ಸಾಗರ(ಜೂ): ಕ್ಯಾಂಪ್ಕೋ ಬೆಳೆಗಾರಸ್ನೇಹಿ ಸಂಸ್ಥೆಯಾಗಿದೆ. ಸಂಸ್ಥೆಯ ಸದಸ್ಯರ ಜೊತೆಗೆ ಅವರ ಕುಟುಂಬ, ಅವರ ತೋಟದಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕರ ಹಿತರಕ್ಷಣೆಗೆ ಸಹ ಕ್ಯಾಂಪ್ಕೋ ಬದ್ಧವಾಗಿದೆ ಎಂದು ಕ್ಯಾಂಪ್ಕೋ ನಿರ್ದೇಶಕ ಶಂಭುಲಿಂಗ ಹೆಗಡೆ ಹೇಳಿದರು.

ಇಲ್ಲಿನ ಕ್ಯಾಂಪ್ಕೋ ಸಂಸ್ಥೆ ವತಿಯಿಂದ ಭಾನುವಾರ ವರದಾಮೂಲ ಸಮೀಪದ ರಾಮನಗದ್ದೆಯ ಕೃಷಿಕೂಲಿ ಕಾರ್ಮಿಕ ನಾಗೇಶ್‌ ಗದ್ದೆಮನೆ ಎಂಬುವವರು ಅಡಕೆ ಕೀಳುವಾಗ ತೋಟದಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಸಂಸ್ಥೆ ವತಿಯಿಂದ ಕುಟುಂಬಕ್ಕೆ 50 ಸಾವಿರ ರು. ಪರಿಹಾರ ಧನ ವಿತರಿಸಿ, ನಂತರ ಅಡಕೆ ಬೆಳೆಗಾರರ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದರು.

ಕೃಷಿಕರು ಮತ್ತು ಕೃಷಿ ಕೂಲಿಕಾರ್ಮಿಕರ ಹಿತರಕ್ಷಣೆಗೆ ಬದ್ಧವಾಗಿರುವ ಸಂಸ್ಥೆ ಅವರ ಆರೋಗ್ಯ ಸಂರಕ್ಷಣೆ ಜೊತೆಗೆ ಮಾರಣಾಂತಿಕ ಅಪಘಾತವಾದಾಗ ಸಹಾಯಧನ ನೀಡುವ ಮೂಲಕ ಬೆನ್ನೆಲುಬಾಗಿ ನಿಂತಿದೆ. ಇದಕ್ಕಾಗಿ ಹೊಸ ಯೋಜನೆಯನ್ನು ಸಿದ್ಧಪಡಿಸಿದೆ ಎಂದರು.

ಲಾಕ್‌ಡೌನ್‌ ಕೃಷಿಕರಿಗೆ ದೊಡ್ಡ ಸಂಕಷ್ಟ ತಂದಿದ್ದರೂ, ಕ್ಯಾಂಪ್ಕೋ ಸೂಕ್ತ ಸಂದರ್ಭದಲ್ಲಿ ಕೃಷಿಕರ ಬೆನ್ನಿಗೆ ನಿಂತು ನಿಗದಿತ ಸಮಯಕ್ಕೆ ಚಾಲಿ ಅಡಕೆಯನ್ನು ಯೋಗ್ಯಬೆಲೆಗೆ ಖರೀದಿಸುವ ಮೂಲಕ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ನೋಡಿಕೊಂಡಿದೆ. ಇದರಿಂದಾಗಿ ಕ್ಯಾಂಪ್ಕೋದಲ್ಲಿ ವ್ಯವಹರಿಸುವ ಕೃಷಿಕರು ಹಣಕಾಸಿನ ಸಮಸ್ಯೆಯಿಂದ ತೊಂದರೆಗೆ ಒಳಗಾಗುವಂತೆ ಆಗಿಲ್ಲ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಗೋವಿಗಾಗಿ ಮೇವು ಅಭಿಯಾನ ಆರಂಭ

ಕೃಷಿ ಉತ್ಪನ್ನಗಳಾದ ಅಡಕೆ, ಕಾಳುಮೆಣಸು, ಕೋಕೋ, ರಬ್ಬರ್‌ ಸಂಸ್ಥೆ ವತಿಯಿಂದ ಮಾರುಕಟ್ಟೆ ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಅಡಕೆ ಬೆಳೆಗಾರರು ಕ್ಯಾಂಪ್ಕೋ ಜೊತೆಗೆ ನಿರಂತರ ವ್ಯವಹಾರ ಮಾಡುವ ಜೊತೆಗೆ ಸಂಸ್ಥೆಯ ಜೊತೆಗೆ ತಮ್ಮ ಆರ್ಥಿಕ ಸದೃಢತೆಯನ್ನು ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.

ಮಾಮ್ಕೋಸ್‌ ಮಾಜಿ ನಿರ್ದೇಶಕ ಬಿ.ಎಚ್‌. ರಾಘವೇಂದ್ರ, ಎಪಿಎಂಸಿ ಸದಸ್ಯ ವೆಂಕಟೇಶ್‌, ಸೇವಾ ಸಹಕಾರಿ ಬ್ಯಾಂಕ್‌ ಕಾರ್ಯದರ್ಶಿ ಪ್ರಭಾಕರ್‌, ಮಂಜಪ್ಪ, ಕ್ಯಾಂಪೊ್ಕೕ ಶಿವಮೊಗ್ಗ ವಲಯ ವ್ಯವಸ್ಥಾಪಕ ಸಂತೋಷ್‌, ಸಾಗರ ಶಾಖೆ ವ್ಯವಸ್ಥಾಪಕ ರಮೇಶ್‌ ವೈ., ಉಮೇಶ್‌, ಸುಂದರ್‌ ಹಾಜರಿದ್ದರು.