ಬಸ್‌ ಪ್ರಯಾಣದ ವೇಳೆ ಪ್ರಯಾಣಿಕರು ಮತ್ತು ನಿರ್ವಾಹಕರಿಗೆ ಕಾಡುವ ಚಿಲ್ಲರೆಯ ರಗಳೆಗೆ ಕಡಿವಾಣ  ಸಾರಿಗೆ ಇಲಾಖೆ  ರಾಜ್ಯದಲ್ಲೇ ಮೊದಲ ಬಾರಿಗೆ  ಬೆಳಗಾವಿಯಲ್ಲಿ  ಹೈಟೆಕ್‌ ಇ-ಪೇಮೆಂಟ್‌ ತಂತ್ರಜ್ಞಾನ ಬಳಸಿಕೊಂಡು ಪ್ರಯಾಣಿಕರಿಗೆ ಪ್ರಿಪೇಯ್ಡ್‌ ಕಾರ್ಡ್‌ ಅನ್ನು ಪರಿಚಯಿಸಿದೆ.

ಬೆಳಗಾವಿ (ಆ.6) : ಬಸ್‌ ಪ್ರಯಾಣದ ವೇಳೆ ಪ್ರಯಾಣಿಕರು ಮತ್ತು ನಿರ್ವಾಹಕರಿಗೆ ಕಾಡುವ ಚಿಲ್ಲರೆಯ ರಗಳೆಗೆ ಕಡಿವಾಣ ಹಾಕಲೆಂದೇ ಸಾರಿಗೆ ಇಲಾಖೆ ಈಗ ಹೊಸ ಪ್ರಯತ್ನವೊಂದಕ್ಕೆ ಕೈಹಾಕಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬೆಳಗಾವಿ ನಗರದಲ್ಲಿ ಪ್ರಾಯೋಗಿಕವಾಗಿ ಹೈಟೆಕ್‌ ಇ-ಪೇಮೆಂಟ್‌ ತಂತ್ರಜ್ಞಾನ ಬಳಸಿಕೊಂಡು ಪ್ರಯಾಣಿಕರಿಗೆ ಪ್ರಿಪೇಯ್ಡ್‌ ಕಾರ್ಡ್‌ ಅನ್ನು ಪರಿಚಯಿಸಿದೆ.

ವಿಜಯಪುರ: ತುಂಬಿ ಹರಿದ ಸೇತುವೆ ಮೇಲೆ ಬಸ್ ಚಲಾಯಿಸಿ, ಚಾಲಕನ ದುಸ್ಸಾಹಸ!

ರೇಡಿಯೋ​ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ (radio frequency identification) ತಂತ್ರಜ್ಞಾನ ಆಧಾರಿತ ಸ್ಮಾರ್ಚ್‌ ಪ್ರಿಪೇಯ್ಡ್‌ ಕಾರ್ಡ್‌(Smart prepaid card)ಗಳನ್ನು ಬೆಳಗಾವಿ(Belagavi) ನಗರದಲ್ಲಿ ಈಗಾಗಲೇ (ಆ.2ರಂದು) ಬಿಡುಗಡೆ ಮಾಡಲಾಗಿದೆ. ಸದ್ಯ ಇದು ಪ್ರಾಯೋಗಿಕ ಹಂತದಲ್ಲಿದ್ದು, ಇದರ ಯಶಸ್ಸು ನೋಡಿಕೊಂಡು ಜಿಲ್ಲೆಯ ಇತರೆ ಭಾಗಗಳಲ್ಲಿ ಈ ಕಾರ್ಡ್‌ ಅನ್ನು ಪರಿಚಯಿಸಲು ಉದ್ದೇಶಿಸಲಾಗಿದೆ.

ಬಳಕೆದಾರರಿಗೆ ಶೇ.10ರಷ್ಟುಬೋನಸ್‌:

ಈಗಾಗಲೇ ಸಾರಿಗೆ ಸಂಸ್ಥೆ 200 ರೇಡಿಯೋ ​ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ (ಆರ್‌ಎಫ್‌ಐಡಿ) ತಂತ್ರಜ್ಞಾನ ಆಧಾರಿತ ಸ್ಮಾರ್ಚ್‌ ಪ್ರಿಪೇಯ್ಡ್‌ ಕಾರ್ಡ್‌ಗಳನ್ನು ಪ್ರಯಾಣಿಕರಿಗೆ ಉಚಿತವಾಗಿ ವಿತರಿಸಿದೆ. ಈ ಕಾರ್ಡಿಗೆ ಪ್ರಯಾಣಿಕರು ಆರ್‌ಎಫ್‌ಐಡಿ ಸಂಖ್ಯೆ ಬಳಸಿಕೊಂಡು ಕನಿಷ್ಠ .10ರಿಂದ ಗರಿಷ್ಠ .2000 ವರೆಗೆ ರೀಚಾಜ್‌ರ್‍ ಮಾಡಿಸಿಕೊಳ್ಳಬಹುದು. .250ಕ್ಕಿಂತ ಹೆಚ್ಚಿನ ರೀಚಾಜ್‌ರ್‍ ಮಾಡಿದರೆ ಶೇ.10ರಷ್ಟುಬೋನಸ್‌ ಕೂಡ ಸಿಗಲಿದೆ. ಈಗಾಗಲೇ ಈ ರೀತಿಯ ಕಾರ್ಡ್‌ ವ್ಯವಸ್ಥೆ ಬೆಂಗಳೂರಿನ ಮೆಟ್ರೋದಲ್ಲಿ ಜಾರಿಯಲ್ಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಖಾಸಗಿ ಬಸ್‌ಗಳು ಕೂಡ ಇದೇ ರೀತಿಯ ಕಾರ್ಡ್‌ಗಳನ್ನು ಕೋವಿಡ್‌ ನಂತರ ಪರಿಚಯಿಸಿವೆ.

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಶಾಲಾ ಬಸ್, ಮಕ್ಕಳು ಪ್ರಾಣಾಪಾಯದಿಂದ ಪಾರು

ಸದ್ಯ ಕೆಲ ಮಾರ್ಗಗಳಲ್ಲಿ ಜಾರಿ:

ಪ್ರಸ್ತುತ, ಈ ಆರ್‌ಎಫ್‌ಐಡಿ ಪ್ರಿಪೇಯ್ಡ್‌ ಕಾರ್ಡ್‌ಗಳನ್ನು ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದಿಂದ ವಡಗಾಂವಿ, ಯಳ್ಳೂರ ಮತ್ತು ಅನಗೋಳ ಮಾರ್ಗಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಒದಗಿಸಲಾಗುತ್ತಿದೆ. ಈ ಮಾರ್ಗಗಳಲ್ಲಿ 20 ಬಸ್‌ಗಳ ಕಂಡಕ್ಟರ್‌ಗಳಿಗೆ ಆರ್‌ಎಫ್‌ಐಡಿ ಕಾರ್ಡ್‌ಗಳನ್ನು ಸ್ಕ್ಯಾ‌ನ್‌ ಮತ್ತು ರೀಚಾಜ್‌ರ್‍ ಮಾಡುವ ಯಂತ್ರಗಳನ್ನು ಒದಗಿಸಲಾಗಿದೆ.

ಪ್ರಾಯೋಗಿಕವಾಗಿ ಜಾರಿ:

ಆರ್‌ಎಫ್‌ಐಡಿ ಕಾರ್ಡ್‌ಗಳಿಗೆ ಪ್ರಾಯೋಗಿಕವಾಗಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಚಾಲನೆ ನೀಡಲಾಗಿದೆ. ಮೊದಲ ಹಂತವಾಗಿ 200 ಕಾರ್ಡ್‌ಗಳನ್ನು ಮುದ್ರಣ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಈವರೆಗೆ 132 ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಈ ಪ್ರಯೋಗ ಯಶಸ್ವಿಯಾದ ನಂತರ ಬೆಳಗಾವಿ ಜಿಲ್ಲೆಯ ಎಲ್ಲ ಮಾರ್ಗಗಳಿಗೂ ವಿಸ್ತರಿಸಲಾಗುವುದು. ಬಳಿಕ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಈ ಕಾರ್ಯ ಯೋಜನೆಯನ್ನು ವಿಸ್ತರಿಸಲಾಗುವುದು. ಸದ್ಯ ಪ್ರತಿದಿನ 132 ಮಂದಿ ಪ್ರಯಾಣಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

-ಪಿ.ವೈ.ನಾಯಕ, ವಿಭಾಗೀಯ ನಿಯಂತ್ರಣಾಧಿಕಾರಿ, ಸಾರಿಗೆ ಸಂಸ್ಥೆ ಬೆಳಗಾವಿ