* ದಾಖಲೆ-ಭರ್ಜರಿ 11 ಲಕ್ಷ ಕ್ವಿಂಟಲ್‌ ಮೆಣಸಿನ ಕಾಯಿ ಮಾರಾಟ* ಆತಂಕ ನಿವಾರಿಸಿ ರೈತರಲ್ಲಿ ಮೂಡಿದ ಮಂದಹಾಸ* 12 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹ

ಶಿವಾನಂದ ಮಲ್ಲನಗೌಡರ

ಬ್ಯಾಡಗಿ(ಮೇ.21): ಕೊರೋನಾ ಕಾಲದಲ್ಲೂ ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ಒಟ್ಟು 2 ಸಾವಿರ ಕೋಟಿ ಮೆಣಸಿನಕಾಯಿ ವಹಿವಾಟು ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಷ್ಟೇ ಅಲ್ಲದೆ ಇಲ್ಲಿಯ ವಹಿವಾಟು ಕೇವಲ 2 ವರ್ಷದಲ್ಲಿ ದ್ವಿಗುಣಗೊಂಡಿದೆ. ಇದು ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳು ಮುಚ್ಚಿಹೋಗುತ್ತವೆ ಎಂಬ ಆತಂಕವನ್ನು ನಿವಾರಿಸಿ ರೈತರಲ್ಲಿ ಮಂದಹಾಸ ಮೂಡಿಸಿದೆ.

ಬ್ಯಾಡಗಿ ಎಪಿಎಂಸಿಯಲ್ಲಿ ಕಳೆದ 2017-18ರಲ್ಲಿ . 920 ಕೋಟಿ (10.41 ಲಕ್ಷ ಕ್ವಿಂಟಲ್‌ ಆವಕ) ವಹಿವಾಟು ನಡೆದಿದ್ದರೆ, 2018- 19ರಲ್ಲಿ . 1009 ಕೋಟಿ (13.96 ಲಕ್ಷ ಕ್ವಿಂಟಲ್‌ ಆವಕ), 2019- 20ರಲ್ಲಿ .1260 ಕೋಟಿ (8.42 ಲಕ್ಷ ಕ್ವಿಂಟಲ್‌ ಆವಕ) ಪ್ರಸಕ್ತ ವರ್ಷ ಅಂದರೆ 2020- 21ರಲ್ಲಿ .1997 ಕೋಟಿ (11.09 ಲಕ್ಷ ಕ್ವಿಂಟಲ್‌ ಆವಕ) ವಹಿವಾಟು ನಡೆದಿದ್ದು, ಇದರಿಂದ ಒಟ್ಟಾರೆ 12 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದೆ. 

ಹಾವೇರಿ: ಬೆಲೆ ಸಿಗದೇ ಸೇವಂತಿ ಹೂವು ಬೆಳೆ ನಾಶಪಡಿಸಿದ ರೈತ

ಮುಕ್ತ ಮಾರುಕಟ್ಟೆ ಘೋಷಣೆ ಬಳಿಕ ವ್ಯಾಪಾರಸ್ಥರ ಸಂತೈಸುವ ನಿಟ್ಟಿನಲ್ಲಿ ಸರ್ಕಾರ 1.50 (ಪ್ರತಿ 100ಕ್ಕೆ) ಇದ್ದಂತಹ ಮಾರುಕಟ್ಟೆಶುಲ್ಕವನ್ನು ಕೇವಲ 0.60 ಪೈಸೆಗೆ ಇಳಿಸಿತು. ಇಲ್ಲದಿದ್ದರೆ ಮಾರುಕಟ್ಟೆಶುಲ್ಕ 30 ಕೋಟಿ ಸಮೀಪಿಸುತ್ತಿತ್ತು ಎಂಬುದು ಮಾರುಕಟ್ಟೆತಜ್ಞರ ಅಭಿಪ್ರಾಯ.