ಬೆಳಗಾವಿ(ಮಾ.07): ಯಡಿಯೂರಪ್ಪ ನೇತೃತ್ವದ ಸರ್ಕಾರ ದರಿದ್ರ ಸರ್ಕಾರವಾಗಿದ್ರೆ ಸಿದ್ದರಾಮಯ್ಯ ಕ್ಷೇತ್ರಕ್ಕೆ 630 ಕೋಟಿ ಅನುದಾನ ಹೇಗೆ ಹೋಗುತ್ತಿತ್ತು ಎಂದು ಸಚಿವ ಬೈರತಿ ಬಸವರಾಜ್ ಪ್ರಶ್ನೆ ಮಾಡಿದ್ದಾರೆ. 

ಯಡಿಯೂರಪ್ಪ ನೇತೃತ್ವದ ಸರ್ಕಾರ ದರಿದ್ರ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮದು ದರಿದ್ರ ಸರ್ಕಾರವಲ್ಲ, ಸುಭದ್ರ ಸರ್ಕಾರವಾಗಿದೆ. ಸಿದ್ದರಾಮಯ್ಯ ಅನೇಕ ಬಾರಿ ಬಜೆಟ್ ಮಂಡನೆ ಮಂಡಿಸಿದ್ದಾರೆ. ಅವರಿಗೆ ವಸ್ತು ಸ್ಥಿತಿ ಎಲ್ಲವೂ ಗೊತ್ತಿದೆ. ವಿರೋಧ ಪಕ್ಷವಾಗಿ ಅವರು ಏನು ಹೇಳಬೋಕೋ ಅದನ್ನೇ ಹೇಳುತ್ತಾರೆ ಸಿಎಂ ಬಿ.ಎಸ್.ಯಡಿಯೂರಪ್ಪ ಅತ್ಯುತ್ತಮ ಬಜೆಟ್ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಸ್ತುಸ್ಥಿತಿಗೆ ಹತ್ತಿರವಾದ ಬಜೆಟ್‌ನ್ನು ಬಿಎಸ್‌ವೈ ಕೊಟ್ಟಿದ್ದಾರೆ. ಆರ್ಥಿಕ ಪರಿಸ್ಥಿತಿ ಅರ್ಥಮಾಡಿಕೊಂಡು ಅದರ ಅನುಗುಣವಾಗಿ ಬಜೆಟ್ ಮಂಡಿಸಿದ್ದಾರೆ. ಬಿಎಸ್‌ವೈ ಬಂದ ಮೇಲೆ ಪ್ರವಾಹ ಆಗಿದೆ, ಭೀಕರ ಬರಗಾಲ ಬಂದಿದೆ. ಕೆಲವು ಸಮಸ್ಯೆಗಳಿವೆ ಎಲ್ಲವೂ ಒಂದೇ ದಿನ ಪರಿಹಾರ ಮಾಡುತ್ತೇವೆ ಅಂಕ ಹೇಳೋಕೆ ಆಗುವುದಿಲ್ಲ. ವಿರೋಧಪಕ್ಷವಾಗಿ ಏನಾದರೂ ಹೇಳಬೇಕಲ್ಲ ಅದಕ್ಕೆ ಇಂತಹ ಹೇಳಿಕೆಗಳನ್ನ ಕೊಡುತ್ತಾರೆ. ಇಲ್ಲ ಅಂದ್ರೆ ಎಲ್ಲೋ ಒಂದ್ ಕಡೆ ಹೊಂದಾಣಿಕೆ ಮಾಡಿಕೊಂಡಿದ್ದಾರೆನೋ ಅಂತ ಜನಕ್ಕೆ ಮೆಸೇಜ್ ಹೋಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಹೇಳ್ತಾರೆ, ಅದಕ್ಕೆ ತಕ್ಕ ಉತ್ತರ ಬಿಎಸ್‌ವೈ ಕೊಡುತ್ತಾರೆ ಎಂದು ತಿಳಿಸಿದ್ದಾರೆ.

ಸಿಎಂ ಬಿಎಸ್‌ವೈ ಸಿದ್ದರಾಮಯ್ಯ ಕ್ಷೇತ್ರಕ್ಕೆ 630 ಕೋಟಿ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ತಮ್ಮ ಕ್ಷೇತ್ರಕ್ಕೆ ಅನುದಾನ ನೀಡಿದ್ದನ್ನು ಹೇಳುವುದಿಲ್ಲ, ಎಲ್ಲ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಹೇಳಿದ್ದಾರೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"