ಎಮ್ಮೆಯೊಂದು 8 ದಿನದ ಹಿಂದೆ ಗಂಡು ಕರು ಹಾಕಿತ್ತು. ಮಂಗಳವಾರ ಬೆಳಗ್ಗೆ ಮತ್ತೆ ಅದೇ ಎಮ್ಮೆ ಗಂಡು ಕರು ಹಾಕಿದ ವಿಚಿತ್ರ ಘಟನೆ ನಡೆದಿದೆ. 

ನರಸಿಂಹರಾಜಪುರ(ಜ.11):  ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಹಳಿಯೂರಿನ ಸುಧಾಕರ ಗೌಡ ಎಂಬುವರ ಮನೆಯ ಎಮ್ಮೆಯೊಂದು 8 ದಿನದ ಹಿಂದೆ ಗಂಡು ಕರು ಹಾಕಿತ್ತು. ಮಂಗಳವಾರ ಬೆಳಗ್ಗೆ ಮತ್ತೆ ಅದೇ ಎಮ್ಮೆ ಗಂಡು ಕರು ಹಾಕಿದ ವಿಚಿತ್ರ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನು ಹಲವಾರು ವರ್ಷಗಳಿಂದ ಹಸು ಸಾಕುತ್ತಿದ್ದೇನೆ. ಸಾಮಾನ್ಯವಾಗಿ ಎರಡು ಕರು ಹಾಕುವುದಾದರೆ ಒಂದೇ ದಿನದಲ್ಲಿ ಹಾಕುತ್ತದೆ. ಈ ಎಮ್ಮೆ 1 ಕರು ಹಾಕಿ 8 ದಿನದ ನಂತರ ಮತ್ತೊಂದು ಕರು ಹಾಕಿರುವುದು ವಿಶೇಷ. ಈ ಎಮ್ಮೆಗೆ ಕೃತಕ ಗರ್ಭಧಾರಣೆ ಮಾಡಿಸಿಲ್ಲ ಎಂದು ಸುಧಾಕರ ಗೌಡ ತಿಳಿಸಿದರು.

ಲೋಕಸಭಾ ಚುನಾವಣೆ 2024: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಕುಮಾರ್, ಇಂತಹ ಪ್ರಕರಣ ಇದೇ ಮೊದಲು. ಸಾಮಾನ್ಯವಾಗಿ ಹಂದಿಗಳು ಒಂದು ಮರಿ ಹಾಕಿದ ನಂತರ ಒಂದು ವಾರ ಬಿಟ್ಟು ಮತ್ತೊಂದು ಮರಿ ಹಾಕುತ್ತವೆ. ಆದರೆ, ಹಸು, ಎಮ್ಮೆಗಳು ಮಾತ್ರ ಒಂದೇ ದಿನ ಕರು ಹಾಕುತ್ತವೆ. ಈ ಪ್ರಕರಣ ಅಪರೂಪದ್ದಾಗಿದೆ ಎಂದರು.