ಮೈಸೂರು(ಜ.13): 7 ಜನರನ್ನ ಸೇರಿಸಿಕೊಂಡರು ಈ ಸರ್ಕಾರ ಟೇಕ್ ಆಫ್ ಆಗೋಲ್ಲ. ಮಂತ್ರಿ ಮಂಡಲ ಪೂರ್ತಿಯಾದ ತಕ್ಷಣ ಈ ಸರ್ಕಾರ ಪರಿಪೂರ್ಣ ಆಗೋಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ/

ಸಂಪುಟ ವಿಸ್ತರಣೆ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಈಗಲೇ ಅದೋಗತಿಗೆ ಹೋಗಿದೆ. ಸಂಪುಟ ವಿಸ್ತರಣೆಯ ಅಸಮಾಧಾನದಿಂದ ಮತ್ತಷ್ಟು ಅದೋಗತಿಗೆ ಹೋಗಲಿದೆ. ಯಾರ್ಯಾರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೋ ಅಂತ ನಾನು ನೋಡೋಕೆ ಹೋಗಿಲ್ಲ ಎಂದಿದ್ದಾರೆ.

ಅಥವ ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾನು ವಿಚಾರಿಸಲು ಹೋಗಿಲ್ಲ ಎಂದಿದ್ದಾರೆ. ನನಗೇನು ಗೊತ್ತು ಯಾರ್ಯಾರು ಏನೇನು ಮಾತನಾಡಿಕೊಂಡಿದ್ದರೂ ಅಂತ. ಅದರ ಬಗ್ಗೆ ನಾನು ಮಾತನಾಡಲು ಹೋಗೋಲ್ಲ ಎಂದಿದ್ದಾರೆ.

ಬಿಎಸ್‌ವೈ ಕುಟುಂಬ ರಾಜಕಾರಣ: ವಿಧಾನಸೌಧದಲ್ಲಿ ಅಣ್ಣ ತಮ್ಮಂದಿರೇ ಇದ್ದಾರೆ ಎಂದ ವಿಶ್ವನಾಥ್

ಮಂತ್ರಿ ಮಂಡಲ ವಿಸ್ತರಣೆಯಿಂದಾಗಿ ಬಿಎಸ್‌ವೈ ಇನ್ನು ಸ್ವಲ್ಪ ದಿನ ಮುಂದುವರಿಯಬಹುದು. ಈಗ ಸಂಪುಟ ವಿಸ್ತರಣೆ ಆಗಿರೋದನ್ನ ನೋಡಿದ್ರೆ ಇನ್ನು ಸ್ವಲ್ಪ ದಿನ ಯಡಿಯೂರಪ್ಪರೆ ಸಿಎಂ ಆಗಿ ಇರಬಹುದು. ಬಹುಶಃ ಸಂಪುಟ ವಿಸ್ತರಣೆ ಆದ ನಂತರ ರಾಜೀನಾಮೆ ಕೊಡ್ತಿನಿ ಅಂತ ಹೇಳಿರಬಹುದೇನೋ ಎಂದು ಪ್ರತಿಕ್ರಿಯಿಸಿದ್ದಾರೆ.

ನಮಗಿದ್ದ ಮಾಹಿತಿ ಪ್ರಕಾರ ಹೈಕಮಾಂಡ್ ಸಿಎಂ ರಾಜೀನಾಮೆ ಕೇಳಿದ್ದರು. ಬಹುಶ ಸಂಪುಟ ವಿಸ್ತರಣೆ ಮಾಡಿ ಕೊಡ್ತಿನಿ ಅಂತ ಹೇಳಿರಬಹುದು. ಹಾಗಾಗಿ ಇನ್ನು ಸ್ವಲ್ಪ ದಿನ ಅವರೇ ಸಿಎಂ ಆಗಿ ಉಳಿಯುವ ಸಾಧ್ಯತೆ ಇದೆ ಎಂದಿದ್ದಾರೆ.

ಯಡಿಯೂರಪ್ಪ ಬಜೆಟ್ ಮಂಡಿಸಲೇಬೇಕು. ಇಲ್ಲವಾದ್ರೆ ಮಾರ್ಚ್ ನಂತರ ಒಂದು ರೂಪಾಯಿಯೂ ಖರ್ಚು ಮಾಡೋಕೆ ಆಗೋಲ್ಲ ಇವರಿಗೆ. ನನ್ನ ಬಜೆಟ್ ಸ್ಟೈಲ್ ಬೇರೆ ಇತ್ತು. ಇವರ ಬಜೆಟ್ ಸ್ಟೈಲ್ ಬೇರೆ ಇದೆ. ಈಗ ಮೀಟಿಂಗ್ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ. ನೋಡೋಣ ಏನ್ ಮಾಡ್ತಾರೆ ಅಂತ ಎಂದು ಹೇಳಿದ್ದಾರೆ.