ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಎಂದ ಯಡಿಯೂರಪ್ಪ

ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗೆ ಸಿಎಂ ತಿರುಗೇಟು| ಅಮಿತ್‌ ಶಾ ಎದುರಲ್ಲೇ ಬಿಎಸ್‌ವೈ ಘೋಷಣೆ, ವಿರೋಧಿಗಳಿಗೆ ಎಚ್ಚರಿಕೆ| ದೇಶದಲ್ಲಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಉತ್ತಮ ಆಡಳಿತದ ಬಗ್ಗೆ ಸದಾಕಾಲ ಚರ್ಚೆ, ಇವರಿಬ್ಬರ ಪ್ರಯತ್ನದ ಫಲವಾಗಿ ದೇಶದಲ್ಲಿ ಬದಲಾವಣೆ ಕಾಣುತ್ತಿದೆ| 

BS Yediyurappa Says Next Two and Half Years I am the CM of Karnataka grg

ಬಾಗಲಕೋಟೆ(ಜ.18): ರಾಜ್ಯದಲ್ಲಿ ಮುಂಬರುವ ಎರಡೂವರೆ ವರ್ಷ ಮತ್ತಷ್ಟು ಉತ್ತಮ ಆಡಳಿತ ನೀಡುವ ಗುರಿ ನನ್ನದು. ಸರ್ಕಾರದ ವಿಷಯದಲ್ಲಿ ಯಾರೇ ಗೊಂದಲ ಉಂಟು ಮಾಡಿದರೂ ರಾಜ್ಯದ ಜನತೆ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

"

ಈ ಮೂಲಕ ಅವರು ಪರೋಕ್ಷವಾಗಿ ಸರ್ಕಾರ ಮತ್ತು ನಾಯಕತ್ವದ ಕುರಿತು ಅಪಸ್ವರ ಎತ್ತುವವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಮ್ಮುಖದಲ್ಲೇ ಮುಂದಿನ ಎರಡೂವರೆ ವರ್ಷ ತಾವೇ ಸಿಎಂ ಎಂಬ ಸಂದೇಶವನ್ನು ರವಾನಿಸಿದರು.
ಬಾಗಲಕೋಟೆ ಜಿಲ್ಲೆಯ ಕೆರಕಲಮಟ್ಟಿ ಗ್ರಾಮದ ಬಳಿ ಭಾನುವಾರ ನಿರಾಣಿ ಸಮೂಹ ಸಂಸ್ಥೆಗಳ ವಿವಿಧ ಘಟಕಗಳಿಗೆ ಚಾಲನೆ ಹಾಗೂ ವಿವಿಧ ಹೊಸ ಯೋಜನೆಗಳಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರ ಮಾರ್ಗದರ್ಶನದಲ್ಲಿ ಎರಡೂವರೆ ವರ್ಷ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವೆ. ಇದಕ್ಕೆ ರಾಜ್ಯದ ರೈತರಾದಿಯಾಗಿ ಎಲ್ಲರ ಸಹಕಾರ ಬೇಕು. ಯಾರೇ ಗೊಂದಲ ಸೃಷ್ಟಿಸಿದರೂ ಅದಕ್ಕೆ ಆಸ್ಪದ ಕೊಡಬೇಡಿ ಎಂದರು.

ಚಾಲುಕ್ಯರ ನಾಡಲ್ಲಿ ಚಾಣಕ್ಯ: ನಿರಾಣಿ ಸಂಸ್ಥೆಗಳನ್ನು ಹಾಡಿಹೊಗಳಿದ ಅಮಿತ್ ಶಾ

ಮತ್ತೊಮ್ಮೆ ಮೋದಿಜಿ ಪ್ರಧಾನಿ:

ದೇಶದಲ್ಲಿ ಪ್ರಧಾನಿ ಮೋದಿ ಅವರ ಆಡಳಿತ ಹಾಗೂ ನಿರಂತರವಾದ ಪ್ರಯತ್ನದಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ಇದರಿಂದ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಆರಂಭಗೊಂಡಿದೆ. ದೇಶ ಅಭಿವೃದ್ಧಿ ಪಥದಲ್ಲಿ ಮುಂದುವರಿಯಬೇಕಿದ್ದರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ, ಅಮಿತ್‌ ಶಾ ಗೃಹ ಸಚಿವರಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಇದೇ ವೇಳೆ ಅಮಿತ್‌ ಶಾ ಅವರು ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ಗೆ ಹೋಲಿಸಿದ ಯಡಿಯೂರಪ್ಪ ಅವರು, ದೇಶದಲ್ಲಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಉತ್ತಮ ಆಡಳಿತದ ಬಗ್ಗೆ ಸದಾಕಾಲ ಚರ್ಚೆಯಾಗುತ್ತದೆ. ಅವರ ಪ್ರಯತ್ನದ ಫಲವಾಗಿ ದೇಶದಲ್ಲಿ ಬದಲಾವಣೆ ಕಾಣುತ್ತಿದೆ ಎಂದರು.
 

Latest Videos
Follow Us:
Download App:
  • android
  • ios