Asianet Suvarna News Asianet Suvarna News

ಮತದಾನದ ಬಗ್ಗೆ ಗೊಂದಲವಿದ್ದಲ್ಲಿ 1950 ಸಹಾಯವಾಣಿಗೆ ಕರೆ ಮಾಡಿ

ತುಮಕೂರು ಜಿಲ್ಲೆಯ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾದ ಸ್ವೀಪ್‌ ಚಟುವಟಿಕೆ ಹಾಗೂ ಮುಂಬರುವ ಚುನಾವಣಾ ಹಿನ್ನಲೆಯಲ್ಲಿ ಮತದಾರರ ಪಟ್ಟಿ, ಮತದಾನದ ಮಹತ್ವ ಕುರಿತು ರಾಜ್ಯ ಸ್ವೀಪ್‌ ಸಮಾಲೋಚಕರಾದ ಐಎಎಸ್‌(ನಿ) ಪಿ.ಎಸ್‌.ವಸ್ತ್ರದ್‌ ಅಧಿಕಾರಿಗಳೊಂದಿಗೆ ಚರ್ಚಿಸಿದರು.

Call 1950 helpline in case of confusion about voting snr
Author
First Published Nov 4, 2022, 4:49 AM IST

 ತುಮಕೂರು (ನ.04):  ತುಮಕೂರು ಜಿಲ್ಲೆಯ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾದ ಸ್ವೀಪ್‌ ಚಟುವಟಿಕೆ ಹಾಗೂ ಮುಂಬರುವ ಚುನಾವಣಾ ಹಿನ್ನಲೆಯಲ್ಲಿ ಮತದಾರರ ಪಟ್ಟಿ, ಮತದಾನದ ಮಹತ್ವ ಕುರಿತು ರಾಜ್ಯ ಸ್ವೀಪ್‌ ಸಮಾಲೋಚಕರಾದ ಐಎಎಸ್‌(ನಿ) ಪಿ.ಎಸ್‌.ವಸ್ತ್ರದ್‌ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಿಸ್ಟಮ್ಯಾಟಿಕ್‌ ವೋಟರ್ಸ್‌ ಎಜುಕೇಶನ್‌ ಮತ್ತು ಎಲಕ್ಟರೋಲ್‌ ಪಾರ್ಟಿಸಿಪೇಶನ್‌(ಸ್ವೀಪ್‌) ಕಾರ್ಯ ಚಟುವಟಿಗಳ ಕುರಿತು ಜಿಲ್ಲಾ ಪಂಚಾಯತ್‌ (Zilla Panchayat )  ವಿಡಿಯೋ ಕಾನ್ಫರೆನ್ಸ್‌ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

18-19 ವಯೋಮಾನದ ಯುವ ಜನಾಂಗವನ್ನು (Youths )  ಸಕ್ರಿಯವಾಗಿ ಮತದಾನ ಪಟ್ಟಿಗೆ ಸೇರ್ಪಡೆ ಮಾಡುವುದು, ಮಹಿಳಾ ಮತದಾರರು, ವಿಕಲಚೇತನರು, ಬುಡಕಟ್ಟು ಜನಾಂಗ, ಲೈಂಗಿಕ ಕಾರ್ಯಕರ್ತರು, ವೃದ್ಧರು ಎಲ್ಲರೂ ಸಹ ಮತದಾನ ಪಟ್ಟಿಯಲ್ಲಿ ಹೆಸರು ಇರುವಂತೆ ಅರಿವು ಮೂಡಿಸುವುದು ಹಾಗೂ ಎಲ್ಲರೂ ಸಕ್ರಿಯವಾಗಿ ಮತದಾನದಲ್ಲಿ ಭಾಗವಹಿಸುವ ರೀತಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.

ವಿಶೇಷ ಚೇತನರು ಮತದಾನ ದಿನದಂದು ಸುಲಲಿತವಾಗಿ ಮತದಾನ ಮಾಡುವ ರೀತಿಯಲ್ಲಿ ವೀಲ್‌ ಚೇರ್‌, ಬ್ರೈಲ್‌ ಲಿಪಿ, ಮುಂತಾದ ಅಗತ್ಯ ಸಲಕರಣೆಗಳ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆ ಅಧಿಕಾರಿ ರಮೇಶ್‌ ಅವರಿಗೆ ಸೂಚಿಸಿದರು.

1950 ಸಹಾಯವಾಣಿಗೆ ಇತರರ ಸಹಾಯದ ಮೂಲಕ ಕರೆ ಮಾಡಿದಲ್ಲಿ ವಿಶೇಷ ಚೇತನರು ಮತದಾನದ ಬಗ್ಗೆ ತಮಗೆ ಯಾವುದಾದರೂ ಗೊಂದಲವಿದ್ದಲ್ಲಿ ಅದನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ವಸ್ತ್ರದ್‌ ಅವರು ತಿಳಿಸಿದರು.

ತುಮಕೂರು ಜಿಲ್ಲೆಯನ್ನು ಗಣನೆಗೆ ತೆಗೆದುಕೊಂಡಲ್ಲಿ 2018ರಲ್ಲಿ ಒಟ್ಟಾರೆ ಮತದಾನ ಸರಾಸರಿ ಶೇ.82.04 ಉತ್ತಮವಾಗಿದೆ. ಆದರೆ ತುಮಕೂರು ನಗರ ಕ್ಷೇತ್ರದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಮಹಿಳಾ ಮತದಾರರು ಮತದಾರರ ಪಟ್ಟಿಯಲ್ಲಿ ಹೆಚ್ಚಾಗಿ ನೋಂದಣಿಯಾಗಬೇಕಿದೆ. ಈ ಕೆಲಸ ತುಮಕೂರು ಮಹಾನಗರ ಪಾಲಿಕೆಯ ವತಿಯಿಂದ ಆಗಬೇಕಿದೆ ಎಂದರು.

ಎಲ್ಲರೂ ವೋಟರ್‌ ಹೆಲ್ಪ್‌ ಲೈನ್‌ ಆ್ಯಪ್‌ ಡೌನ್ಲೋಡ್‌ ಮಾಡುವ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ. ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವಿಕೆ, ಇತ್ಯಾದಿ ಎಲ್ಲವೂ ಸಹ ಈ ಆ್ಯಪ್‌ನಲ್ಲಿದ್ದು, ಸಾರ್ವಜನಿಕರಿಗೆ ಇದರ ಕುರಿತು ವ್ಯಾಪಕ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಕ್ಯಾಂಪಸ್‌ ಅಂಬಾಸಿಡರ್‌ಗಳನ್ನು ನೇಮಕ ಮಾಡುವಂತೆ ತುಮಕೂರು ವಿ.ವಿ. ಅಧಿಕಾರಿಗಳು ಹಾಗೂ ಡಿಡಿಪಿಯು ಅವರುಗಳಿಗೆ ಸೂಚಿಸಿದ ಅವರು, ಮುಖ್ಯ ಚುನಾವಣಾ ಅಧಿಕಾರಿಗಳ ಅನುಮತಿ ಪಡೆದು ಜಿಲ್ಲೆಯ ಚುನಾವಣಾ ಐಕಾನ್‌ ನೇಮಿಸುವಂತೆ ಸ್ವೀಪ್‌ ಅಧ್ಯಕ್ಷರಿಗೆ ಸೂಚಿಸಿದರು.

ಪಾರದರ್ಶಕ ಚುನಾವಣೆಗೆ ಸಂಖ್ಯೆ ಜೋಡಣೆ ಅವಶ್ಯಕ

 ಚುನಾವಣೆಯನ್ನು ಮತ್ತಷ್ಟುಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಮತದಾರರ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಜೋಡಣೆ ಮಾಡುವ ಕಾರ್ಯಕ್ರಮವನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಆವರಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮತದಾರರ ಗುರುತಿನ ಚೀಟಿಗೆ ಆಧಾರ್‌ ನಂಬರ್‌ ಜೋಡಣೆ ಮಾಡಿದರೆ ಚುನಾವಣೆ ಇನ್ನಷ್ಟುಪಾರದರ್ಶಕವಾಗಿ ನಡೆಯಲಿದೆ. ಹಾಗಾಗಿ ಪ್ರತಿಯೊಬ್ಬರೂ ಮತದಾರರ ಗುರುತಿನ ಚೀಟಿಗೆ ಆಧಾರ್‌ ನಂಬರ್‌ ಜೋಡಣೆ ಮಾಡಿಸಬೇಕು. ಎಪಿಕ್‌ ಕಾರ್ಡ್‌ಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಚುನಾವಣೆ ಪಾರದರ್ಶಕವಾಗಿ ನಡೆಯಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಗ ಜಾರಿಗೆ ತಂದಿದೆ. ಇದರಿಂದ ಚುನಾವಣೆ ಮತ್ತಷ್ಟುಪಾರದರ್ಶಕವಾಗುತ್ತದೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ಪ್ರಜಾಪ್ರಭುತ್ವ ಗಟ್ಟಿಯಾಗಿರಲು ಚುನಾವಣೆ ಮುಖ್ಯ. ಚುನಾವಣೆ ಎಷ್ಟುಪಾರದರ್ಶಕವಾಗಿ ನಡೆಯುತ್ತದೆಯೋ ಅಷ್ಟುಪ್ರಜಾಪ್ರಭುತ್ವ ಗಟ್ಟಿಯಾಗುತ್ತಾ ಹೋಗುತ್ತದೆ ಎಂದರು.

ಚುನಾವಣೆಯಲ್ಲಿ ಹಕ್ಕು ಚಲಾಯಿಸುವವರು ನಾವೇ. ಶೇ. 45ರಿಂದ 50 ರಷ್ಟುಜನ ಮತ ಚಲಾಯಿಸುತ್ತಿಲ್ಲ. ಉಳಿದ ಶೇ. 50 ರಷ್ಟುಮಂದಿ ಮಾತ್ರ ಮತ ಚಲಾಯಿಸುತ್ತಿದ್ದಾರೆ. ಯಾರು ಶೇ. 35ರಷ್ಟುಮತ ಪಡೆಯುತ್ತಾರೋ ಅಂತಹವರು ಆಯ್ಕೆಯಾಗುತ್ತಿದ್ದಾರೆ ಎಂದ ಅವರು, ಭಾರತದ ನಾಗರಿಕರಾಗಿ ನಮಗೆ ಕೆಲವು ಹಕ್ಕು, ಹೊಣೆಗಾರಿಕೆಗಳಿವೆ. ನಮ್ಮ ಹೊಣೆಗಾರಿಕೆ, ಜವಾಬ್ದಾರಿಗಳ ಬಗ್ಗೆ ಯೋಚಿಸಬೇಕು. ಹೊಣೆಗಾರಿಕೆಗಳನ್ನು ಯಾರು ನಿರ್ವಹಿಸುತ್ತಾರೋ ಅವರಿಗೆ ಕೇಳುವ ಹಕ್ಕಿರುತ್ತದೆ. ಹಕ್ಕು ಮತ್ತು ಹೊಣೆಗಾರಿಗೆ ಎರಡೂ ಕೂಡಾ ಒಂದಕ್ಕೊಂದು ಪೂರಕವಾಗಿರುತ್ತದೆ ಎಂದರು.

ನಮ್ಮ ದೇಶದ ಸಂವಿಧಾನ ವಿಶೇಷವಾದ ಹಕ್ಕನ್ನು ಕೊಟ್ಟಿದೆ. 18 ವರ್ಷ ಪೂರ್ಣವಾದವರಿಗೆ ವಿಶೇಷವಾದ ಮತದಾನದ ಹಕ್ಕು ಬರುತ್ತದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ ಅಲ್ಲಿ ಮಾತನಾಡುವ ಹಕ್ಕಿಲ್ಲ. ಆದರೆ ನಮ್ಮಲ್ಲಿ ನಾವೆಲ್ಲ ಮಾತನಾಡುವ ಹಕ್ಕು, ನೆಮ್ಮದಿಯಿಂದ ನಿದ್ದೆ ಮಾಡುವ, ಹೊರಗೆ ಓಡಾಡುವ ಹಕ್ಕಿದೆ ಎಂದು ಹೇಳುವ ಮೂಲಕ ಸಿಇಓ ಡಾ. ಕೆ. ವಿದ್ಯಾಕುಮಾರಿ ಅವರು ವಿದ್ಯಾರ್ಥಿಗಳು ಚುನಾವಣಾ ಜಾಗೃತಿ ಮೂಡಿಸಿದರು.

Follow Us:
Download App:
  • android
  • ios