ಚಿಕ್ಕಮಗಳೂರು(ಅ.24): ಬಿಜೆಪಿ ಗೆದ್ದರೆ ಬಿಹಾರದಲ್ಲಿ ಕೊರೋನಾ ಸೋಂಕಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವುದನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಮರ್ಥಿಸಿಕೊಂಡಿದ್ದಾರೆ.

"

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಚಿತವಾಗಿ ಅಕ್ಕಿ, ಲ್ಯಾಪ್‌ಟಾಪ್‌ ನೀಡುತ್ತಿರುವಂತೆ ಉಚಿತವಾಗಿ ಲಸಿಕೆ ನೀಡಲಾಗುವುದೆಂದು ಪಕ್ಷ ಹೇಳಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

'ಅಶೋಕಣ್ಣ, ಸಿಟಿ ರವಿ ಅಣ್ಣಗೆ ಪ್ರಮೋಶನ್ ಸಿಗಲಿ'

ಇದು, ಜೀವ ಉಳಿಸಲು ನೆರವಾಗುವಂತಹ ಕೆಲಸ. ಲಸಿಕೆ ತಯಾರಾದ ಮೇಲೆ ಉಚಿತವಾಗಿ ನೀಡಲಾಗುವುದು. ನಮ್ಮ ದೇಶದಲ್ಲಿ ಜಾರಿಗೆ ತಂದಿರುವ ಅಯುಷ್ಮಾನ್‌ ಭಾರತ್‌ ವಿಮಾ ಯೋಜನೆ ಜಗತ್ತಿನಲ್ಲಿ ಅತ್ಯಂತ ದೊಡ್ಡ ಯೋಜನೆ. ನಮ್ಮ ಪಕ್ಷ ಹೇಳಿದನ್ನು ಮಾಡಿ. ಬಿಹಾರದಲ್ಲಿ ಕೊರೋನಾ ಉಚಿತ ಲಸಿಕೆ ನೀಡುವ ಬಗ್ಗೆ ಹೇಳಿದ್ದೇವೆ. ಆ ಕೆಲಸ ಮಾಡೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ.