Asianet Suvarna News Asianet Suvarna News

ಡಿಕೆಶಿಗಾಗಿ ಕಾನೂನು ಬದಲಾಯಿಸೋಕಾಗಲ್ಲ: ಶ್ರೀರಾಮುಲು

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು ಈ  ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಪ್ರತಿಕ್ರಿಯಿಸಿದ್ದಾರೆ. ಡಿಕೆಶಿಗಾಗಿ ಕಾನೂನು ಬದಲಾಯಿಸಲು ಸಾಧ್ಯವಿಲ್ಲ. ಜನರು ಸಾರ್ವಜನಿಕ ಆಸ್ತಿ ನಷ್ಟ ಮಾಡದೆ ಪ್ರತಿಭಟನೆ ಮಾಡಬೇಕು ಎಂದಿದ್ದಾರೆ.

Cant change the law for dk shivakumar says B Sriramulu
Author
Bangalore, First Published Sep 11, 2019, 4:14 PM IST

ಚಿತ್ರದುರ್ಗ(ಸೆ.11): ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು ಈ  ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಪ್ರೆತಿಕ್ರಿಯಿಸಿದ್ದಾರೆ.

ಬೆಂಗಳೂರು ಸೇರಿದಂತೆ ಹಲವೆಡೆ ಡಿಕೆಶಿ ಪರವಾಗಿ ಪ್ರತಿಭಟನೆ ನಡೆಯುತ್ತಿದ್ದು, ಈ ಬಗ್ಗೆ ಶ್ರೀರಾಮುಲು ಮಾತನಾಡಿದ್ದಾರೆ. ಈ  ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿಗಾಗಿ ಕಾನೂನು ಬದಲಾಯಿಸಲು ಸಾಧ್ಯವಿಲ್ಲ. ಜನರು ಸಾರ್ವಜನಿಕ ಆಸ್ತಿ ನಷ್ಟ ಮಾಡದೆ ಪ್ರತಿಭಟನೆ ಮಾಡಬೇಕು ಎಂದಿದ್ದಾರೆ.

ನನ್ನನ್ನು ಯಾರೂ ಆಹ್ವಾನಿಸಿಲ್ಲ : ಅದಕ್ಕೆ ಪ್ರತಿಭಟನೆಗೆ ಹೋಗಿಲ್ಲ

ಇತಿಹಾಸ ತೆಗೆದು ನೋಡಲಿ, ರಾಜ್ಯದಲ್ಲಿ ಅನೇಕ ದಾಳಿ ಆಗಿವೆ. ಕಾನೂನು ಎಲ್ಲರಿಗೂ ಒಂದೇ. ಒಬ್ಬರಿಗೊಂದು ಎಂಬ ನೀತಿಯಿಲ್ಲ. ಕಾನೂನು ಇವತ್ತು ಎತ್ತರದ ಮಟ್ಟದಲ್ಲಿ ಇದೆ. ಡಿ.ಕೆ.ಶಿವಕುಮಾರ್ ಗಾಗಿ ಕಾನೂನು ಬದಲಾಯಿಸಲಾಗದು. ಕಾನೂನು ರೀತಿ ಏನಾಗಬೇಕು ಅದೆಲ್ಲವೂ ಆಗುತ್ತಿದೆ ಎಂದಿದ್ದಾರೆ.

ಡಿಕೆಶಿ ಬಂಧನ ವಿರೋಧಿಸಿ ರ‍್ಯಾಲಿ: BMTC ಬಸ್‌ಗೆ ಬಿತ್ತು ಕಲ್ಲು!

ಕಾನೂನು ಬಗ್ಗೆ ಮಾತಾಡಿ ನಾನು ದೊಡ್ಡಸ್ತಿಕೆ ತೋರಿಸಲ್ಲ. ಡಿಕೆಶಿ ಬಂಧನದಿಂದ ನೋವಾಗಿ ಅವರ ಅಭಿಮಾನಿಗಳು ಹೋರಾಟ ಮಾಡುತ್ತಿರಬಹುದು. ಸಾರ್ವಜನಿಕ ಆಸ್ತಿ ನಷ್ಟ ಮಾಡದೆ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

Follow Us:
Download App:
  • android
  • ios