ತುಮಕೂರು(ಅ.02): ಬಿ.ಎಸ್‌.ಯಡಿಯೂರಪ್ಪ ಅವರು ಪುಕ್ಸಟ್ಟೆಮುಖ್ಯಮಂತ್ರಿಯಾದವರಲ್ಲ ಎಂದು ಪುತ್ರ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಂಗಳವಾರ ಆಗಮಿಸಿ ಲಿಂ.ಡಾ.ಶಿವಕುಮಾರಸ್ವಾಮೀಜಿ ಅವರ ಗದ್ದುಗೆ ದರ್ಶನ ಮಾಡಿ, ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

40 ವರ್ಷದ ಹೋರಾಟ ನಂತ್ರ ಸಿಎಂ ಆದ್ರು:

ರಾಜ್ಯದಲ್ಲಿ ಯಡಿಯೂರಪ್ಪ ಅವರು 40 ವರ್ಷಗಳ ಕಾಲ ಹೋರಾಟ ಮಾಡಿ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಪ್ರಾಮುಖ್ಯತೆ, ಗೌರವ ನನಗೆ ಗೊತ್ತು ಎಂದರು.

ಸಿದ್ಧಗಂಗಾ ಪುಣ್ಯಕ್ಷೇತ್ರದಲ್ಲಿ ತಾವು ನಿಂತು ಹೇಳುತ್ತಿದ್ದೇನೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರದಿಂದ ಹಣ ಬಂದಿಲ್ಲ ಎಂದು ಕೆಲಸ ನಿಂತಿಲ್ಲ:

ಕೇಂದ್ರದಿಂದ ನೆರೆ ಪರಿಹಾರ ಬರುವುದು ತಡವಾಗಿರುವುದು ನಿಜ ಎಂದು ಒಪ್ಪಿಕೊಂಡ ಅವರು, ಪರಿಹಾರ ಬಂದಿಲ್ಲವೆಂದು ಕೆಲಸಗಳು ನಿಂತಿಲ್ಲ. ಕೇಂದ್ರದಿಂದ ನೆರೆ ಪರಿಹಾರ ತಡವಾಗಿರುವುದರ ಬಗ್ಗೆ ನನ್ನ ಬಳಿ ಉತ್ತರವಿಲ್ಲ. ಆದರೆ ಬರುವ ದಿನಗಳಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಲಕ್ಷ್ಮೀಗೆ ಕೋಟಿ ಕೋಟಿ ಸಾಲ : ಕಾಂಗ್ರೆಸ್ ಮುಖಂಡ ರಾಜಣ್ಣಗೆ ಸಂಕಷ್ಟ

ಬೆಂಗಳೂರಿನಲ್ಲಿರುವ ಎಲ್ಲಾ ಬಿಜೆಪಿ ಕಾರ್ಪೋರೇಟರ್‌, ಶಾಸಕರು ಸಭೆ ನಡೆಸಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೇಯರ್‌ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿಯನ್ನು ಕಡೆಗಣಿಸಿದ್ದರು ಎಂಬುದು ಸಾಧ್ಯವಿಲ್ಲ ಎಂದಿದ್ದಾರೆ.

ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಬರುವ ದಿನಗಳಲ್ಲಿ ಸೇರ್ಪಡೆ ವಿಚಾರಕ್ಕೆ ಚರ್ಚೆ ಮಾಡಲಾಗುವುದು. ಹೈಕಮಾಂಡ್‌ ತುಂಬಾ ಟೈಟಾಗಿದ್ದು ಸರ್ಕಾರ ಮೂರುವರೆ ವರ್ಷ ಇರಲಿ ಅಂತ ತುಂಬಾ ಸ್ಟ್ರಿಕ್ಟಾಗಿದೆ ಎಂದಿದ್ದಾರೆ.

ತುಮಕೂರು: ಹೇಮಾವತಿ ನಾಲಾ ಕಚೇರಿಗೆ ರೈತರಿಂದ ಬೀಗ