ಉಡುಪಿ(ಫೆ.07): ರಾಜ್ಯದ ಬಿಜೆಪಿ ಸರ್ಕಾರದ ಮಂತ್ರಿಮಂಡಲದ ವಿಸ್ತರಣೆಯ ಈ ದಿನ ರಾಜ್ಯದ ಇತಿಹಾಸದಲ್ಲಿಯೇ ಕರಾಳ ದಿನವಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ವಕ್ತಾರ ಉಗ್ರಪ್ಪ ಟೀಕಿಸಿದ್ದಾರೆ.

ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾದ ಶಾಸಕರು ಜನಾದೇಶಕ್ಕೆ, ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿದವರು, ರಾಜಕೀಯ ಜನ್ಮಕೊಟ್ಟವರಿಗೆ ದ್ರೋಹ ಮಾಡಿದವರು ಎಂದು ಆರೋಪಿಸಿದ್ದಾರೆ.

ಟೋಲ್‌ ತಪ್ಪಿಸಲು ಹೋಗಿ ವಾಹನ ಅಪಘಾತ

‘ಹಣದಹೊಳೆ, ಅಧಿಕಾರ ದುರ್ಬಳಕೆ ಮಾಡಿ ಗೆದ್ದು, ಈಗ ಮಂತ್ರಿಗಳಾಗಿದ್ದೀರಿ, ಇನ್ನೂದರೂ ಮತದಾರರಿಗೆ, ನೀವು ಸೇರಿದ ಪಕ್ಷಕ್ಕೆ ನಿಷ್ಟರಾಗಿರಿ, ಪ್ರವಾಹ ಪೀಡಿತರ ಸಮಸ್ಯೆಗಳಿಗೆ ಸ್ಪಂದಿಸಿ’ ಎಂದು ಉಗ್ರಪ್ಪ ನೂತನ ಸಚಿವರಿಗೆ ಕಿವಿಮಾತು ಹೇಳಿದರು.

ಬಿಜೆಪಿಯವರು ಕಾಂಗ್ರೆಸ್‌ ಪಕ್ಷದ್ದು ವಂಶಪಾರಂಪರ್ಯ ಆಡಳಿತ ಅಂತ ಆರೋಪಿಸುತ್ತಿದ್ದರು. ಈಗ ಮುಖ್ಯಮಂತ್ರಿಗಳ ಮಗನ ವಿಜಯೇಂದ್ರ ಮನೆಯೇ ಬಿಜೆಪಿಯ ಶಕ್ತಿ ಕೇಂದ್ರವಾಗಿದೆ. ಯಡಿಯೂರಪ್ಪ ಅವರ ಕುಟುಂಬದವರೇ ರಾಜ್ಯದಲ್ಲಿ ಆಡಳಿತ ನಡೆಯುತ್ತಿದ್ದಾರೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಉಗ್ರಪ್ಪ ಹೇಳಿದ್ದಾರೆ.

ನುಡಿ ಜಾತ್ರೆ: ಜನಸಾಗರದಿಂದ ಕಲಬುರಗಿಯಲ್ಲಿ ಟ್ರಾಫಿಕ್‌ ಜಾಮ್‌!

ಗಾಂಧೀಜಿಯನ್ನು ಟೀಕಿಸಿದ ಸಂಸದ ಅನಂತ್‌ ಕುಮಾರ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಬಿಜೆಪಿಗೆ ಮಾನ ಮರ್ಯಾದೆ ಇದ್ರೆ ಅನಂತ್‌ ಕುಮಾರ್‌ ಹೆಗಡೆ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ, ಅವರಿಗೆ ಸೂಕ್ತ ಟ್ರೀಟ್‌ಮೆಂಟ್‌ ಕೊಡಿಸಲಿ ಎಂದ ಉಗ್ರಪ್ಪ, ಇದು ಕೇವಲ ಅನಂತ್‌ ಕುಮಾರ್‌ ಹೆಗಡೆ ಧ್ವನಿ ಅಲ್ಲ, ಇದು ಬಿಜೆಪಿಯ ಮಾನಸಿಕತೆಯನ್ನು ತೋರಿಸುತ್ತಿದೆ ಎಂದು ಟೀಕಿಸಿದರು.