*  ವರ್ತೂರು ಪ್ರಕಾಶ್‌ ಸೇರಿ 100 ಮಂದಿ ವಿರುದ್ಧ ಪ್ರಕರಣ ದಾಖಲು*  ಮುಖಂಡರು, ಆಕಾಂಕ್ಷಿಗಳ ಸಭೆ ಕರೆದಿದ್ದ ವರ್ತೂರು ಪ್ರಕಾಶ್‌ *  ಸಭೆಯಲ್ಲಿ ಪಾಲ್ಗೊಂಡಿದ್ದ 200ಕ್ಕೂ ಅಧಿಕ ಮಂದಿ

ಕೋಲಾರ(ಆ.04): ಅನುಮತಿ ಪಡೆಯದೆ ಸಭೆ ಆಯೋಜನೆ, ಕೊರೋನಾ ಮಾರ್ಗಸೂಚಿಗಳ ಉಲ್ಲಂಘನೆ ದೂರಿನ ಹಿನ್ನೆಲೆಯಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಸೇರಿ ಐವರು ಮುಖಂಡರು ಸೇರಿ ಸುಮಾರು 100 ಮಂದಿ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣದಲ್ಲಿ ಮುಖಂಡ ಬೆಗ್ಲಿ ಪ್ರಕಾಶ್‌ ಮೊದಲ ಆರೋಪಿಯನ್ನಾಗಿ ಮಾಡಿದ್ದು, ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜಿನಪ್ಪ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಹಾಗೂ ಮಾಜಿ ಶಾಸಕ ವರ್ತೂರು ಆರ್‌. ಪ್ರಕಾಶ್‌ ಹಾಗೂ ಎ.ಎಫ್‌ ಕನ್ವೆನ್ಷನ್‌ ಹಾಲ್‌ನ ಮಾಲಿಕ ಸೇರಿ 80ರಿಂದ 100 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ವರ್ತೂರು ಪ್ರಕಾಶ್‌ ಕಿಡ್ನಾಪ್‌ ಪ್ರಕರಣ: 6 ಮಂದಿ ಬಂಧನ

ನಗರದ ಎ.ಎಫ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಸೋಮವಾರ ನರಸಾಪುರ ಜಿಪಂ ಮತ್ತು ತಾಪಂ ಕ್ಷೇತ್ರ ವ್ಯಾಪ್ತಿಯ ಮುಖಂಡರು, ಆಕಾಂಕ್ಷಿಗಳ ಸಭೆ ಕರೆದಿದ್ದರು. ಸಭೆಯಲ್ಲಿ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಕಾರ್ಯಕರ್ತರಿಗೆ ಭರ್ಜರಿ ಬಾಡೂಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಸಂಬಂಧ ಕಸಬಾ ಕಂದಾಯ ಅಧಿಕಾರಿ ವಿಜಯ್‌ದೇವ್‌ ದೂರು ನೀಡಿದ್ದರು.