Hindu word Row: ಜಾರಕಿಹೊಳಿಯವರನ್ನ ಪಕ್ಷದಿಂದ ಉಚ್ಛಾಟಿಸಲಿ ಎಂದ ಎಂಪಿ ರೇಣುಕಾಚಾರ್ಯ
ಹಿಂದೂ ಪದ ಪರ್ಶಿಯನ್ ಮೂಲವಾಗಿದ್ದು ಇದೊಂದು ಅಶ್ಲೀಲ ಅರ್ಥ ಬರುತ್ತೆಂಬ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ದ ಶಾಸಕ ಎಂಪಿ ರೇಣುಕಾಚಾರ್ಯ ಕೆಂಡಾಮಂಡಲವಾಗಿದ್ದಾರೆ.
ದಾವಣಗೆರೆ (ನ.8): ಹಿಂದೂ ಪದ ಪರ್ಶಿಯನ್ ಮೂಲವಾಗಿದ್ದು ಇದೊಂದು ಅಶ್ಲೀಲ ಅರ್ಥ ಬರುತ್ತೆಂಬ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ದ ಶಾಸಕ ಎಂಪಿ ರೇಣುಕಾಚಾರ್ಯ ಕೆಂಡಾಮಂಡಲವಾಗಿದ್ದಾರೆ. ಈ ಕ್ಷಣವೇ ಸತೀಶ್ ಜಾರಕಿಹೊಳಿಯವರನ್ನ ಪಕ್ಷದಿಂದ ಉಚ್ಛಾಟನೆ ಮಾಡಲಿ. ಜಾರಕಿಹೊಳಿ ಸಮಸ್ತ ಹಿಂದೂ ಧರ್ಮದವರ ಮುಂದೆ ಬಂದು ಕ್ಷಮೆ ಕೇಳಬೇಕು. ಹಿಂದೂ ಹಿಂದುತ್ವದ ವಿರುದ್ದ ಪದೇ ಪದೇ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಹಿಂದೂಗಳು ನಮ್ಗೆ ಓಟ್ ಹಾಕ್ಬೇಡಿ ಅಂತ ಬೇಕಾದ್ರೆ ನೇರವಾಗಿ ಹೇಳಿ. ಕಾಂಗ್ರೆಸ್ ಡಬಲ್ ಸ್ಟಾಂಡ್ ನ ವಹಿಸುತ್ತಿದ್ದಾರೆ ಯಾಕೆ. ಯಾವುದೋ ಒಂದು ಮತ ಧರ್ಮದ ಓಲೈಕೆ ರಾಜಕಾರಣ ನಡೆಸುತ್ತಿದ್ದಾರೆ. ನಾವು ಮುಸ್ಲಿಂ ವಿರೋಧಿ ಖಂಡಿತ ಅಲ್ಲ ಎಲ್ಲರೂ ಸಹ ಬಾಳ್ವೆಯಿಂದ ಬದುಕುತ್ತಿದ್ದೇವೆ. ಕಾಂಗ್ರೆಸ್ ನವರ ಸ್ಟೇಟ್ ಮೆಂಟ್ ಕೋಮು ಸೌಹಾರ್ದತೆಗೆ ದಕ್ಕೆ ತರುತ್ತಿದೆ. ರಾಹುಲ್ ಗಾಂಧಿಯ ಭಾರತ್ ಜೋಡೊ ಯಾತ್ರೆ ಮಾಡಿದ್ದು ಇದಕ್ಕೇನಾ? ಈಗ ಗೊತ್ತಾಗ್ತಾ ಇದೆ ಅದು ಜೋಡೊ ಯಾತ್ರೆಯಲ್ಲ ತೋಡೊ ಯಾತ್ರೆ ಎಂದು. ಕಾಂಗ್ರೆಸ್ ಪಕ್ಷದ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಏನು ಮಾತಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ದೇವಸ್ಥಾನದಲ್ಲಿ ತೀರ್ಥಪ್ರಸಾದ ಸೇವನೆ ಮಾಡಬೇಡಿ ಎಂಬ ಬಿ.ಟಿ ಲಲಿತಾ ನಾಯ್ಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯ ನೀಡಿರುವ ಶಾಸಕ ರೇಣುಕಾಚಾರ್ಯ, ತೀರ್ಥ ಪ್ರಸಾದ ಅನ್ನೋದು ಹಿಂದೂ ಸಂಸ್ಕೃತಿಯಲ್ಲಿ ಪವಿತ್ರವಾದ ಅಂಶ. ಇದನ್ನ ನಾವು ಕಣ್ಣಿಗೆ ಒತ್ತಿ ಪೂಜನಿಯವಾಗಿ ಸ್ವೀಕರಿಸುತ್ತೇವೆ. ಇಂತಹ ಹೇಳಿಕೆಗಳು ಬಹು ಸಂಖ್ಯಾತ ಹಿಂದೂಗಳಿಗೆ ದಕ್ಕೆ ತರುತ್ತೆ, ಈ ರೀತಿಯ ಹೇಳಿಕೆಗಳನ್ನ ಯಾರು ನೀಡಬಾರದು ಎಂದಿದ್ದಾರೆ
ಅಣ್ಣನ ಮಗನ ಸಾವಿನ ವಿಚಾರ: ಚಂದ್ರಶೇಖರ್ ಮರಣೋತ್ತರ ಪರೀಕ್ಷೆ ಇನ್ನು ಬಂದಿಲ್ಲ ಆ ರಿಪೋರ್ಟ್ ಗಾಗಿ ನಾವು ಕಾಯುತ್ತಿದ್ದೇವೆ. ನಾಳೆ ಮುಖ್ಯಮಂತ್ರಿಗಳು ಹೊನ್ನಾಳಿಗೆ ಬರಲಿದ್ದಾರೆ. ಈಗಾಗ್ಲೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವರು ಭೇಟಿ ಕೊಟ್ಟು. ಸಾಂತ್ವಾನ ಹೇಳಿದ್ದಾರೆ. ನಾಡಿದ್ದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಹ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಎಂದು ಮಾಹಿತಿ ನೀಡಿದ್ದರು. ಇನ್ನು ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರ ನಾನು ಸಚಿವ ಆಕಾಂಶಿ ಅಲ್ಲ.ನನಗೆ ನನ್ನ ಕ್ಷೇತ್ರವೇ ಮುಖ್ಯ ನ್ಯಾಮತಿ ಹೊನ್ನಾಳಿ ಅವಳಿ ತಾಲೂಕಿನ ಅಭಿವೃದ್ಧಿಗೆ ನಾನು ಬದ್ದನಾಗಿದ್ದೇನೆ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ನಿವಾಸದಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸತೀಶ ಜಾರಕಿಹೊಳಿ ಕ್ಷಮೆಯಾಚಿಸಲು ಸಚಿವೆ ಜೊಲ್ಲೆ ಆಗ್ರಹ
ಚಿಕ್ಕೋಡಿ: ಹಿಂದುತ್ವ ಎನ್ನುವುದು ಬಹುಜನರ ಧಾರ್ಮಿಕ ನಂಬಿಕೆ. ಬಹುಸಂಖ್ಯಾತರ ಭಾವನೆಗೆ ಜಾರಕಿಹೊಳಿ ಧಕ್ಕೆ ತಂದಿದ್ದಾರೆ. ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಹಿಂದೂ ಧರ್ಮದ ಕುರಿತಾಗಿ ನಿಪ್ಪಾಣಿಯಲ್ಲಿ ನೀಡಿದ ಹೇಳಿಕೆಗೆ ಪತ್ರಿಕಾ ಪ್ರಕಟಣೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಪೂರ್ವಜರು ನಂಬಿ, ಬಾಳಿ ಬದುಕಿದ ವ್ಯವಸ್ಥೆಯನ್ನೇ ಕೀಳಾಗಿ ಪ್ರತಿಬಿಂಬಿಸಿರುವ ಸತೀಶ ಜಾರಕಿಹೊಳಿಯವರ ಮನಸ್ಥಿತಿಯ ಬಗ್ಗೆ ನನಗೆ ವಿಷಾಧವಿದೆ. ಹಿಂದೂ ಧರ್ಮ ಮತ್ತು ನಮ್ಮ ಭಾರತದ ಇತಿಹಾಸದ ಬಗ್ಗೆ ಸತೀಶ ಜಾರಕಿಹೊಳಿಯವರು ಇನ್ನಷ್ಟು ತಿಳಿದುಕೊಳ್ಳುವ ಅವಶ್ಯಕತೆಯಿದೆ.
Satish Jarkiholi: ಜಾರಕಿಹೊಳಿ ಹೇಳಿಕೆ ವಿನಾಶ ಕಾಲೇ ವಿಪರೀತ ಬುದ್ದಿ; ಬಿಜೆಪಿ ಉಸ್ತುವಾರಿ ಅರುಣಸಿಂಗ್ ಖಂಡನೆ
ಒಂದು ಪಕ್ಷದ ಸಿದ್ಧಾಂತಗಳನ್ನು ವಿರೋಧಿಸುವ ಭರದಲ್ಲಿ ದೇಶದ ಅವಿಭಾಜ್ಯ ಅಂಗವಾಗಿರುವ ಹಿಂದುಗಳನ್ನು ಅವಹೇಳನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಕೆಲವೊಂದು ಹೇಳಿಕೆಗಳು ಕೇವಲ ಅವರ ವೈಯಕ್ತಿಕ ಮಟ್ಟವನ್ನು ತೋರಿಸುವುದಲ್ಲದೇ, ಅವರು ಪ್ರತಿನಿಧಿಸುವ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತವೆ. ಹಿಂದುತ್ವ ಎನ್ನುವುದು ಬಹುಜನರ ಧಾರ್ಮಿಕ ನಂಬಿಕೆ. ಬಹುಸಂಖ್ಯಾತರ ಭಾವನೆಗೆ ಜಾರಕಿಹೊಳಿ ಧಕ್ಕೆ ತಂದಿದ್ದಾರೆ. ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದಿದ್ದಾರೆ.
ಜಾರಕಿಹೊಳಿ ಹಿಂದೂ ಹೇಳಿಕೆಯನ್ನು ಖಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಸತೀಶ ಜಾರಕಿಹೊಳಿಯವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಇಂತಹ ಕೀಳುಮಟ್ಟದ ಹೇಳಿಕೆಯನ್ನು ನೀಡಿರುವ ಅವರು ಸಾರ್ವಜನಿಕವಾಗಿ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.