ಧಾರ​ವಾಡ :  ನಗರ ಸಾರಿಗೆ ಸಂಸ್ಥೆಯ ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಗುರು​ವಾರ ಇಲ್ಲಿನ ಕರ್ನಾ​ಟಕ ವಿಶ್ವ​ವಿ​ದ್ಯಾ​ಲ​ಯದ ಬಳಿಯ ಶ್ರೀನ​ಗರ ರೇಲ್ವೆ ಗೇಟ್‌​ನಲ್ಲಿ ಭಾರೀ ರೈಲು ದುರಂತ​ವೊಂದು ತಪ್ಪಿ​ದ್ದು 40ಕ್ಕೂ ಹೆಚ್ಚು ಪ್ರಯಾಣಿಕರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಧಾರ​ವಾಡ ಸಿಬಿ​ಟಿ​ಯಿಂದ ಕರ್ನಾ​ಟಕ ವಿಶ್ವ​ವಿ​ದ್ಯಾ​ಲ​ಯಕ್ಕೆ ಹೊರ​ಟ್ಟಿದ್ದ ಸಿಬಿ​ಟಿ-ಪಾವಟೆನ​ಗರ ಬಸ್‌ ಬೆಳಗ್ಗೆ 11.30ರ ಸುಮಾ​ರಿಗೆ ರೇಲ್ವೆ ಗೇಟ್‌ ದಾಟು​ವಾಗ ಈ ಅಚಾ​ತುರ್ಯ ನಡೆ​ದಿದೆ.

ಆಗಿದ್ದೇನು?:

ಗೇಟು ತೆರೆದೇ ಇದ್ದರೂ ಯಾವುದೇ ಸೂಚನೆ, ಸಿಗ್ನಲ್‌ ನೀಡದೇ ಕೊನೆ ಪಕ್ಷ ಶಬ್ದ ಸಹ ಮಾಡದೇ ಏಕಾ​ಏಕಿ ‘ಅಪ​ಘಾತ ನಿರ್ವ​ಹಣಾ ವೈದ್ಯ​ಕೀಯ ರೈಲು’ ಬಂದುಬಿಟ್ಟಿದೆ. ಇದನ್ನು ಗಮ​ನಿ​ಸಿದ ಬಸ್‌ ಚಾಲಕ ತಕ್ಷಣ ಆ್ಯಕ್ಸೆಲರೇ​ಟರ್‌ ಮೇಲಿದ್ದ ಕಾಲನ್ನು ಇನ್ನಷ್ಟುಜೋರಾಗಿ ಒತ್ತಿ, ‘ಕ್ಷಣ​ಮಾ​ತ್ರ​ದಲ್ಲೇ’ ಬಸ್‌ಅನ್ನು ರೇಲ್ವೆ ಗೇಟ್‌​ನಿಂದ ದಾಟಿ​ಸಿ​ ಬಸ್ಸಿ​ನ​ಲ್ಲಿದ್ದವರ ಪ್ರಾಣ ಉಳಿ​ಸಿ​ದ್ದಾ​ರೆ.

ಈ ರೈಲು ಸಂಚಾರದ ಬಗ್ಗೆ ರೈಲ್ವೆಯ ಲೋಕೋ​ಪೈ​ಲ​ಟ್‌ ಹಾಗೂ ನಿಲ್ದಾಣದ ಸಿಬ್ಬಂದಿಗಳು ಶ್ರೀನಗರದ ರೈಲ್ವೆ ಗೇಟ್‌ಮನ್‌ಗೆ ಯಾವುದೇ ಸಿಗ್ನಲ್‌ ನೀಡಿರಲಿಲ್ಲ ಎನ್ನಲಾಗಿದೆ. ಇದೇ ಈ ಅವಾಂತರಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ನೈಋುತ್ಯ ರೈಲ್ವೆ ತನಿಖೆ ಆರಂಭಿಸಿದೆ ಎಂದು ತಿಳಿದುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ.

ಸಮಯಪ್ರಜ್ಞೆ ಮೆರೆದು 40 ಜನರ ಪ್ರಾಣ ರಕ್ಷಿಸಿದ ಬಸ್‌ ಚಾಲಕ ಶಬ್ಬೀರ್‌ ಅವ​ರನ್ನು ಕವಿವಿ ಶಂಶೋ​ಧನಾ ವಿದ್ಯಾ​ರ್ಥಿ​ಗಳ ಪರ​ವಾಗಿ ಬಸ್ಸಿನ ಬಳಿ ಸನ್ಮಾ​ನಿ​ಸ​ಲಾ​ಯಿ​ತು.