ಮಂಡ್ಯ [ಅ.03]: ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಜೆಡಿಎಸ್ ಭದ್ರಕೋಟೆ ಎನಿಸಿರುವ  ಕೆ.ಆರ್ ಪೇಟೆ ಅಖಾಡಕ್ಕೆ ಸಿಎಂ ಪುತ್ರ ಇಳಿದಿದ್ದಾರೆ.

ಸಿಎಂ ತವರೂರಲ್ಲಿ ಕಮಲ ಅರಳಿಸಲು ವಿಜಯೇಂದ್ರ ಪಣ ತೊಟ್ಟಿದ್ದು, ಕೆ ಆರ್ ಪೇಟೆ ವಿಜಯೇಂದ್ರ ಭೇಟಿ ನೀಡಿ ಕಾರ್ಯಕರ್ತರ ಭೇಟಿ ಮಾಡಲಿದ್ದಾರೆ. 

 ಪಕ್ಷ ಸಂಘಟನೆ, ಉಪ ಚುನಾವಣೆ ಸಂಬಂಧ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದು, ಪಕ್ಷ ಬಲಪಡಿಸಲು ಮಾಸ್ಟರ್ ಪ್ಲಾನ್ ಮಾಡಲಿದ್ದಾರೆ.   

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜೆಡಿಎಸ್ ಶಾಸಕ ನಾರಾಯಣ ಗೌಡ ಅನರ್ಹತೆಯಿಂದ ತೆರವಾದ ಕೆ.ಆರ್ ಪೇಟೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವಿಜಯೇಂದ್ರ ಸ್ಪರ್ಧೆ ಮಾಡುವ  ಸಾಧ್ಯತೆ ಇದ್ದು, ನಾರಾಯಣ ಗೌಡ ಕಣಕ್ಕಿಳಿಯದಿದ್ದರೆ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. 

ನಾರಾಯಣ ಗೌಡರಿಗಿಂತ ಈಗಾಗಲೇ ವಿಜಯೇಂದ್ರ ಸ್ಪರ್ಧೆಗೆ ಒತ್ತಡ ಹೆಚ್ಚಿದ್ದು, ಇಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.