ಕೋಲಾರ  [ಜ.13]:  ಜಿಲ್ಲೆಯ ಕೆ.ಜಿ.ಹಳ್ಳಿ ಗ್ರಾಮದ ಸರ್ವೆ ನಂ. 73 ಸರ್ಕಾರಿ ಭೂಮಿಯಾಗಿದ್ದು ಇಲ್ಲಿ ಸರ್ಕಾರಿ ಶಾಲಾ ಸಮುಚ್ಚಯ, ಅಂಬೇಡ್ಕರ್ ಭವನ, ಸಮುದಾಯ ಭವನ ಇತರೆ  ಸರ್ಕಾರಿ ಇಲಾಖೆಗಳಿಗೆ ಸುಮಾರು 35 ಎಕರೆ ಪ್ರದೇಶವನ್ನು ನೀಡಲಾಗಿದೆ. ಈ ಸ್ಥಳವನ್ನು ಗುರುತಿಸುವ ಸಲುವಾಗಿ ಭೂಮಾಪನ ಇಲಾಖೆ ನಡೆಸುತ್ತಿರುವ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. 

ಸರ್ವೇ ವರದಿ ಬರುವ ತನಕ ಖಾಸಗಿ ವ್ಯಕ್ತಿಗಳು ಸರ್ಕಾರದ ವಶದಲ್ಲಿರುವ ಜಮೀನಿನಲ್ಲಿ ಪಾಯ ಹಾಕುವುದಾಗಲೀ, ಮನೆಕಟ್ಟುವುದಾಗಲಿ ಮಾಡಬಾರದೆಂದು ಮಾಲೂರು ತಾಲೂಕು ತಹಸೀಲ್ದಾರ್ ನಾಗವೇಣಿ ಗ್ರಾಮಸ್ಥರಿಗೆ ತಿಳಿಸಿದರು. 

ರಾಗಿಗೆ ಬೆಂಬಲ ಬೆಲೆ ಘೋಷಣೆ: ಕ್ವಿಂಟಾಲ್‌ಗೆಷ್ಟು..?...

ಖಾಸಗಿ ವ್ಯಕ್ತಿಗಳು ಸರ್ಕಾರದ ಜಮೀನಿನಲ್ಲಿ ಮನೆಗೆ ಪಾಯ ಹಾಕಿ ಮನೆ ಕಟ್ಟುವ ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯ ಕಂದಾಯ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. 

ಕೋಲಾರ: 'ಆಶ್ರಯ' ನೀಡಿದ್ದ ಮನೆ ರಾತ್ರೋ ರಾತ್ರಿ ಧ್ವಂಸ..!...

ಸಾರ್ವಜನಿಕರು ಯಾರೂ ಇಲ್ಲಿ ಮನೆ ಕಟ್ಟಬಾರದು. ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ನಡೆದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು ಹಾಗೂ ಅವರು ಕಟ್ಟಿರುವ ಮನೆ ಮತ್ತು ಪಾಯಗಳನ್ನು ನೆಲಸಮಗೊಳಿಸುವುದು ಎಂದು ಎಚ್ಚರಿಸಿದರು.