ರಾಯಚೂರು: ಗೇಟ್ ಮುರಿದು ನದಿ ಸೇರುತ್ತಿರುವ ನಾಲೆ ನೀರು
ಸಂಸದರ ಸ್ವಗ್ರಾಮ ಗುಂತಗೋಳ, ಪರಾಂಪುರ, ದೇವರಬೂಪುರ, ರಾಮಲೂಟಿ, ಐದಬಾವಿ ಸೇರಿದಂತೆ 3-4 ಸಾವಿರ ಎಕರೆ ಪ್ರದೇಶಕ್ಕೆ ನಾರಾಯಣಪುರ ಬಲದಂಡೆ ಮುಖ್ಯ ನಾಲೆಯ ವಿತರಣಾ ನಾಲೆ ಸಂಖ್ಯೆ 7ರಿಂದ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ಬೇಸಿಗೆಯಲ್ಲಿಯೇ 7 ವಿತರಣಾ ನಾಲೆಯ ಗೇಟ್ ಮುರಿದಿದೆ. ಆದರೆ ನೀರಾವರಿ ಇಲಾಖೆ ಇಂಜಿನಿಯರ್‌ಗಳ ನಿರ್ಲಕ್ಷದಿಂದ ಗೇಟ್ ದುರಸ್ತಿ ಸಾಧ್ಯವಾಗಿಲ್ಲ.
ಲಿಂಗಸುಗೂರು(ಆ.18): ತಾಲೂಕಿನ ಕೃಷ್ಣಾ ಮೇಲ್ದಂಡೆ ಯೋಜನೆ ನಾರಾಯಣಪುರ ಬಲದಂಡೆ ನಾಲೆಯ ವಿತರಣಾ ನಾಲೆ ಸಂಖ್ಯೆ7ರ ಗೇಟ್ ಕಿತ್ತು ಅಪಾರ ಪ್ರಮಾಣದ ನೀರು ಒಂದು ತಿಂಗಳಿಂದ ಹಳಕ್ಕೆ ಹರಿಯುತ್ತಿದ್ದು, ಇದು ಬಲದಂಡೆ ನಾಲೆಯ ಇಂಜಿನಿಯರ್‌ಗಳ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.
ಸಂಸದರ ಸ್ವಗ್ರಾಮ ಗುಂತಗೋಳ, ಪರಾಂಪುರ, ದೇವರಬೂಪುರ, ರಾಮಲೂಟಿ, ಐದಬಾವಿ ಸೇರಿದಂತೆ 3-4 ಸಾವಿರ ಎಕರೆ ಪ್ರದೇಶಕ್ಕೆ ನಾರಾಯಣಪುರ ಬಲದಂಡೆ ಮುಖ್ಯ ನಾಲೆಯ ವಿತರಣಾ ನಾಲೆ ಸಂಖ್ಯೆ 7ರಿಂದ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ಬೇಸಿಗೆಯಲ್ಲಿಯೇ 7 ವಿತರಣಾ ನಾಲೆಯ ಗೇಟ್ ಮುರಿದಿದೆ. ಆದರೆ ನೀರಾವರಿ ಇಲಾಖೆ ಇಂಜಿನಿಯರ್‌ಗಳ ನಿರ್ಲಕ್ಷದಿಂದ ಗೇಟ್ ದುರಸ್ತಿ ಸಾಧ್ಯವಾಗಿಲ್ಲ. ಪರಿಣಾಮ ನೀರು ಹಳ್ಳಕ್ಕೆ ಹರಿಯುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಮಳೆ ಬಾರದೇ ಬೆಳೆ ಒಣಗುವ ಹಂತದಲ್ಲಿ ಇದ್ದು, ನಾಲೆಯ ನೀರು ಹಾಯಿಸಿ ನೀರು ಹರಿಸಬೇಕೆಂಬ ರೈತರ ಕನಸು ನುಚ್ಚುನೂರಾಗಿದೆ.
SRI RAGHAVENDRA SWAMY MUTT : ಆಗಸ್ಟ್ 29 ರಿಂದ ಸೆಪ್ಟೆಂಬರ್ 4ರವರೆಗೆ ರಾಯರ ಆರಾಧನಾ ಮಹೋತ್ಸವ
ವಿತರಣಾ ನಾಲೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ರೈತರ ಜಮೀನುಗಳಿಗೆ ನುಗ್ಗಿದರೆ ತೊಂದರೆ ಆದಿತೆಂದು ಅರಿತು ಇಂಜಿನಿಯರ್‌ಗಳು ಕಳ್ಳ ಮಾರ್ಗದ ಮೂಲಕ ಅಪಾರ ಪ್ರಮಾಣ ನೀರು ಕೃಷ್ಣಾನದಿಗೆ ಹರಿ ಬಿಡಲಾಗಿದೆ. ಪರಾಂಪುರ ರೈತನ ಜಮೀನಿಗೆ ನೀರು ನುಗ್ಗಿದ್ದು, ಬೆಳೆ ಹಾಳಾಗಿದೆ ಎಂದು ರೈತ ಆರೋಪಿಸಿದ್ದಾರೆ
ನಾಲೆ ಸಂಖ್ಯೆ 7ರ ಗೇಟ್ ಮುರಿದು ಹಲವು ತಿಂಗಳುಗಳೇ ಉರುಳಿವೆ. ಸಂಸದ ರಾಜಾ ಅಮರೇಶ್ವರ ನಾಯಕರ ಸ್ವಗ್ರಾಮದಲ್ಲಿಯೇ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಈ ಕುರಿತು ಗಮನಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಾರಾಯಣಪುರ ಬಲದಂಡೆ ನಾಲೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುವ ಮೊದಲೇ ಗೇಟ್ ಕಿತ್ತು ಹೋಗಿರುವ ಬಗ್ಗೆ ರೈತರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸರಿಪಡಿಸದ ಕಾರಣ ಜಮೀನಿಗೆ ಹರಿಯಬೇಕಾದ ನೀರು ಹಳ್ಳದ ಮೂಲಕ ಕೃಷ್ಣಾನದಿ ಸೇರುತ್ತಿದೆ.
ಗುಂತಗೋಳ, ಪರಾಂಪುರ, ರಾಮಲೂಟಿ, ಐದಬಾವಿ ಸೇರಿದಂತೆ ರೈತರ ಜಮೀನುಗಳಿಗೆ ನೀರು ಹರಿಸುವ ವಿತರಣಾ ನಾಲೆ ಗೇಟ್ ಮುರಿದ ಹೋದ ಬಗ್ಗೆ ನಾರಾಯಣಪುರ ಬಲದಂಡೆ ನಾಲೆ ನಿರ್ವಹಣೆ ಮಾಡುವ ಎಂಜಿನಿಯರ್‌ಗಳ ಗಮನಕ್ಕೆ ತಂದರೂ ದುರಸ್ತಿ ಮಾಡಿಲ್ಲ. ಇದರಿಂದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯದೇ ನದಿಗೆ ಸೇರುತ್ತಿದೆ ಎಂದು ಪರಾಂಪುರ ಗ್ರಾಮದ ರೈತ ನಂದಪ್ಪ ತಿಳಿಸಿದ್ದಾರೆ.