Asianet Suvarna News Asianet Suvarna News

ಬೆಂಗಳೂರಿಗರಿಗೆ ವಿದ್ಯುತ್ ಜತೆಗೆ ನೀರಿನ ದರ ಏರಿಕೆ 'ಗಿಫ್ಟ್': ಎಷ್ಟು..?

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಹನಿ ಹನಿ ನೀರಿಗೂ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದ್ಕಡೆ ರಾಜ್ಯದ ಜನತೆಗೆ ಪವರ್ ಶಾಕ್ ಎದುರಾಗಿದ್ರೆ, ಮತ್ತೊಂದೆಡೆ ಬೆಂಗಳೂರಿಗರಿಗೆ ನೀರಿನ ದರ ಏರಿಕೆ ಶಾಕ್ ಕಾದಿದೆ. 

BWSSB May Hike Water Tariff In Bengaluru
Author
Bengaluru, First Published May 16, 2019, 9:14 PM IST

ಬೆಂಗಳೂರು, [ಮೇ.16]: ಸಧ್ಯದಲ್ಲೇ ಸಿಲಿಕಾನ್ ಸಿಟಿ ಜನರಿಗೆ ವಾಟರ್ ಶಾಕ್ ನೀಡಲು ಬೆಂಗಳೂರು ಜಲ ಮಂಡಳಿ ಮುಂದಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ನೀರಿನ ದರ ಪರಿಷ್ಕರಣೆ ಮಾಡಲು ಜಲ ಮಂಡಳಿ ನಿರ್ಧರಿಸಿದೆ.

ಈಗಾಗಲೇ ನೀರಿನ ದರ ಏರಿಕೆ ಕುರಿತು ಜಲ ಮಂಡಳಿ ಸಮಿತಿ ಕೂಡ ರಚನೆ ಮಾಡಿದ್ದು, ಮೇ ಕೊನೆಯ ವಾರದಲ್ಲಿ ದರ ಪರಿಷ್ಕರಣೆಯ ವರದಿ ಸರ್ಕಾರದ ಕೈಸೇರಲಿದೆ ಎಂದು ಜಲ ಮಂಡಳಿ ಮುಖ್ಯ ಅಭಿಯಂತರ ಕೆಂಪರಾಮಯ್ಯ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯದ ಜನರಿಗೆ ವಿದ್ಯುತ್ ಶಾಕ್..?

2006 ಹಾಗೂ 2014 ರಲ್ಲಿ ನೀರಿನ ದರ ಪರಿಷ್ಕರಣೆ ಮಾಡಲಾಗಿತ್ತು. ಅದಿನಿಂದ ಇಲ್ಲಿ ತನಕ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಜಲ ಮಂಡಳಿ 2014 ರಲ್ಲಿ 30 ಕೋಟಿ ಬಿಲ್ ಕಟ್ಟಲಾಗುತ್ತಿತ್ತು.

ಆದ್ರೆ, ಇದೀಗ 48 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ವಾರ್ಷಿಕ ಜಲ ಮಂಡಳಿಗೆ 48 ಕೋಟಿಯಷ್ಟು ನಷ್ಟ ಸಂಭವಿಸುತ್ತಿದೆ. ಹೀಗಾಗಿ ನೀರಿನ ದರ ಪರಿಷ್ಕರಣೆ ಜಲ ಮಂಡಳಿಗೆ ಅನಿವಾರ್ಯ ಎಂದು ಮುಖ್ಯ ಅಭಿಯಂತರ ಕೆಂಪರಾಮಯ್ಯ ಹೇಳಿದ್ದಾರೆ.

ಪ್ರಸ್ತುತ ನೀರಿನ ದರ:
ಮನೆಗಳಿಗೆ 8000 ಲೀಟರ್ ವರೆಗೆ ಪ್ರತಿ ಸಾವಿರ ಲೀಟರ್ ಗೆ 7 ರೂ.
8000-25000 ಲೀಟರ್ ವರೆಗೆ ಪ್ರತಿ ಸಾವಿರ ಲೀಟರ್ ಗೆ 11 ರೂ.
25000-50000 ಲೀಟರ್ವರೆಗೆ ಪ್ರತಿ ಸಾವಿರ ಲೀಟರ್ ಗೆ 26 ರೂ.

ಗೃಹ ಬಳಕೆಗೆ ನೀರಿನ‌ ದರ
0-8000ಲೀಟರ್ -7 ರೂ. ಪ್ರತಿ ಸಾವಿರ ಲೀಟರ್ ಗೆ
 8000-25000ಲೀಟರ್ - 11ರೂ. ಪ್ರತಿ ಸಾವಿರ ಲೀಟರ್ ಗೆ
25000-50000ಲೀಟರ್ -26 ರೂ. ಪ್ರತಿ ಸಾವಿರ ಲೀಟರ್ ಗೆ
50000ಕ್ಕೂ ಅಧಿಕ ಲೀಟರ್ -45 ರೂ. ಪ್ರತಿ ಸಾವಿರ ಲೀಟರ್ ಗೆ

ವಾಣಿಜ್ಯ ಬಳಕೆಗೆ ನೀರಿನ‌ ದರ
10ಸಾವಿರ ಲೀಟರ್ ತನಕ -50 ರೂ. ಪ್ರತಿ ಸಾವಿರ ಲೀಟರ್ ಗೆ.
10ಸಾವಿರ ದಿಂದ 25ಸಾವಿರ ಲೀಟರ್ - 57ರೂ. ಪ್ರತಿ ಸಾವಿರ ಲೀಟರ್ ಗೆ.
25000-50000ಲೀಟರ್ -65 ರೂ. ಪ್ರತಿ ಸಾವಿರ ಲೀಟರ್ ಗೆ.
50000 -75000 ಲೀಟರ್ -76 ರೂ. ಪ್ರತಿ ಸಾವಿರ ಲೀಟರ್ ಗೆ.
75ಸಾವಿರ ಲೀಟರ್ ಗೂ ಅಧಿಕ - 87ರೂ. ಪ್ರತಿ ಸಾವಿರ ಲೀಟರ್ ಗೆ.

Follow Us:
Download App:
  • android
  • ios