ಕೋಲಾರ [ಸೆ.14] : ಆಂಧ್ರ-ಕರ್ನಾಟಕ ಗಡಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು  ಕಾರು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಐವರು ಸಜೀವ ದಹನವಾಗಿದ್ದಾರೆ.ಕೋಲಾರ ಜಿಲ್ಲೆಯ ಗಂಗಾವರಂ ಬಳಿ ಆಗಮಿಸುತ್ತಿದ್ದ ವೇಳೆ  ಎರ್ಟಿಗಾ ಕಾರು ಪಲ್ಟಿಯಾಗಿದೆ. ಈ ವೇಳೆ ಏಕಾ ಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಗಳೂರು ಮೂಲದ ಐವರು ಸಾವಿಗೀಡಾಗಿದ್ದಾರೆ. 

"

ತಿರುಪತಿಗೆ ತೆರಳಿದ್ದ ಕುಟುಂಬ  ತಿಮ್ಮಪ್ಪನ ದರ್ಶನ ಪಡೆದು ವಾಪಸ್ಸಾಗುವಾಗ ಆಂಧ್ರದ ಗಡಿ ಭಾಗದಲ್ಲಿ ಅವಘಡ  ಸಂಭವಿಸಿದೆ.ತಾಯಿ ಹಾಗೂ ಮೂವರು ಮಕ್ಕಳು ಸೇರಿ ಒಟ್ಟು ಒಂದೇ ಕುಟುಂಬದ ಐವರು ಸಜೀವ ದಹನವಾಗಿದ್ದರೆ, ಓರ್ವ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ