ಮೈಸೂರು[ಫೆ.10]:  ರಸ್ತೆ ಅಪ​ಘಾ​ತ​ದಲ್ಲಿ ಗಾಯ​ಗೊಂಡಿ​ದ್ದ​ವ​ರನ್ನು ಆಸ್ಪ​ತ್ರೆಗೆ ಸಾಗಿ​ಸಲು ಮುಖ್ಯ​ಮಂತ್ರಿ ಬಿ.ಎಸ್‌.ಯಡಿ​ಯೂ​ರಪ್ಪ ಅವರ ಪುತ್ರ ಬಿ.ವೈ.ವಿಜ​ಯೇಂದ್ರ ನೆರ​ವಾ​ಗುವ ಮೂಲಕ ಮಾನ​ವೀ​ಯತೆ ಮೆರೆದ ಘಟನೆ ಮೈಸೂರಿನಲ್ಲಿ ನಡೆದಿದೆ.

ಗಾಜಿನ ಮನೆಯಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರ ಮಿಂಚಿನ ಸಂಚಾರ!

ಭಾನು​ವಾರ ಮೈಸೂ​ರಿಗೆ ಭೇಟಿ ನೀಡಿದ್ದ ವಿಜ​ಯೇಂದ್ರ ಬನ್ನೂರು ರಸ್ತೆಯಲ್ಲಿ ಹೋಗು​ತ್ತಿ​ದ್ದರು. ಮಾರ್ಗ ಮಧ್ಯೆ ರಸ್ತೆ ಅಪ​ಘಾ​ತ​ದಲ್ಲಿ ಗಾಯ​ಗೊಂಡಿದ್ದ​ವರು ಆ್ಯಂಬು​ಲೆನ್ಸ್‌ ಬರು​ವಿ​ಕೆ​ಗಾಗಿ ಕಾದು ಕುಳಿ​ತಿದ್ದರು.

ಇದನ್ನು ಗಮ​ನಿ​ಸಿದ ವಿಜ​ಯೇಂದ್ರ ಅವರು, ತಮ್ಮೊಂದಿಗೆ ಇದ್ದ ಸ್ಕಾರ್ಪಿ​ಯೋ ವಾಹ​ನ​ದಲ್ಲಿ ಗಾಯಾ​ಳನ್ನು ಮೈಸೂ​ರಿನ ಆಸ್ಪ​ತ್ರೆಗೆ ಕರೆ​ದು​ಕೊಂಡು ಹೋಗುವ ವ್ಯವಸ್ಥೆ ಮಾಡಿದರು. ಇದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸಂಪುಟ ವಿಸ್ತರಣೆ ಕಸರತ್ತಿನಲ್ಲಿ ವಿಜಯೇಂದ್ರ ಕೇಂದ್ರ ಬಿಂದು!