ಮೈಸೂರು(ಅ.06): ಆಹಾರ ಮೇಳದಲ್ಲಿ ನಡೆದ ಕೇಕ್‌ ತಿನ್ನುವ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ನಾ ಮುಂದು ತಾ ಮುಂದು ಎಂಬ ರೀತಿಯಲ್ಲಿ ಪೈಪೋಟಿಗೆ ಬಿದ್ದವರಂತೆ ಕ್ಷಣಾರ್ಧದಲ್ಲಿ ತಿಂದು ಮುಗಿಸಿದರು.

ಸಾಲಾಗಿ ಕುಳಿತಿದ್ದ 10 ಮಂದಿ ಸ್ಪರ್ಧಿಗಳು 1 ನಿಮಿಷದ ಅವಧಿಯಲ್ಲಿ 200 ಗ್ರಾಂ ಪ್ಲæೖನ್‌ ಕೇಕ್‌ ತಿನ್ನಲು ಆರಂಭಿಸಿದರು. ಹೈಸ್ಕೂಲ… ವಿದ್ಯಾರ್ಥಿನಿಯರೇ ಭಾಗವಹಿಸಿದ್ದರಿಂದ ಸ್ಪರ್ಧೆ ಭರಾಟೆಯಿಂದ ಸಾಗಿತ್ತು.

ಅಂತಿಮವಾಗಿ ಸದ್ವಿದ್ಯಾ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಪೂಜಾ ಪ್ರಥಮ ಸ್ಥಾನ ಪಡೆದರು. ಗುಡ್‌ ಶಫರ್ಡ್‌ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಹರ್ಷಿತ ದ್ವಿತೀಯ ಹಾಗೂ ಸಿಕೆಸಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಲೇಖನ ಪ್ರಥಮ ಬಾರಿ ಭಾಗವಹಿಸಿ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣಪತ್ರ ವಿತರಿಸಲಾಯಿತು.

ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್​: ನಿವೇದಿತಾ-ಚಂದನ್ ಶೆಟ್ಟಿಗೆ ಸಂಕಷ್ಟ

ಈ ಹಿಂದೆ ಇಡ್ಲಿ ತಿನ್ನುವ ಸ್ಪರ್ಧೆ, ಮೊಟ್ಟೆ ತಿನ್ನುವ ಸ್ಪರ್ಧೆ ಸೇರಿದಂತೆ ಬೆಂಕಿ ಇಲ್ಲದೆ ಅಡುಗೆ ತಯಾರಿಸುವ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ಜನ ಹೆಚ್ಚಿನ ಆಸಕ್ತಿ ವಹಿಸಿ ಭಾಗವಹಿಸುತ್ತಿದ್ದಾರೆ.

ಮೈಸೂರು: 30 ಸೆಕೆಂಡ್‌ನಲ್ಲಿ 6 ಮೊಟ್ಟೆತಿಂದ ಕೌಶಿಕ್‌!