ಪಕ್ಷ ಎಲ್ಲಿ ಟಿಕೆಟ್‌ ನೀಡಿದ್ರೂ ಸ್ಪರ್ಧೆ ಮಾಡುವೆ: ವಿಜಯೇಂದ್ರ

ಸಿಎಂ ಬದಲಿಲ್ಲ ಎಂದು ಶಾ ಅವರೆ ಹೇಳಿದ್ದಾರೆ, ಯತ್ನಾಳ್‌ ಹೇಳಿಕೆಗೆ ಸಿಎಂ ಪುತ್ರ ತಿರುಗೇಟು| ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ವಿಜಯೇಂದ್ರ| ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು ಕಾಂಗ್ರೆಸಿಗೆ ಯಾವುದೇ ವಿಷಯ ಇಲ್ಲ| ಸಿಡಿ ಪ್ರಕರಣ ಹಿಡಿದುಕೊಂಡು ಕೂತಿದ್ದಾರೆ| 

BY Vijayendra Talks Over Contest the Election grg

ಕಲಬುರಗಿ(ಮಾ.25): ‘ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತದೆ. ಎಲ್ಲಿ ಟಿಕೆಟ್‌ ನೀಡಿದರೂ ನಾನು ಸ್ಪರ್ಧೆ ಮಾಡುತ್ತೇನೆ. ಸದ್ಯ ಪಕ್ಷದ ಉನ್ನತ ಮುಖಂಡರ ಸೂಚನೆಯಂತೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ’

ಇದು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುವ ಸಾಧ್ಯತೆಗಳ ಬಗ್ಗೆ ನಗರದಲ್ಲಿ ಬುಧವಾರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡಿರುವ ಉತ್ತರ. ನಾನು ಸ್ಪರ್ಧೆ ಮಾಡುವುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ನಾನು ಎಲ್ಲಿ ಸ್ಪರ್ಧೆ ಮಾಡಬೇಕು, ಸ್ಪರ್ಧೆ ಮಾಡಬೇಕೋ ಬೇಡವೋ ಅನ್ನೋದನ್ನು ಹೈ ಕಮಾಂಡ್‌ ನಿರ್ಧರಿಸುತ್ತದೆ ಎಂದರು. ಇದೇ ವೇಳೆ ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು ಕಾಂಗ್ರೆಸಿಗೆ ಯಾವುದೇ ವಿಷಯ ಇಲ್ಲ, ಹೀಗಾಗಿ ಸಿ.ಡಿ. ಪ್ರಕರಣ ಹಿಡಿದುಕೊಂಡು ಕೂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿಗೆ ಈ ಗಿಫ್ಟ್ ಕೊಡಲೇಬೇಕು... ಉಮೇಶ್ ಜಾಧವ್ ಹಕ್ಕೋತ್ತಾಯ

ಶಾ ಅವರೇ ಸಿಎಂ ಬದಲಿಲ್ಲ ಎಂದಿದ್ದಾರೆ:

ಬಸನಗೌಡ ಪಾಟೀಲ ಯತ್ನಾಳ್‌ ಅವರು ಸಿಎಂ ಬದಲಾವಣೆ ಕುರಿತಾದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅಮಿತ್‌ ಶಾ ಮತ್ತು ಅರುಣಸಿಂಗ್‌ ಅವರು ಮುಖ್ಯಮಂತ್ರಿ ಬದಲಾವಣೆ ಇಲ್ಲ ಅಂತ ಹೇಳಿದ್ದಾರೆ. ಯಡಿಯೂರಪ್ಪನವರ ಕಾರ್ಯವೈಖರಿಯನ್ನು ಕೇಂದ್ರದ ನಾಯಕರೇ ಮೆಚ್ಚಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು. ಯತ್ನಾಳ್‌ ವರ್ತನೆಯಿಂದ ಪಕ್ಷದ ಕಾರ್ಯಕರ್ತರಿಗೆ ನೋವಾಗುತ್ತಿದೆ. ಈ ರೀತಿ ಬೀದಿ ರಂಪಾಟ ಮಾಡುವುದು ಸರಿಯಲ್ಲ. ಪಕ್ಷದ ವರಿಷ್ಠರು ಇಂಥವುಗಳ ಬಗ್ಗೆ ಬಹಳ ಗಂಭೀರವಾಗಿದ್ದಾರೆ. ಎಲ್ಲ ಬೆಳವಣಿಗೆಯನ್ನು ಹೈಕಮಾಂಡ್‌ ಗಮನಿಸುತ್ತಿದೆ ಎಂದರು.
 

Latest Videos
Follow Us:
Download App:
  • android
  • ios