Hubballi Kims ಆವರಣದಲ್ಲಿ ಕಟ್ಟಡಕ್ಕೆ ಕಟ್ಟಿದ್ದ ಸಾರ್ ಬಿದ್ದು 6 ವಾಹನ ಜಖಂ
ಬಿಲ್ಡಿಂಗ್ ನಿರ್ಮಾಣದ ವೇಳೆಯಲ್ಲಿ ಕಟ್ಟಿರುವ ಕಟ್ಟಿಗೆಯ ಸಾರ್ ಕಳಚಿ ಬಿದ್ದು ಸುಮಾರು ಆರು ವಾಹನಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ನಡೆದಿದೆ. ಮಳೆ ಬಂದ ಕಾರಣ ಯಾರೊಬ್ಬರೂ ಘಟನಾ ಸ್ಥಳದಲ್ಲಿ ಇರದಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಹುಬ್ಬಳ್ಳಿ (ಜೂ.15): ಬಿಲ್ಡಿಂಗ್ ನಿರ್ಮಾಣದ ವೇಳೆಯಲ್ಲಿ ಕಟ್ಟಿರುವ ಕಟ್ಟಿಗೆಯ ಸಾರ್ ಕಳಚಿ ಬಿದ್ದು ಸುಮಾರು ಆರು ವಾಹನಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ತುರ್ತು ಚಿಕಿತ್ಸಾ ವಿಭಾಗದ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ಬಳಿಯಲ್ಲಿ ನಡೆದಿದೆ.
ಕಾರ್ಮಿಕರ ಹಾಗೂ ಗುತ್ತಿಗೆದಾರರ ಅಜಾಗರೂಕತೆಯಿಂದ ಇಂತಹದೊಂದು ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೃಹತ್ ಗಾತ್ರದಲ್ಲಿ ಕಟ್ಟಿದ್ದ ಕಟ್ಟಿಗೆಯ ಸಾರ್ ಏಕಾಏಕಿ ಕಳಚಿ ಬಿದ್ದಿದ್ದು, ಸ್ಥಳದಲ್ಲಿಯೇ ಪಾರ್ಕ್ ಮಾಡಿದ್ದ ಆರು ವಾಹನಗಳು ಜಖಂಗೊಂಡಿದೆ.
ಇನ್ನೂ ಈ ಕಟ್ಟಡ ಅಡಿಯಲ್ಲಿ ದಿನವೂ ಸುಮಾರು ಜನ ರೋಗಿಗಳ ಸಿಬ್ಬಂದಿಗಳು ನಿಲ್ಲುತ್ತಿದ್ದರು ಆದರೆ ಇಂದು ಮಳೆ ಬಂದ ಕಾರಣ ಯಾರೊಬ್ಬರೂ ಅಲ್ಲಿ ಇಲ್ಲದಿರುವುದು ಸಂಭವಿಸಬಹುದಾದ ದೊಡ್ಡ ಅಪಘಾತ ತಪ್ಪಿದಂತಾಗಿದೆ.
ಸಿ.ಟಿ.ರವಿ ಕ್ಷೇತ್ರದಲ್ಲಿ ಬುಲ್ಡೋಜರ್ ಸದ್ದು, ಅಕ್ರಮ ಗೋ ಮಾಂಸ ಅಡ್ಡೆಗಳ ಮೇಲೆ ದಾಳಿ
Hubballi Kims ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!: ಹುಬ್ಬಳ್ಳಿಯ (Kims) ಕಿಮ್ಸ್ (Hubballi) ಆಸ್ಪತ್ರೆಯಲ್ಲಿ 40 ದಿನದ ಹಸುಗೂಸು ಕಳ್ಳತನವಾದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಸ್ಪತ್ರೆಯಲ್ಲಿ ತಾಯಿ ಕೈಯಿಂದಲೇ ನಾಪತ್ತೆ ಆಗಿದ್ದ ಮಗು, ಈಗ ಪತ್ತೆಯಾಗಿದ್ದು ಪ್ರಕರಣ ತೀವ್ರ ಕುತೂಹಲ ಹುಟ್ಟುಹಾಕಿದೆ. ಮಗು ಕಳುವಿನ ಪ್ರಕರಣದಲ್ಲಿ ತಾಯಿಯೇ ಸೂತ್ರದಾರಿಯೇ? ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ.
40 ದಿನದ ಹಸುಗೂಸುನ್ನು ತನ್ನ ಕೈಯಿಂದ ಕಸಿದುಕೊಂಡು ಕದ್ದೊಯ್ದಿದ್ದಾರೆ ಎಂದು ಮಗುವಿನ ತಾಯಿ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಎಂಬುವವರು ನಿನ್ನೆ ಆರೋಪಿಸಿದ್ದರು. ಕಿಮ್ಸ್ ನಲ್ಲಿ ಮಗು ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದೆ ಅಲರ್ಟ್ ಆದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಭೂರಾಮ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ. ಮೂರು ಪ್ರತ್ಯೇಕ ತಂಡಗಳ ರಚಿಸಿ ತನಿಕೆಗೆ ಆದೇಶಿಸಿದ್ದರು. ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಏಕಾಏಕಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಮಗು ಪತ್ತೆಯಾಗಿದೆ.
ಕೊಪ್ಪಳ; Kara Hunnime ಓಟದಲ್ಲಿ ಗೆದ್ದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆದಿದ್ದ
ರಾತ್ರೋರಾತ್ರಿ ಮಗು ಪತ್ತೆ.!
ಮಗು ಕಳುವಿನ ಪ್ರಕರಣದ ಬಗ್ಗೆ ತಲೆಕೆಡಿಸಿಕೊಂಡಿದ್ದ ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ತನಿಖೆ ಚುರಕುಗೊಳಿಸುತ್ತಿದ್ದಂತೆ ನಾಪತ್ತೆಯಾಗಿದ್ದ 40 ದಿನದ ಹಸುಗೂಸು ಕಿಮ್ಸ್ ನಲ್ಲಿಯೇ ಪತ್ತೆಯಾಗಿದೆ. ಕಿಮ್ಸ್ ಮಕ್ಕಳ ವಾರ್ಡ್ ನ ಹಿಂಭಾಗದಲ್ಲಿ ಮಗುವನ್ನು ಬಿಟ್ಟು ಹೋಗಲಾಗಿದೆ. ಮಗುವಿನ ಅಳು ಗಮನಿಸಿದ ಸ್ಥಳೀಯರು ಕಿಮ್ಸ್ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದು, ಸದ್ಯ ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಯ ಇರಿಸಲಾಗಿದೆ.
ಹಾಗಿದ್ದರೆ ಮಗು ಕದ್ದವರು ಯಾರು? ತಾಯಿ ಕೈಯಿಂದ ಮಗು ಕಿತ್ತುಕೊಂಡ ಹೋಗಲು ತಾಯಿಯ ಸಹಕಾರ ಇತ್ತಾ? ಎಂಬ ಸಂಶಯ ಹುಟ್ಟಿಕೊಂಡಿದೆ. ಇದಕ್ಕೆ ಬಲವಾದ ಕಾರಣಗಳು ಇವೆ. ಮಗು ಕಸಿದುಕೊಂಡು ಪರಾರಿಯಾಗಿದ್ದರೆ ಎಂದು ಆರೋಪಿಸಿದ್ದ ತಾಯಿ, ಮಗು ಇಲ್ಲದ ಬಗ್ಗೆ ಆಕೆಯ ಮುಖದಲ್ಲಿ ಕೊರಗು ಇರಲಿಲ್ಲ. ಅಷ್ಟೇ ಅಲ್ಲ ಕೆಲ ಪೋನ್ ಕರೆಗಳ ಮಾಹಿತಿ ಪೊಲೀಸರು ಕಲೆ ಹಾಕಿದ್ದು ನೈಜ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಗು!
ಕುಂದಗೋಳದ ನೆಹರೂ ನಗರದ ನಿವಾಸಿಯಾಗಿರು ಮಹಿಳೆ ಉಮ್ನೇ ಜೈನಾಬ್ ಶೇಖ್, ಅನಾರೋಗ್ಯದ ಹಿನ್ನೆಲೆ ಜೂನ್ 10 ರಂದು ಕಿಮ್ಸ್ ಗೆ ಮಗುವನ್ನು ದಾಖಲಿಸಿದ್ದರು. ಹೆಮೊರಾಜಿಕಲ್ ಡಿಸೀಸ್ ಆಫ್ ನ್ಯೂ ಬಾರ್ನ್ ರೋಗದಿಂದ ಬಳಲುತ್ತಿದ್ದ ಮಗುವಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಗುವಿನ ತೂಕ ಹೆಚ್ಚಿಸುವ ಉದ್ದೇಶದಿಂದ ಕಿಮ್ಸ್ ಗೆ ದಾಖಲು ಮಾಡಲು ವೈದ್ಯರು ಹೇಳಿದ್ದರು. ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು. ಆದ್ರೆ ಏಕಾಏಕಿ ನಿನ್ನೆ ಮಧ್ಯಾಹ್ನ ಮಗು ಕಳುವಾದ ಬಗ್ಗೆ ಪೋಷಕರು ಆರೋಪಿಸಿದ್ದರು.