ಮುಧೋಳ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ
ಕಾರಿಗೆ ಡಿಕ್ಕಿ ಹೊಡೆದ ಕೆಎಸ್ ಆರ್ ಟಿಸಿ ಬಸ್| ನಾಲ್ವರ ಸಾವು| ಮುಧೋಳ ತಾಲೂಕಿನ ಶಿರೋಳ ಬಳಿ ವಿಜಯಪುರ -ಧಾರಾವಾಡ ರಾಜ್ಯ ಹೆದ್ದಾರಿಯಲ್ಲಿ ನಡೆದ ಘಟನೆ|ಮೃತರೆಲ್ಲರು ಖಾಜಿ ಬೀಳಗಿ ಗ್ರಾಮದವರು|
ಬಾಗಲಕೋಟೆ[ಜ.03]: ಕಾರಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾ ರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಬಳಿ ವಿಜಯಪುರ -ಧಾರಾವಾಡ ರಾಜ್ಯ ಹೆದ್ದಾರಿಯಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಹನುಮಂತ(21), ರಿಯಾಜ್(25) , ಬಾಲಪ್ಪ(34), ಸಿದ್ದರಾಯ(34) ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮೃತರೆಲ್ಲರು ಖಾಜಿ ಬೀಳಗಿ ಗ್ರಾಮದವರು ಎಂದು ತಿಳಿದು ಬಂದಿದೆ. ಖಾಜಿ ಬೀಳಗಿಯಿಂದ ಧಾರವಾಡಕ್ಕೆ ನ್ಯಾಯಾಲಯಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಕೆಎಸ್ ಆರ್ ಟಿಸಿ ಬಸ್ ಬೆಳಗಾವಿಯಿಂದ ಮುಧೋಳ ಮಾರ್ಗವಾಗಿ ಕಲಬುರಗಿಗೆ ಹೊರಟಿತ್ತು.