ಬೆಂಗಳೂರು, [ಜೂನ್.04]: ಬೆಂಗಳೂರಿನ ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ವರೆಗಿನ ರಸ್ತೆ 6 ದಿನಗಳ ಕಾಲ ಬಂದ್ ಆಗಲಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕೆಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ[BWSSB] ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ರಸ್ತೆ ಬಂದ್ ಆಗಲಿದೆ.

ನಾಳೆ ಅಂದರೆ ದಿನಾಂಕ 5-6-19 ರಿಂದ 10-6-19 ರವರೆಗೆ 6 ದಿನಗಳ ಕಾಲ ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ರಸ್ತೆ ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಆದ್ದರಿಂದ ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ರಸ್ತೆ ಮೂಲಕ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಒಳಿತು.