸಿಕೊಟ್ಟಿದ್ದು  ಸದರಿ ಸಿಪಿಸಿ 59 ರವರು ಈ ದಿನ ಸಂಜೆ 5.30 ಗಂಟೆಗೆ ಮಾನ್ಯ  ನ್ಯಾಯಾಲಯದಿಂದ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲು ಅನುಮತಿ ಪಡೆದುಕೊಂಡು ಬಂದ ಮೇರೆಗೆ ಠಾಣಾ ಗುನ್ನೆ ನಂ:169/2022 ಕಲಂ:186 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.

Follow Us:
Download App:
  • android
  • ios