Asianet Suvarna News Asianet Suvarna News

ನಾನು ಬಸನಗೌಡ ಪಾಟೀಲ್‌ ಯತ್ನಾಳ್‌ನಷ್ಟು ಬುದ್ಧಿವಂತನಲ್ಲ: ಸಿ.ಟಿ. ರವಿ

ಸಮಗ್ರ ಕರ್ನಾಟಕಕ್ಕೆ ಯೋಗ, ಯೋಗ್ಯತೆ ಇದ್ದವರು ಸಿಎಂ ಆಗಬಹುದು| ರಾಜ್ಯಕ್ಕೆ ಕೇಂದ್ರದ ಪರಿಹಾರದ ವಿಷಯದಲ್ಲಿ ಯುಪಿಎ ಸರ್ಕಾರ ಕೊಟ್ಟಿದ್ದಕ್ಕಿಂದ‌ ನಾಲ್ಕು ಪಟ್ಟು ಪರಿಹಾರವನ್ನ ಮೋದಿ ಸರ್ಕಾರ ಕೊಟ್ಟಿದೆ|‌ ಕಾಂಗ್ರೆಸ್ ಪರಿಹಾರದ ವಿಷಯದಲ್ಲಿ ಡ್ರಾಮಾ ಫೋನ್ ಕ್ಯಾಸೆಟ್ ಹಾಕುವ ಕೆಲಸ ಮಾಡಿದೆ ಎಂದ ಸಿ.ಟಿ. ರವಿ|  

C T Ravi Reacts Over Basanagouda Patil Yatnal Statement grg
Author
Bengaluru, First Published Oct 21, 2020, 1:26 PM IST

ಕೊಪ್ಪಳ(ಅ.21):  ಸಮಗ್ರ ಕರ್ನಾಟಕ್ಕೆ ಯೋಗ ಮತ್ತು ಯೋಗ್ಯತೆ ಇದ್ದವರು ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು, ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಿಎಂ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿರಬಹುದು. ಆದರೆ ನಾನು ಯತ್ನಾಳ್‌ನಷ್ಟು ಬುದ್ಧಿವಂತನಲ್ಲ. ಪಕ್ಷದ ನೆಲೆಯಲ್ಲಿ ಕೆಲಸ ಮಾಡಲಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. 

ಉತ್ತರ ಕರ್ನಾಟಕ ಭಾಗದವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಟಿ.ರವಿ ಅವರು, ಸಮಗ್ರ ಕರ್ನಾಟಕಕ್ಕೆ ನಾಯಕತ್ವ ಕೊಡುವ ಸಾಮರ್ಥ್ಯ ಉತ್ತರ ಕರ್ನಾಟಕಕ್ಕೆ ಇದೆ. ಹಿಂದೆ ವೀರೇಂದ್ರ ಪಾಟೀಲ್ ನಾಯಕತ್ವ ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಯತ್ನಾಳ್‌ ಅವರನ್ನು ಮಾತನಾಡಲು ಕರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 
ಇಂಟಲಿಜೆನ್ಸ್ ರಿಪೋರ್ಟ್ ಹಾಗೂ ಮತದಾರರ ಮನೋ ಭಾವನೆ ನೋಡಿದಾಗ ನಾಲ್ಕು ವಿಧಾನ ಪರಿಷತ್ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ನಾವೇ ಗೆಲ್ಲಲಿದ್ದೇವೆ. ಈ ಹಿಂದೆ ಜನತೆ ಮೇಲೆ ಹಣ ಮತ್ತು ಜಾತಿಯ ಪ್ರಭಾವ ಬೀರುತ್ತಿತ್ತು. ಈಗ ಜನ ಬುದ್ದಿವಂತರಾಗಿದ್ದಾರೆ. ದೇಶ ಒಂದೇ ಎನ್ನುವ ಹಿತವನ್ನ ಬಯಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

'ಬಿಜೆಪಿ ಸರ್ಕಾರ ದಲಿ​ತರ ಮೇಲೆ ಹಿಡಿತ ಸಾಧಿ​ಸಲು ಯತ್ನಿ​ಸು​ತ್ತಿ​ದೆ' 

ಉತ್ತರ ಕರ್ನಾಟಕದಲ್ಲಿ ನೆರೆ ವಿಚಾರಕ್ಕೆ ಸಂಬಂಧಿಸಿದಂತೆ ನೆರೆ ಹಾಗೂ ಕೋವಿಡ್ ನಿರೀಕ್ಷೆ ಇಟ್ಟು ಬಂದಿದ್ದಲ್ಲ. ನೆರೆ ಅನಿರೀಕ್ಷಿತ. ಬರದಿಂದ ತತ್ತರಿಸಿ ಮಳೆ ಬಂದರೆ ಸಾಕು ಎಂದೆನ್ನುತ್ತಿದ್ದ ಜನತೆಗೆ ಈಗ ಅತಿಯಾದ ಮಳೆ ಬಂದಿದೆ.‌ ನಮ್ಮ ಎಲ್ಲ ಉಸ್ತುವಾರಿ ಮಂತ್ರಿಗಳು ನೆರೆ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡಿ ಪರಿಶೀಲನೆ ಮಾಡುತ್ತಿದ್ದಾರೆ. ಸಿಎಂ ಕೂಡ ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದರು.‌

ರಾಜ್ಯಕ್ಕೆ ಕೇಂದ್ರದ ಪರಿಹಾರದ ವಿಷಯದಲ್ಲಿ ಯುಪಿಎ ಸರ್ಕಾರ ಕೊಟ್ಟಿದ್ದಕ್ಕಿಂದ‌ ನಾಲ್ಕು ಪಟ್ಟು ಪರಿಹಾರವನ್ನ ಮೋದಿ ಸರ್ಕಾರ ಕೊಟ್ಟಿದೆ.‌ ಕಾಂಗ್ರೆಸ್ ಪರಿಹಾರದ ವಿಷಯದಲ್ಲಿ ಡ್ರಾಮಾ ಫೋನ್ ಕ್ಯಾಸೆಟ್ ಹಾಕುವ ಕೆಲಸ ಮಾಡಿದೆ ಎಂದರು. 

ನೆರೆ ಪರಿಹಾರ ವಿಚಾರದಲ್ಲಿ ಮೋದಿ ಸರ್ಕಾರ ಹೆಚ್ಚಿಸಿದೆ. ಆದರೆ ಯುಪಿಎ ಸರ್ಕಾರವು ಮೂರುಕಾಸು ಪರಿಹಾರವನ್ನ ಕೊಟ್ಟಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯಮದ ಪ್ರಕಾರ ರಾಜ್ಯಕ್ಕೆ ಏಷ್ಟು ಪರಿಹಾರ ಕೊಡಬೇಕೋ ಅಷ್ಟು ಪರಿಹಾರ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. 
 

Follow Us:
Download App:
  • android
  • ios