ಭದ್ರವತಿಯಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಬಿ ವೈ ವಿಜಯೇಂದ್ರ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೇ  ಬಿಜೆಪಿ ಸರ್ಕಾರ ದಬ್ಬಾಳಿಕೆಗೆ ಅವಕಾಶ  ನೀಡಲ್ಲ ಎಂದು ವಾರ್ನಿಂಗ್ ನೀಡಿದರು. 

ಭದ್ರಾವತಿ (ಮಾ.15): ಭದ್ರಾವತಿ ಗಲಾಟೆಯಲ್ಲಿ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಬಿ ವೈ ವಿಜಯೇಂದ್ರ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

ಕಾರ್ಯಕರ್ತರ ಬೆನ್ನ ಹಿಂದೆ ನಾವಿದ್ದೇವೆ ಎಂದು ಭದ್ರಾವತಿಯ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಮನೆಗೆ ಭೇಟಿ ನೀಡಿದ ವೇಳೆ ವಿಜಯೇಂದ್ರ ಹೇಳಿದರು. 

ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ ವಿಜಯೇಂದ್ರ ಕಾಂಗ್ರೆಸ್​ ಮಾಡುವ ಗೂಂಡಾಗಿರಿಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅವಕಾಶ ನೀಡುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕೆಟ್ಟ ಸಂಸ್ಕೃತಿಯಿಂದ ಕೂಡಿರುವ ಕಾಂಗ್ರೆಸ್ ನಾಯಕರಿಗೆ ಒಳ್ಳೆಯದು ಯಾವುದೂ ಕಣ್ಣಿಗೆ ಕಾಣುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. 

ಸಿಡಿ ಕೇಸ್; ಮಹತ್ವದ ಸಂಗತಿ ಇಟ್ಟುಕೊಂಡು ಸಿಎಂ ಭೇಟಿ ಮಾಡ್ತಾರೆ ಬ್ರದರ್ಸ್ ...

ಜೈ ಶ್ರೀರಾಮ್​ ಘೋಷಣೆ ಕೂಗಿದ ಬಿಜೆಪಿಗರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರು ಮತ್ತವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ . ಭದ್ರಾವತಿ ಶಾಸಕರ ನೇತೃತ್ವದಲ್ಲಿ ತುಘಲಕ್​ ದರ್ಬಾರ್​ ನಡೆದಿದೆ . ಕಾಂಗ್ರೆಸ್​ ಪಕ್ಷ‌ ಅದನ್ನು ಬೆಂಬಲಿಸಿ ತನ್ನ ಅಸ್ತಿತ್ವ ಹುಡುಕುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. 

 ಇದೇ ವೇಳೆ ವಿಜಯೇಂದ್ರ ಕಾಂಗ್ರೆಸ್​ನವರ ಗೂಂಡಾಗಿರಿಗೆ ಇಲ್ಲಿ ಅವಕಾಶ ಇರಲ್ಲ ಎಂದು ಎಚ್ಚರಿಕೆ ನೀಡಿದರು.