Kodagu: ಮಹಿಳೆಯ ಕೊಂದಿದ್ದ ದಕ್ಷ ಹೆಸರಿನ ಒಂಟಿ ಸಲಗ ಸೆರೆ ಹಿಡಿದ ಅರಣ್ಯ ಇಲಾಖೆ!
ಕಳೆದ ಕೆಲವು ತಿಂಗಳಿನಿಂದ ಪದೇ ಪದೇ ತೋಟ, ಹೊಲಗದ್ದೆಗಳಿಗೆ ನುಗ್ಗುತ್ತಿದ್ದ ಮತ್ತು ಜನವಸತಿ ಪ್ರದೇಶಗಳಿಗೂ ಲಗ್ಗೆ ಇಡುತ್ತಿದ್ದ 22 ವಯಸ್ಸಿನ ದಕ್ಷ ಹೆಸರಿನ ಒಂಟಿಸಲಗವನ್ನು ಕೊಡಗು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.15): ಕಳೆದ ಕೆಲವು ತಿಂಗಳಿನಿಂದ ಪದೇ ಪದೇ ತೋಟ, ಹೊಲಗದ್ದೆಗಳಿಗೆ ನುಗ್ಗುತ್ತಿದ್ದ ಮತ್ತು ಜನವಸತಿ ಪ್ರದೇಶಗಳಿಗೂ ಲಗ್ಗೆ ಇಡುತ್ತಿದ್ದ 22 ವಯಸ್ಸಿನ ದಕ್ಷ ಹೆಸರಿನ ಒಂಟಿಸಲಗವನ್ನು ಕೊಡಗು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ, ಚೊಟ್ಟೆಪಾರೆ, ಚೆನ್ನಯ್ಯನ ಕೋಟೆ ಮತ್ತು ಕರಡಿಗೋಡು ಸೇರಿದಂತೆ ಆ ಭಾಗದ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಾ, ಒಂಟಿಯಾಗಿ ಎಲ್ಲೆಡೆ ಜನವಸತಿ ಪ್ರದೇಶದಲ್ಲಿ ಪ್ರತ್ಯಕ್ಷವಾಗುತ್ತಿದ್ದ ದಕ್ಷ ಹೆಸರಿನ ಕಾಡಾನೆಯನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದಿದೆ.
ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ಕಾರ್ಮಿಕ ವೃದ್ಧೆಯೊಬ್ಬರ ಮೇಲೆ ದಾಳಿ ಮಾಡಿ ಕೊಂದಿತ್ತು. ಹೀಗಾಗಿ ಕಾಡಾನೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಮಂಗಳವಾರದಿಂದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ನಿನ್ನೆ ಇಡೀ ದಿನ ಈ ಆನೆಯನ್ನು ಪತ್ತೆ ಹಚ್ಚಿ ಅರಿವಳಿಕೆ ನೀಡಲು ಪ್ರಯತ್ನಿಸಿತ್ತು. ಆದರೆ ನಿನ್ನೆ ಸಾಧ್ಯವಾಗಿರಲಿಲ್ಲ. ಬುಧವಾರ ಬೆಳಿಗ್ಗೆಯಿಂದಲೇ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಕೆ ಸಿಬ್ಬಂದಿ ಕೊನೆಗೂ ಇಂದು ಅವರೆಗುಂದ ಸಂರಕ್ಷಿತಾ ಅರಣ್ಯ ಪ್ರದೇಶದ ಫಯಾಜ್ ಖಂಡಿ ಎಂಬಲ್ಲಿ ಶಾರ್ಫ್ ಶೂಟರ್ ಕೆ.ಪಿ. ರಂಜನ್ ಅರಿವಳಿಕೆ ನೀಡಿದರು.
ಭಾರೀ ಬಿಸಿಲು: ವೀಕೆಂಡ್‌ನಲ್ಲೂ ವಿಶ್ವವಿಖ್ಯಾತ ಹಂಪಿಯತ್ತ ಸುಳಿಯದ ಪ್ರವಾಸಿಗರು!
ಕೊನೆಗೆ ಅಲ್ಲಿಂದ ಅರ್ಧ ಕಿ.ಲೋ ಮೀಟರ್ ದೂರದವರೆಗೆ ಸಾಗಿದ ಕಾಡಾನೆ ಪ್ರಜ್ಞೆತಪ್ಪಿ ಬಿದ್ದಿತು. ಬೀಳುತ್ತಿದ್ದಂತೆ ಕಾಡಾನೆಗೆ ದೊಡ್ಡ ದೊಡ್ಡ ಹಗ್ಗಗಳನ್ನು ಕಟ್ಟಲಾಯಿತು. ನಂತರ ಆನೆ ಎಚ್ಚರಗೊಳ್ಳುತ್ತಿದ್ದಂತೆ, ಸಾಕಾನೆಗಳಾದ ಮಹೇಂದ್ರ, ಭೀಮ, ಹರ್ಷ ಮತ್ತು ಧನಂಜಯ ಆನೆಗಳು ಹಿಂದೆ ಮುಂದೆ ನಿಂತು ದಕ್ಷ ಕಾಡಾನೆಯನ್ನು ಎಳೆದು ತರಲಾಯಿತು. ಎಷ್ಟೋ ಭಾರಿ ಮಹೇಂದ್ರ ಆನೆ ಎಷ್ಟೇ ಎಳೆದರೂ ದಕ್ಷ ಕಾಡಾನೆ ಮುಂದೆ ಬರುತ್ತಿರಲಿಲ್ಲ.
ಆದರೂ ಮಹೇಂದ್ರ ಎಳೆದಂತೆ ಹಿಂದಿನಿಂದ ಧನಂಜಯ, ಹರ್ಷ ಮತ್ತು ಭೀಮ ಆನೆಗಳು ನೂಕುತ್ತಲೇ ರಸ್ತೆ ಭಾಗಕ್ಕೆ ಕರೆತಂದವು. ನಂತರ ಅಲ್ಲಿಯೇ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಯಿತು. ಅದಾದ ಬಳಿಕ ಲಾರಿಯಲ್ಲಿ ಇದ್ದ ಕ್ರಾಲ್ಗೆ ಅದನ್ನು ತುಂಬಲು ಬಹಳ ಪ್ರಯತ್ನ ಮಾಡಲಾಯಿತು. ಕ್ರೇನ್ ಬಳಸಿ ಕ್ರಾಲ್ಗೆ ಆನೆಯನ್ನು ತುಂಬುವುದಕ್ಕಾಗಿ ಬೆಲ್ಟ್ ಕಟ್ಟಲು ಯತ್ನಿಸಿದಂತೆಲ್ಲಾ ಅದು ಬೆಲ್ಟ್ ಅನ್ನು ಕಿತ್ತೆಸುಯುತ್ತಲೇ ಇತ್ತು. ಆದರೆ ಭೀಮ ಮತ್ತು ಹರ್ಷ ಆನೆಗಳು ನಿಂತು ಅದನ್ನು ಅತ್ತ ಇತ್ತ ಅಲುಗಾಡದಂತೆ ಬಿಗಿಯಾಗಿ ನಿಲ್ಲಿಸಿದ್ದವು. ಆದರೂ ಒಮ್ಮೊಮ್ಮೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಲು ಯತ್ನಿಸುತ್ತಲೇ ಇತ್ತು.
ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ: ಪತಿಯನ್ನು ದೊಣ್ಣೆಯಲ್ಲಿ ಹೊಡೆದು ಕೊಂದ ಪತ್ನಿ
ಕೊನೆಗೂ ಹೇಗೋ ಕಷ್ಟಪಟ್ಟು ಬೆಲ್ಟ್ ಕಟ್ಟಿ ಲಾರಿಗೆ ಆನೆಯನ್ನು ತುಂಬಲು ಯತ್ನಿಸುತ್ತಿದ್ದಾಗ ಒಮ್ಮೆ ಸಾರ್ವಜನಿಕರ ಮೇಲೂ ಅಟ್ಯಾಕ್ ಮಾಡಲು ಯತ್ನಿಸಿತು. ತಕ್ಷವೇ ಎಚ್ಚೆತ್ತುಕೊಂಡ ಭೀಮ ಆನೆ ದಕ್ಷ ಕಾಡಾನೆ ಮೇಲೆ ತಿರುಗಿ ಅಟ್ಯಾಕ್ ಮಾಡಲು ಮುಂದಾಯಿತು. ಆಗ ದಕ್ಷ ಆನೆ ಸುಮ್ಮನಾಯಿತು. ನಂತರ ಕಾಡಾನೆಯನ್ನು ಲಾರಿ ಹತ್ತಿಸಲು. ಒಟ್ಟಿನಲ್ಲಿ ಕೆಲವು ತಿಂಗಳುಗಳಿಂದ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಾ ಇತ್ತೀಚೆಗೆ ಓರ್ವ ವೃದ್ಧೆಯನ್ನು ಕೊಂದಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದೆ.