ಬೀದರ್(ಡಿ.05): ಬೀದರ್‌ ಜಿಲ್ಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದಾರೆ. ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೀದರ್ ಜಿಲ್ಲೆಯ ಮನ್ನಾಎಖ್ಖೇಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿಯ ನಿರ್ಣಾ ಕ್ರಾಸ್ ಹತ್ತಿರ ಇಂದು ಬೆಳಗ್ಗೆ 7ರ ಸುಮಾರಿಗೆ ಘಟನೆ ನಡೆದಿದೆ.

ಹೈದರಾಬಾದ್ ಕಡೆಯಿಂದ ಬರುತ್ತಿದ್ದ ಹುಂಡೈ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕಾರಿನಲ್ಲಿದ್ದ ಐದು ಜನರ ಪೈಕಿ ಒಬ್ಬರು ಸಜೀವ ದಹನವಾದ ಘಟನೆ ನಡೆದಿದೆ. ಕಾರಿನಲ್ಲಿದ್ದ ಎಲ್ಲರೂ ಹೈದ್ರಾಬಾದ್ ಮೂಲದವರು ಎಂದು ತಿಳಿದು ಬಂದಿದೆ.

ದೇವರ ರೂಪದಲ್ಲಿ ಬಂದ ಬೆಂಗ್ಳೂರು ಪೊಲೀಸ್ರು: ಸಾವಿನಿಂದ ನವ ದಂಪತಿ ಪಾರು...

ಮಂಜಾವದಲ್ಲಿ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ನೋಡುತ್ತಲೇ ಬೆಂಕಿ ಸಂಪೂರ್ಣ ಕಾರನ್ನು ಆವರಿಸಿಬಿಟ್ಟಿತ್ತು. ಕಾರಿನಲ್ಲಿ ಸುಮಾರು 5 ಜನರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಒಬ್ಬರು ಸಜೀವ ದಹನವಾಗಿದ್ದಾರೆ.

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!

ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರು  ಮಹಾರಾಷ್ಟ್ರದ ಉದಗೀರ ಆಸ್ಪತ್ರೆಗೆ ಹೋಗಿ ಹೈದ್ರಾಬಾದ್ ಹೋಗುವಾಗ ಚಿಟಗುಪ್ಪ ತಾಲೂಕಿನ ಮನ್ನಾಎಖೇಳ್ಳಿ ಹತ್ತಿರ ನಿರ್ಣಾ ಕ್ರಾಸಿನಲ್ಲಿ ಆಕಸ್ಮಿಕ ಕಾರಿಗೆ ಬೆಂಕಿ ಹತ್ತಿದೆ‌. ಕಲ್ಯಾಣಿ ಸ್ಥಳದಲ್ಲೇ ಸಜೀವದಹನವಾಗಿ ಮ್ರತಪಟ್ಟಿದ್ದಾರೆ. ಮನ್ನಾಎಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.