ಮಂಗಳೂರು (ಸೆ.02): ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬಾವಿಗೆ ಬಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಾವು ಬಳಿ ದುರ್ಘಟನೆ ನಡೆದಿದ್ದು, ಪತಿ ಪತ್ನಿ ಹಾಗೂ ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ.  

ಕಾವು ಬಳಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲೇ ಇದ್ದ  20 ಅಡಿ ಆಳದ ಬಾವಿಗೆ ಕಾರು ಉರುಳಿ ಬಿದ್ದಿದೆ. 

ಭಾರೀ ಮಳೆಯಿಂದ ಬಾವಿ ಸಂಪೂರ್ಣ ತುಂಬಿದ್ದು ಅವಘಡಕ್ಕೆ ಕಾರಣವಾಗಿದೆ. 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ‌ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರನ್ನು ಮೇಲೆತ್ತಿದ್ದಾರೆ.