ಗ್ರಾಮೀಣ ಪ್ರದೇಶದಲ್ಲಿ ಕ್ಯಾಮರಾ : ಹೆಲ್ಮೆಟ್ ಧರಿಸದಿದ್ದರೆ ಕೇಸ್ ದಾಖಲು
ಹೆಚ್ಚುತ್ತಿರುವ ಅಪಘಾತ ನಿಯಂತ್ರಣ ತಡೆಗೆ ಪೊಲೀಸ್ ಇಲಾಖೆ ಸ್ಮಾರ್ಚ್ ಟೆಕ್ನಾಲಜಿ ಬಳಸಿ ತಾಲೂಕಿನ ಗ್ರಾಮಾಂತರ ಪ್ರದೇಶದ ಪ್ರಮುಖ ಗ್ರಾಮಗಳ ವೃತ್ತಗಳಲ್ಲಿ ಎಪಿಆರ್ ಕ್ಯಾಮರಾ ಅಳವಡಿಸಿ ಹೆಲ್ಮೆಟ್ ಇಲ್ಲದೆ ಸಂಚರಿಸುವ ದ್ವಿಚಕ್ರ ವಾಹನ ನಂಬರ್ ಆಧರಿಸಿ ಕೇಸ್ ದಾಖಲಿಸಲಾಗುವುದು ಎಂದು ಶಿರಾ ಗ್ರಾಮಾಂತರ ಸಿಪಿಐ ಕೆ .ಆರ್. ರಾಘವೇಂದ್ರ ಹೇಳಿದರು.
ಶಿರಾ : ಹೆಚ್ಚುತ್ತಿರುವ ಅಪಘಾತ ನಿಯಂತ್ರಣ ತಡೆಗೆ ಪೊಲೀಸ್ ಇಲಾಖೆ ಸ್ಮಾರ್ಚ್ ಟೆಕ್ನಾಲಜಿ ಬಳಸಿ ತಾಲೂಕಿನ ಗ್ರಾಮಾಂತರ ಪ್ರದೇಶದ ಪ್ರಮುಖ ಗ್ರಾಮಗಳ ವೃತ್ತಗಳಲ್ಲಿ ಎಪಿಆರ್ ಕ್ಯಾಮರಾ ಅಳವಡಿಸಿ ಹೆಲ್ಮೆಟ್ ಇಲ್ಲದೆ ಸಂಚರಿಸುವ ದ್ವಿಚಕ್ರ ವಾಹನ ನಂಬರ್ ಆಧರಿಸಿ ಕೇಸ್ ದಾಖಲಿಸಲಾಗುವುದು ಎಂದು ಶಿರಾ ಗ್ರಾಮಾಂತರ ಸಿಪಿಐ ಕೆ .ಆರ್. ರಾಘವೇಂದ್ರ ಹೇಳಿದರು.
ಬುಧವಾರ ತಾಲೂಕಿನ ಬರಗೂರು ಗ್ರಾಮದಲ್ಲಿ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಲ್ಮೆಟ್ ಇಲ್ಲದೆ ಮೂರು ಬಾರಿ ವಾಹನ ಚಾಲನೆ ಕಂಡು ಬಂದರೆ ವಾಹನ ಮಾಲೀಕರ ಡಿಎಲ್ ಮತ್ತು ಆರ್‌ಸಿ ರದ್ದು ಮಾಡುವ ನಿರ್ಧಾರ ಪೋಲಿಸ್ ಇಲಾಖೆ ಕೈಗೊಂಡಿದೆ. ಕಳೆದ ಮೂರು ವರ್ಷದಿಂದ ಶಿರಾ ಗ್ರಾಮಾಂತರ ಪ್ರದೇಶದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿ ಅಪಘಾತ ಸಂಭವಿಸಿ ಸುಮಾರು 22 ಜನ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರು, ಜನಸಾಮಾನ್ಯರು ನಿತ್ಯದ ಚಟುವಟಿಕೆಗಳಿಗೆ ದ್ವಿಚಕ್ರ ವಾಹನವನ್ನು ಅವಲಂಬಿಸಿದ್ದಾರೆ. ಸಂಚಾರ ನಿಯಮ ಪಾಲನೆ ಮಾಡಿದರೆ ಅಪಘಾತಗಳ ನಿಯಂತ್ರಣ ಸಾಧ್ಯ ಎಂದರು.
ಈ ಸಂದರ್ಭದಲ್ಲಿ 30 ಪೊಲೀಸರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡಿ ಸಂಚಾರಿ ನಿಯಮ ಪೊಲೀಸ್ ಇಲಾಖೆಯಿಂದಲೇ ಪಾಲನೆ ಆಗಲಿ ಎಂದು ಪೊಲೀಸರಿಗೆ ಸಲಹೆ ನೀಡಿದರು.
ಎಎಸ್‌ಐ ತಿಪ್ಪಣ್ಣ, ಮುಖ್ಯಪೇದೆ ಗಂಗಣ್ಣ, ಹನುಮಂತ ಚಾರ್ ಸೇರಿದಂತೆ ಇತರೆ ಪೊಲೀಸರು ಹಾಜರಿದ್ದರು.
30ಶಿರಾ2: ಶಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ ನಡೆಸಿ ಜನರಿಗೆ ಅರಿವು ಮೂಡಿಸಲಾಯಿತು. ಗ್ರಾಮಾಂತರ ಸಿಪಿಐ ರಾಘವೇಂದ್ರ ಸೇರಿದಂತೆ ಹಲವರು ಹಾಜರಿದ್ದರು.