Nandi Hills: ನಂದಿ ಗಿರಿಧಾಮಕ್ಕೂ ಬಂತು ಆನ್‌ಲೈನ್‌ ಟಿಕೆಟ್‌ ಬುಕಿಂಗ್‌..!

*  ಪ್ರವಾಸಿಗರಿಗೆ ಅನುಕೂಲವಾಗುವಂತೆ ಕೊನೆಗೂ ಆನ್‌ಲೈನ್‌ ಬುಕ್ಕಿಂಗ್‌ ಸಾಫ್ಟ್‌ವೇರ್‌ ಅಳವಡಿಕೆ
*  ಬೆರಳ ತುದಿಯಲ್ಲಿ ಟಿಕೆಟ್‌ ಬುಕ್ಕಿಂಗ್‌ 
*  ಎರಡು ಅವಧಿಯಲ್ಲಿ ಪ್ರವೇಶ

Can Online ticket booking to Nandi Hills in Chikkaballapur grg

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ(ಫೆ.16):  ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ(Nandi Hills) ಇನ್ನು ಮುಂದೆ ನೂರಾರು ಕಿಮೀ ದೂರದಿಂದ ಬರುವರು ಮುಗಂಡವಾಗಿ ಆನ್‌ಲೈನ್‌(Online) ಮೂಲಕ ಟಿಕೆಟ್‌ ಬುಕ್ಕಿಂಗ್‌ ಮಾಡದೇ ನೀವು ಗಿರಿಧಾಮ ನೋಡಲು ಹೊರಟರೆ ಖಂಡಿತ ಗಿರಿಧಾಮ ವೀಕ್ಷಣೆಗೆ ಪ್ರವೇಶ ಸಿಗದೇ ನಿಮಗೆ ನಿರಾಸೆ ಎದುರಾಗಬಹುದು.

ಹೌದು, ರಾಜ್ಯ ಪ್ರವಾಸ್ಯೋದ್ಯಮ ಅಭಿವೃದ್ದಿ ನಿಗಮವು(State Tourism Development Corporation) ಕೊನೆಗೂ ಪ್ರವಾಸಿಗರಿಗೆ(Tourists) ನಂದಿಗಿರಿಧಾಮದ ಪ್ರವೇಶವನ್ನು ತಮ್ಮ ಬೆರಳತುದಿಯಲ್ಲಿ ಖಚಿತಪಡಿಸಿಕೊಳ್ಳಲು ಅನುಕೂಲವಾಗುವಂತೆ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಗೆ(Ticket Booking) ಹೊಸ ಸಾಫ್ಟ್‌ವೇರ್‌ ಅಳವಡಿಸಿದೆ. ಇನ್ಮೇಲೆ ಗಿರಿಧಾಮ ವೀಕ್ಷಣೆಗೆ ಬರುವರು ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌ ಮಾಡಿ ತಮ್ಮ ಪ್ರವೇಶ ಖಾತ್ರಿಪಡಿಸಿಕೊಳ್ಳಬಹುದು.

Nandi Hill Rope way ನಂದಿಗಿರಿಗೆ ರೋಪ್‌ ವೇ ನಿರ್ಮಾಣಕ್ಕೆ ರೂಪು ರೇಷೆ

ಆನ್‌ಲೈನ್‌ ಬುಕಿಂಗ್‌ ಆರಂಭ

ನಂದಿಗಿರಿಧಾಮ ಲಕ್ಷಾಂತರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅದರಲ್ಲೂ ಶನಿವಾರ, ಭಾನುವಾರ ಸುಮಾರು 18 ರಿಂದ 20 ಸಾವಿರದಷ್ಟು ಪ್ರವಾಸಿಗರು ನಂದಿಗಿರಿಧಾಮ ಪ್ರಾಕೃತಿಕ ಸೌಂದರ್ಯ(Beauty of Nature) ಸವಿಯಲೆಂದು ರಾಜ್ಯ, ಹೊರ ರಾಜ್ಯಗಳಿಂದ ಬರುತ್ತಾರೆ. ಹೀಗಾಗಿ ಪ್ರವಾಸಿಗರಿಗೆ ನಂದಿಗಿರಿಧಾಮದ ಪ್ರವೇಶ ಸುಲಭ ಆಗಬೇಕು, ಬೆರಳ ತುದಿಯಲ್ಲಿ ಟಿಕೆಟ್‌ ಬುಕ್ಕಿಂಗ್‌ ಆಗಿ ಪ್ರವಾಸಿಗರ ಪ್ರವಾಸ(Tour) ಪ್ರಯಾಸ ಆಗದಂತೆ ಇರಬೇಕೆಂಬ ಉದ್ದೇಶದಿಂದ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಫೆ.14 ರಿಂದ ಆನ್‌ಲೈನ್‌ ಮೂಲಕ ಗಿರಿಧಾಮಕ್ಕೆ ಬರುವರಿಗೆ ಟಿಕೆಟ್‌ ಬುಕ್ಕಿಂಗ್‌ ಅವಕಾಶ ಕಲ್ಪಿಸಿದೆ.

ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಮೂಲಕ ನಿತ್ಯ ಪ್ರವಾಸಿಗರ ಪ್ರವೇಶಕ್ಕೆ ಮಿತಿ ಹೇರಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ನಂದಿಬೆಟ್ಟದಲ್ಲಿ ಹೆಚ್ಚಿನ ಜನದಟ್ಟಣೆಯಿಂದಾಗಿ ವಾಹನಗಳ ಸಂಚಾರ ಹೆಚ್ಚಾಗಿ ಇದರಿಂದ ಗಿರಿಧಾಮದ ಕಿರಿದಾದ ರಸ್ತೆ ತಿರುವುಗಳಲ್ಲಿ ಉಂಟಾಗುತ್ತಿದ್ದ ವಾಹನ ಸಂಚಾರ ದಟ್ಟಣೆ ಹಾಗೂ ಪರಿಸರದ ಮೇಲೆ ಉಂಟಾಗುತ್ತಿದ್ದ ಒತ್ತಡ ಆಗುತ್ತಿರುವುದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಪ್ರವಾಸೋದ್ಯಮ ನಿಗಮದ ವೆಬ್‌ಸೈಟ್‌ನಲ್ಲಿ ಹೊಸದಾಗಿ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಸಾಫ್ಟ್‌ವೇರ್‌ ಅಭಿವೃದ್ದಿಗೊಳಿಸಿ ಅಳವಡಿಸಲಾಗಿದೆ.

ಹೀಗಾಗಿ ವಾರಾಂತ್ಯದಲ್ಲಿ(Weekend) ಗಿರಿಧಾಮದಲ್ಲಿ ಆಗುತ್ತಿದ್ದ ಟ್ರಾಫಿಕ್‌ ಜಾಮ್‌ ಕಿರಿಕಿರಿ ಜೊತೆಗೆ ಬೆಟ್ಟದ ಮೇಲೆ ಆಗುತ್ತಿದ್ದ ಪಾರ್ಕಿಂಗ್‌ ಸಮಸ್ಯೆಯನ್ನು ಬಗೆಹರಿಸಲು ಈ ವ್ಯವಸ್ಥೆ ಹೆಚ್ಚಿನ ಸಹಾಯವಾಗಲಿದೆ.

ಕೊಚ್ಚಿ ಹೋಗಿದ್ದ ನಂದಿ ಬೆಟ್ಟ ರಸ್ತೆ ಪುನರ್ ನಿರ್ಮಾಣ ಚುರುಕು

ಆನ್‌ಲೈನ್‌ ಬುಕ್ಕಿಂಗ್‌ ವಿಳಾಸ

ನಂದಿ ಗಿರಿಧಾಮಕ್ಕೆ ನೀವು ತೆರಳಬೇಕಾದರೆ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಗಾಗಿ www.kstdc.co ವೆಬ್‌ಸೈಟ್‌ಗೆ ಪ್ರವಾಸಿಗರು ಮುಗಂಡವಾಗಿ ಬೇಟಿ ಕೊಡಬಹುದು. ಅಥವ ದೂರವಾಣಿ ಸಂಖ್ಯೆ 080-4334-4334/35, 8970650070/8970650075 ಸಂಪರ್ಕಿಸಬಹುದಾಗಿದೆಯೆಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಜಗದೀಶ್‌ ತಿಳಿಸಿದ್ದಾರೆ.

ಎರಡು ಅವಧಿಯಲ್ಲಿ ಪ್ರವೇಶ

ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿರುವ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಪ್ರತಿ ನಿತ್ಯ ಗಿರಿಧಾಮಕ್ಕೆ ಆಗಮಿಸುವ ಪ್ರವಾಸಿಗರ ಮೇಲೆ ಮಿತಿ ಹೇರಿದ್ದು ನಿತ್ಯ 2,500 ಪ್ರವಾಸಿಗರಿಗೆ ಮಾತ್ರ ಪ್ರವೇಶ ನೀಡಲು ನಿರ್ಧರಿಸಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೂ ಹಾಗೂ ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆಯವರೆಗೂ ಎರಡು ಅವಧಿಯಲ್ಲಿ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗಿದ್ದು ಇದರಲ್ಲಿ ಒಂದು ಅವಧಿಗೆ ಶೇ.50 ರಷ್ಟು ಆನ್‌ಲೈನ್‌ ಮೂಲಕ 1,250 ಮಂದಿಗೆ ಹಾಗು ಶೇ.50 ರಷ್ಟು ನೇರವಾಗಿ 1,250 ಮಂದಿ ಪ್ರವಾಸಿಗರಿಗೆ ನಂದಿಗಿರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
 

Latest Videos
Follow Us:
Download App:
  • android
  • ios