ಮಂಗಳೂರು(ಜ.02): ಮಂಗಳೂರಿನಲ್ಲಿ ನಡೆದ ಗಲಭೆ, ಗೋಲಿಬಾರ್‌ಗೆ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕಾರಣ ಎಂದು ಮಾಜಿ ಸಚಿವ ರಮನಾಥ್ ರೈ ಆರೋಪಿಸಿದ್ದಾರೆ.

ಗೋಲಿಬಾರ್‌ ಖಂಡಿಸಿ ಜಾತ್ಯಾತೀತ ಸಂಘಟನೆಗಳ ಒಕ್ಕೂಟದ ಧರಣಿಯಲ್ಲಿ ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ, ಮಂಗಳೂರು ಗೋಲಿಬಾರ್ ಸರ್ಕಾರದ ಪೂರ್ವನಿಯೋಜಿತ ಕೃತ್ಯ. ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ‌ಮತ್ತು ಗೃಹಸಚಿವ ಬೊಮ್ಮಾಯಿ ಕಾರಣ. ಹೀಗಾಗಿ ಹಾಲಿ ನ್ಯಾಯಾಧೀಶರ ಸಮ್ಮುಖ ನ್ಯಾಯಾಂಗ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.

ಮಂಗಳೂರು ಗಲಭೆ: 12 ಆರೋಪಿಗಳ ಸೆರೆ.

ಗಲಾಟೆಯಲ್ಲಿ ಮುಟ್ಟುಗೋಲು ಹಾಕಿದ್ರೆ ಜಿಲ್ಲೆಯಲ್ಲಿ ಮೊದಲು ಬಜರಂಗದಳದ ಮುಖಂಡರನ್ನು ಮುಟ್ಟುಗೋಲು ಹಾಕಬೇಕು. ನಮ್ಮ ದೇಶದಲ್ಲಿ ಮುಷ್ಠಿಯಿಂದ ಗುದ್ದಿ ನೂರಾರು ‌ಹತ್ಯೆ ನಡೆದಿದೆ. ಅಲ್ಪಸಂಖ್ಯಾತ ಮತೀಯವಾದಿಯಾದ್ರೆ ಅವನ ಸಮುದಾಯಕ್ಕೆ ಅಪಾಯ. ಬಹುಸಂಖ್ಯಾತ ಮತೀಯವಾದಿಯಾದರೆ ಇಡೀ ದೇಶಕ್ಕೆ ಅಪಾಯ ಎಂದು ಹೇಳಿದ್ದಾರೆ.

ಈ ದೇಶ ಒಬ್ಬ ಬಹುಸಂಖ್ಯಾತನ ಕೈಯ್ಯಲ್ಲಿದೆ. ಹೀಗಾಗಿ ‌ನಾವು ಇನ್ನು ಮೌನವಾಗಿ ಕೂತರೇ ತಪ್ಪಾಗುತ್ತದೆ. ಚಕ್ರವರ್ತಿ ಸೂಲಿಬೆಲೆ ಕಪ್ಪು ಹಣ ತಂದ್ರೆ ಚಿನ್ನದ ರಸ್ತೆ ಅಂತ ಹೇಳ್ತಾರೆ. ಈಗ ಎಲ್ಲಿದ್ದಾರೆ ಸೂಲಿಬೆಲೆ? ಈಗ ಬೇರೆ ಸುಳ್ಳು ಹೇಳ್ತಿದಾರೆ. ಪ್ರಚೋದನೆ ಭಾಷಣ ಮಾಡೋರಿಗೆ ಮೊಟ್ಟ ಮೊದಲು ದಂಡ ಹಾಕಬೇಕು ಎಂದು ಹೇಳಿದ್ದಾರೆ.

ಮಂಗಳೂರು ಗಲಭೆ: ಕುಮ್ಮಕ್ಕು ನೀಡಿದವರಿಗೆ ಸಿಕ್ತು ನೋಟಿಸ್‌!