Nandi Hills: ಇನ್ಮುಂದೆ ನಂದಿಬೆಟ್ಟಕ್ಕೆ ‘ರೋಪ್‌ವೇ’ನಲ್ಲೇ ಹೋಗಿ
* ಸಿಎಂ ಬೊಮ್ಮಾಯಿ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ
* ಖಾಸಗಿ ಪಾಲುದಾರಿಕೆಯಲ್ಲಿ ರೋಪ್ ವೇ ಅಭಿವೃದ್ಧಿ, ಕಾರ್ಯಾಚರಣೆ
* ಟೆಂಡರ್‌ಗೆ ಸೂಚನೆ
ಬೆಂಗಳೂರು(ಫೆ.19): ಪ್ರವಾಸಿ ತಾಣ ನಂದಿಬೆಟ್ಟದಲ್ಲಿ(Nandi Hills) ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೋಪ್-ವೇ(Rope-way) ನಿರ್ಮಿಸುವ ಯೋಜನೆಗೆ ಟೆಂಡರ್ ಆಹ್ವಾನಿಸಲು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ(Cabinet Meeting) ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರೋಪ್-ವೇ ನಿರ್ಮಿಸುವ ಯೋಜನೆಯನ್ನು .93.40 ಕೋಟಿ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ರೋಪ್ ವೇಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಗಾಗಿ ಖಾಸಗಿ ಪಾಲುದಾರರ ಆಯ್ಕೆಗೆ ಟೆಂಡರ್ ಆಹ್ವಾನಿಸಲು ಒಪ್ಪಿಗೆ ನೀಡಲಾಗಿದೆ.
Chikkaballapura: ವೀಕೆಂಡ್ ಕರ್ಫ್ಯೂ ರದ್ದಾದರೂ ನಂದಿಬೆಟ್ಟಕ್ಕೆ ನೋ ಎಂಟ್ರಿ
2.93 ಕಿ.ಮೀ. ಉದ್ದದ ರೋಪ್-ವೇ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ನಂದಿಬೆಟ್ಟಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿದರೆ ಮತ್ತಷ್ಟು ಪ್ರವಾಸಿಗರನ್ನು(Tourists) ಸೆಳೆಯಬಹುದಾಗಿದೆ. ಪ್ರವಾಸಿಗರಿಗೆ ವಾರಾಂತ್ಯದಲ್ಲಿ ಭೇಟಿ ಮಾಡಲು ಆಕರ್ಷಕ ಸ್ಥಳವಾಗಿದೆ. ರೋಪ್-ವೇ ನಿರ್ಮಿಸಿ ಪ್ರವಾಸಿಗರನ್ನು ತಪ್ಪಲಿನಿಂದ ಮೇಲಕ್ಕೆ ಕರೆದೊಯ್ಯುವ ಉದ್ದೇಶವಿದೆ. ಇದಕ್ಕಾಗಿ ಬೆಟ್ಟದ ತಳಭಾಗ ಹಾಗೂ ಮೇಲ್ಭಾಗ ಸೇರಿ ಎರಡೂ ಕಡೆ ಲ್ಯಾಂಡಿಂಗ್ ಸ್ಟೇಷನ್ (ಇಳಿಯುವ ಸ್ಥಳ) ಇರುವಂತೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ 18 ಟವರ್‌ಗಳು ನಿರ್ಮಾಣವಾಗಲಿದೆ. ಇದರ ಜೊತೆಗೆ ರೆಸ್ಟೋರೆಂಟ್, ಕೆಫೆ, ಆಹಾರ ಮಳಿಗೆ, ಇತರೆ ಮಳಿಗೆಗಳನ್ನು ನಿರ್ಮಿಸಲು ಅವಕಾಶವಿರಲಿದೆ. ರೋಪ್-ವೇನಲ್ಲಿ 50 ಕ್ಯಾಬಿನ್‌ಗಳಿರಲಿದ್ದು, ಪ್ರತಿಯೊಂದರಲ್ಲಿ 10 ಮಂದಿ ಪ್ರಯಾಣಿಸಬಹುದು. ಒಟ್ಟು 28 ನಿಮಿಷಗಳಲ್ಲಿ ಕ್ರಮಿಸಬಹುದು ಎಂದು ಮೂಲಗಳು ತಿಳಿಸಿವೆ.
ಯೋಜನೆಯಿಂದ ಆರ್ಥಿಕಾಭಿವೃದ್ಧಿ: ಸುಧಾಕರ್
ಯೋಜನೆಯಿಂದ ಚಿಕ್ಕಬಳ್ಳಾಪುರದ(Chikaballapur) ಇತಿಹಾಸ, ಪರಂಪರೆ, ನಿಸರ್ಗ ರಮಣೀಯತೆ ಹೊರಜಗತ್ತಿಗೆ ತಿಳಿದುಬರಲಿದೆ. ಹೆಚ್ಚು ಪ್ರವಾಸಿಗರು ಬರುವುದರಿಂದ ಉದ್ಯೋಗ(Jobs) ಸೃಷ್ಟಿಯಾಗಲಿದ್ದು, ಸ್ಥಳೀಯವಾಗಿ ಆರ್ಥಿಕತೆ ಅಭಿವೃದ್ಧಿಯಾಗಲಿದೆ. ಸೂರ್ಯೋದಯ ಹಾಗೂ ಸೂರ್ಯಾಸ್ತಮಾನದ ಸಮಯದಲ್ಲಿ ಹೆಚ್ಚು ಜನರು ಖಾಸಗಿ ವಾಹನಗಳಲ್ಲಿ ಬಂದು ಬೆಟ್ಟಕ್ಕೆ ತೆರಳುತ್ತಿದ್ದು, ಪರಿಸರ ಹಾಳಾಗುತ್ತಿದೆ. ರೋಪ್-ವೇ ನಿರ್ಮಾಣವಾದಲ್ಲಿ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಯಾಗಲಿದೆ. ಜನಜಂಗುಳಿಯನ್ನು ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ. ಜತೆಗೆ, ರೋಪ್-ವೇ ನಲ್ಲಿನ ಸಂಚಾರದ ವೇಳೆ ಪ್ರವಾಸಿಗರು ವಿಹಂಗಮ ನೋಟವನ್ನೂ ಕಣ್ತುಂಬಿಕೊಳ್ಳಬಹುದು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯವರೇ ಆದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್(Dr K Sudhakar) ಪ್ರತಿಕ್ರಿಯಿಸಿದ್ದಾರೆ.
ನಂದಿ ಗಿರಿಧಾಮಕ್ಕೂ ಬಂತು ಆನ್‌ಲೈನ್ ಟಿಕೆಟ್ ಬುಕಿಂಗ್..!
ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ(Nandi Hills) ಇನ್ನು ಮುಂದೆ ನೂರಾರು ಕಿಮೀ ದೂರದಿಂದ ಬರುವರು ಮುಗಂಡವಾಗಿ ಆನ್‌ಲೈನ್(Online) ಮೂಲಕ ಟಿಕೆಟ್ ಬುಕ್ಕಿಂಗ್ ಮಾಡದೇ ನೀವು ಗಿರಿಧಾಮ ನೋಡಲು ಹೊರಟರೆ ಖಂಡಿತ ಗಿರಿಧಾಮ ವೀಕ್ಷಣೆಗೆ ಪ್ರವೇಶ ಸಿಗದೇ ನಿಮಗೆ ನಿರಾಸೆ ಎದುರಾಗಬಹುದು.
ಹೌದು, ರಾಜ್ಯ ಪ್ರವಾಸ್ಯೋದ್ಯಮ ಅಭಿವೃದ್ದಿ ನಿಗಮವು(State Tourism Development Corporation) ಕೊನೆಗೂ ಪ್ರವಾಸಿಗರಿಗೆ(Tourists) ನಂದಿಗಿರಿಧಾಮದ ಪ್ರವೇಶವನ್ನು ತಮ್ಮ ಬೆರಳತುದಿಯಲ್ಲಿ ಖಚಿತಪಡಿಸಿಕೊಳ್ಳಲು ಅನುಕೂಲವಾಗುವಂತೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗೆ(Ticket Booking) ಹೊಸ ಸಾಫ್ಟ್‌ವೇರ್ ಅಳವಡಿಸಿದೆ. ಇನ್ಮೇಲೆ ಗಿರಿಧಾಮ ವೀಕ್ಷಣೆಗೆ ಬರುವರು ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿ ತಮ್ಮ ಪ್ರವೇಶ ಖಾತ್ರಿಪಡಿಸಿಕೊಳ್ಳಬಹುದು.
ಆನ್‌ಲೈನ್ ಬುಕಿಂಗ್ ಆರಂಭ
ನಂದಿಗಿರಿಧಾಮ ಲಕ್ಷಾಂತರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅದರಲ್ಲೂ ಶನಿವಾರ, ಭಾನುವಾರ ಸುಮಾರು 18 ರಿಂದ 20 ಸಾವಿರದಷ್ಟು ಪ್ರವಾಸಿಗರು ನಂದಿಗಿರಿಧಾಮ ಪ್ರಾಕೃತಿಕ ಸೌಂದರ್ಯ(Beauty of Nature) ಸವಿಯಲೆಂದು ರಾಜ್ಯ, ಹೊರ ರಾಜ್ಯಗಳಿಂದ ಬರುತ್ತಾರೆ. ಹೀಗಾಗಿ ಪ್ರವಾಸಿಗರಿಗೆ ನಂದಿಗಿರಿಧಾಮದ ಪ್ರವೇಶ ಸುಲಭ ಆಗಬೇಕು, ಬೆರಳ ತುದಿಯಲ್ಲಿ ಟಿಕೆಟ್ ಬುಕ್ಕಿಂಗ್ ಆಗಿ ಪ್ರವಾಸಿಗರ ಪ್ರವಾಸ(Tour) ಪ್ರಯಾಸ ಆಗದಂತೆ ಇರಬೇಕೆಂಬ ಉದ್ದೇಶದಿಂದ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಫೆ.14 ರಿಂದ ಆನ್‌ಲೈನ್ ಮೂಲಕ ಗಿರಿಧಾಮಕ್ಕೆ ಬರುವರಿಗೆ ಟಿಕೆಟ್ ಬುಕ್ಕಿಂಗ್ ಅವಕಾಶ ಕಲ್ಪಿಸಿದೆ.
Omicron Threat: ಮತ್ತೆ ನಂದಿ ಬೆಟ್ಟ ಬಂದ್: ಹೊಸ ವರ್ಷಾಚರಣೆಗೆ ಬ್ರೇಕ್..!
ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮೂಲಕ ನಿತ್ಯ ಪ್ರವಾಸಿಗರ ಪ್ರವೇಶಕ್ಕೆ ಮಿತಿ ಹೇರಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ನಂದಿಬೆಟ್ಟದಲ್ಲಿ ಹೆಚ್ಚಿನ ಜನದಟ್ಟಣೆಯಿಂದಾಗಿ ವಾಹನಗಳ ಸಂಚಾರ ಹೆಚ್ಚಾಗಿ ಇದರಿಂದ ಗಿರಿಧಾಮದ ಕಿರಿದಾದ ರಸ್ತೆ ತಿರುವುಗಳಲ್ಲಿ ಉಂಟಾಗುತ್ತಿದ್ದ ವಾಹನ ಸಂಚಾರ ದಟ್ಟಣೆ ಹಾಗೂ ಪರಿಸರದ ಮೇಲೆ ಉಂಟಾಗುತ್ತಿದ್ದ ಒತ್ತಡ ಆಗುತ್ತಿರುವುದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಪ್ರವಾಸೋದ್ಯಮ ನಿಗಮದ ವೆಬ್‌ಸೈಟ್‌ನಲ್ಲಿ ಹೊಸದಾಗಿ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸಾಫ್ಟ್‌ವೇರ್ ಅಭಿವೃದ್ದಿಗೊಳಿಸಿ ಅಳವಡಿಸಲಾಗಿದೆ.
ಹೀಗಾಗಿ ವಾರಾಂತ್ಯದಲ್ಲಿ(Weekend) ಗಿರಿಧಾಮದಲ್ಲಿ ಆಗುತ್ತಿದ್ದ ಟ್ರಾಫಿಕ್ ಜಾಮ್ ಕಿರಿಕಿರಿ ಜೊತೆಗೆ ಬೆಟ್ಟದ ಮೇಲೆ ಆಗುತ್ತಿದ್ದ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಲು ಈ ವ್ಯವಸ್ಥೆ ಹೆಚ್ಚಿನ ಸಹಾಯವಾಗಲಿದೆ.