ಮಂಗಳೂರು(ಏ.18): ಯಾವುದೇ ಕಾರಣಕ್ಕೂ ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಅಡಕೆ ಧಾರಣೆ ಕುಸಿಯುವುದಿಲ್ಲ. ಉತ್ತರ ಭಾರತದಲ್ಲಿ ಅಡಕೆಗೆ ಬೇಡಿಕೆ ಇದೆ. ಲಾಕ್‌ಡೌನ್‌ ಮುಗಿದ ಬಳಿಕ ಕೆಲವೇ ದಿನಗಳಲ್ಲಿ ಮಾರುಕಟ್ಟೆಸಹಜ ಸ್ಥಿತಿಗೆ ಬರಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಅಡಕೆ ಬೆಳೆಗಾರರಿಗೆ ಭರವಸೆ ತುಂಬಿದ್ದಾರೆ. ಗುರುವಾರ ಕ್ಯಾಂಪ್ಕೋದಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು.

ಅಡಕೆಗೆæ ಬೇಡಿಕೆ ಇದ್ದರೂ ಸಂಸ್ಕರಣೆ ಈಗ ಸಾಧ್ಯವಾಗುತ್ತಿಲ್ಲ. ಉತ್ತರ ಭಾರತದಿಂದ ಅಡಕೆಗೆ ಸಾಕಷ್ಟುಬೇಡಿಕೆ ಇದೆ. ಆದರೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಡಕೆ ಧಾರಣೆ ಕುಸಿತವಾಗದು. ಈಗಾಗಲೇ ಶೇ.30ರಷ್ಟುಕಡಿಮೆ ದಾಸ್ತಾನು ಇದೆ. ಉತ್ತರ ಭಾರತದಲ್ಲೂ ಸಾಕಷ್ಟುಅಡಕೆ ಕೊರತೆ ಇದೆ. ಅಡಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕೊರೋನಾ ಎಫೆಕ್ಟ್: ಅಡಕೆಗೆ ತೊಂದರೆ ಇಲ್ಲ, ಚಾಕಲೇಟ್‌ಗೆ ತಟ್ಟಿದ ಬಿಸಿ

ಈಗಾಗಲೇ ಪಂಜ ಸಹಕಾರಿ ಸಂಘ ಸೇರಿದಂತೆ ಕೆಲವು ಸಹಕಾರಿ ಸಂಘಗಳು ಕ್ಯಾಂಪ್ಕೋ ಜೊತೆ ಕೈಜೋಡಿಸಲು ಮುಂದೆ ಬಂದಿದೆ. ಹೀಗಾಗಿ ಸಹಕಾರಿ ಸಂಘಗಳ ಸಹಕಾರದಿಂದ ಅಡಕೆ ಖರೀದಿ ನಡೆಸಬಹುದು ಎಂದರು.

500ಕ್ಕೂ ಹೆಚ್ಚು ಅಡಕೆ ಸಸಿ, ಬಾಳೆ ಕಡಿದು ಹಾಕಿದ ದುರುಳರು

ಕ್ಯಾಂಪ್ಕೊ ಬೆಳೆಗಾರರರ ಜೊತೆ ನಿಕಟ ಸಂಬಂಧ ಇರಿಸಿಕೊಳ್ಳಲು ವಾಟ್ಸ್ಯಾಪ್‌ ಗುಂಪು ರಚನೆ, ಡಿಜಿಟಲ್‌ ಯುಗದಲ್ಲಿ ಇನ್ನಷ್ಟುಹತ್ತಿರವಾಗುವುದು ಮೊದಲಾದ ಸಲಹೆಗಳಿಗೆ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ಆಡಳಿತ ನಿರ್ದೇಶಕ ಸುರೇಶ್‌ ಭಂಡಾರಿ, ನಿರ್ದೇಶಕ ಪದ್ಮರಾಜ ಪಟ್ಟಾಜೆ ಇದ್ದರು.