ಮೈಸೂರು(ಜ.16): ಸಂಪುಟ ರಚನೆ ಕಗ್ಗಂಟು ಅಲ್ಲ. ಇದೊಂದು ಸ್ಪರ್ಧೆ ಇರುವಂತಹ ಜಾಗ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದೆ. ನಾವೆಲ್ಲ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಮೈಸೂರಿನಲ್ಲಿ ಶಾಸಕ ರಾಮ್‌ದಾಸ್ ಹೇಳಿದ್ದಾರೆ.

ಸಂಪುಟ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ರಾಮ್‌ದಾಸ್‌ ಸಂಪುಟ ರಚನೆಯಲ್ಲಿ ಯಾವುದೆ ಕಗ್ಗಂಟಿಲ್ಲ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದೆ. ನಾವೆಲ್ಲರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.

ಮೈಸೂರು: ಪಾಲಿಕೆಯಲ್ಲಿ ಮುಂದುವರಿಯುತ್ತಾ 'ಕೈ', 'ತೆನೆ' ಮೈತ್ರಿ..? ಸಾರಾ ಕೊಟ್ರು ಹಿಂಟ್

ಎಲ್ಲಿ ಸೈಲೆಂಟ್ ಆಗಿ ಕೆಲಸ ಮಾಡುತ್ತಾರೋ ಅಲ್ಲಿ ಸಾಮರಸ್ಯ ಕಾಣುತ್ತೇವೆ. ಸಂಪುಟದಲ್ಲಿ ಆಪೇಕ್ಷೆ ಪಡುವವರು ಹೇಳಿಕೆ ನೀಡೋದರಲ್ಲಿ ತಪ್ಪೇನಿಲ್ಲ. ಯಡಿಯೂರಪ್ಪ ಅವರು ಸ್ವತಂತ್ರರು. ಅವರು ನಮ್ಮ ತಂದೆ ಸ್ಥಾನದಲ್ಲಿ ಇದ್ದಾರೆ. ಅವರು ಯಾವುದೇ ನಿರ್ಧಾರ ತಗೆದುಕೊಂಡರು ನಾವು ಬದ್ಧರಾಗಿರುತ್ತೇವೆ ಎಂದಿದ್ದಾರೆ.