'ಕಾಂಗ್ರೆಸ್ ಬಳಿ ಸುಳಿಯಲು ಬಿಡದ ಕಾರಣ ಬಿಜೆಪಿ ಸೇರಿದ ಮಹೇಶ್' : ರಾಜೀನಾಮೆಗೆ ಒತ್ತಡ
- ಬಿಎಸ್‌ಪಿಯಿಂದ ಗೆದ್ದಿರುವ ಎನ್.ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ
- ಬಿಜೆಪಿಯಿಂದ ಗೆದ್ದು ನೈತಿಕತೆ ಪ್ರದರ್ಶಿಸಲಿ ಎಂದು ಮಹೇಶ್‌ಗೆ ಸವಾಲು
ಕೊಳ್ಳೆಗಾಲ (ಆ.25): ಬಿಎಸ್‌ಪಿಯಿಂದ ಗೆದ್ದಿರುವ ಎನ್.ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಗೆದ್ದು ನೈತಿಕತೆ ಪ್ರದರ್ಶಿಸಲಿ ಮುಂದೆ ಶಾಸಕರು ಜೈ ಭೀಮ್ ಎಂಬ ಘೋಷಣೆ ಕೂಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ನಡೆಸಿ ಮೌನ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಶಾಸಕರು ಬುದ್ಧ ಬಸವ, ಅಂಬೇಡ್ಕರ್, ಕಾನ್ಷಿರಾಂ ಹೆಸರು ಹೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ಜೈ ಶ್ರೀರಾಮ್ ಎಂದು ಹೇಳಿಕೊಳ್ಳಲಿ. 20 ವರ್ಷ ನೂರಾರು ಯುವಕರು ಇವರ ಪರ ಹೋರಾಡಿ ಸಂಘಟಿಸಿ ಸೂಟು ಬೂಟು ಹಾಕಿಸಿದ್ದನ್ನು ಮರೆತು ಈಗ ಆರ್‌ಎಸ್‌ಎಸ್ ಚೆಡ್ಡಿ ಹಾಕಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬಿಎಸ್‌ಪಿ ಚೆನ್ಹೆಯಡಿ ಆರಿಸಿ ಬಂದ ಅವರು ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ತಮಗೆ ತಾಕತ್ತಿದ್ದರೆ ಮತ್ತೊಮ್ಮೆ ಬಿಜೆಪಿಯಿಂದಲೇ ಸ್ಪರ್ಧಿಸಿ ಗೆದ್ದು ತೊರಿಸಲಿ ಎಂದು ಸವಾಲು ಹಾಕಿದರು.
ನಿಯತ್ತು ಮರೆತಿದ್ದಕ್ಕೆ ಉಚ್ಛಾಟನೆ : ಬಿಜೆಪಿ ಸೇರಿದ N ಮಹೇಶ್ ವಿರುದ್ಧ ಗಂಭೀರ ಅರೋಪ
ಚಾಮರಾಜನಗರ ನಗರಸಭಾ ಸದಸ್ಯ ಆರ್. ನಂಜುಂಡಸ್ವಾಮಿ ಮಾತನಾಡಿ ಶಾಸಕ ಮಹೇಶ್ ಬಿಎಸ್‌ಪಿ ಚಳವಳಿಗೆ ಮಾಡಿದ ದ್ರೋಹಕ್ಕಾಗಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಇವರು ಗೆದ್ದ ಬಳಿಕ ಮಹೇಶ್ ಜನಸೇವಾ ಕೇಂದ್ರ ನಾಯಕರಾಗಿದ್ದು ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ. ಕೊಟ್ಟ ಮಾತಿಗೆ ತಪ್ಪಿದ್ದಾರೆ. ಇವರಿಗೆ ಕಾನ್ಷಿರಾಂ ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆ ಇಲ್ಲದಾಗಿದೆ ಎಂದು ಕಿಡಿಕಾರಿದರು.
ಪ್ರಗತಿಪರ ಸಂಘಟನೆಯ ಜಿಲ್ಲಾಧ್ಯಕ್ಷ ಸಿಎಂ ಕೃಷ್ಣಮೂರ್ತಿ ಮಾತನಾಡಿ ಶಾಸಕ ಮಹೇಶ್ ಗೆಲುವಿಗೆ ಸಾವಿರಾರು ಬಹುಜನ ವಿದ್ಯಾರ್ಥಿಗಳು ತಮ್ಮ ತನು ಮನ ಧನ ಅರ್ಪಿಸಿದ್ದಾರೆ. ಸರ್ಕಾರಿ ಮೌಕರರು ಮಹಿಳಾ ಸಂಘಟನೆಗಳು ಸಹಾಯ ಮಾಡಿವೆ. ಇವರು ವಂಚನೆ ಮಾಡಿದ್ದಾರೆ. ಸಿದ್ದರಾಮಯ್ಯ ಇವರನ್ನು ಕಾಂಗ್ರೆಸ್ ಬಳಿ ಸುಳಿಯಲು ಬಿಡದ ಕಾರಣ ಯಡಿಯೂರಪ್ಪ ಕೈ ಕಾಲು ಹಿಡಿದು ಬಿಜೆಪಿ ಸೇರಿದ್ದಾರೆ ಎಂದರು