Asianet Suvarna News Asianet Suvarna News

ಮಂಗಳೂರು ಗಲಭೆ: 12 ಆರೋಪಿಗಳ ಸೆರೆ

ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ನಡೆದ ಭಾರೀ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದೀಗ 12 ಮಂದಿಯನ್ನು ಬಂಧಿಸಲಾಗಿದೆ. 

12 Arrested For Mangaluru Voilence
Author
Bengaluru, First Published Dec 29, 2019, 9:09 AM IST
  • Facebook
  • Twitter
  • Whatsapp

ಮಂಗಳೂರು [ಡಿ.29]: ಮಂಗಳೂರಿನಲ್ಲಿ ಡಿ.19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಗಲಭೆ ನಡೆಸಿದ ಆರೋಪದಲ್ಲಿ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಮಂಜನಾಡಿ ನಿವಾಸಿ ಮುಹಮ್ಮದ್‌ ಅಜರ್‌(22), ತೊಕ್ಕೊಟ್ಟು ನಿವಾಸಿ ತಂಜಿಲ್‌(20), ಬಿ.ಸಿ.ರೋಡ್‌ ಕಲ್ಲಮಜಲು ನಿವಾಸಿ ಆರ್ಯನ್‌(30), ಬಂಟ್ವಾಳ ಸಮೀಪದ ಮಾರಿಪಳ್ಳ ನಿವಾಸಿ ನಾಜಿಮ್‌(24), ಉಡುಪಿ ಶಿರ್ವ ನಿವಾಸಿ ಆಸಿಕ್‌(21), ಬಜ್ಪೆ ನಿವಾಸಿ ಅನ್ವರ್‌ ಹುಸೈನ್‌(23), ಅಡ್ಯಾರ್‌ ಕಣ್ಣೂರು ನಿವಾಸಿ ಮುಹಮ್ಮದ್‌ ಇಕ್ಬಾಲ್‌(27), ಪಂಜಿಮೊಗರು ನಿವಾಸಿ ಅಬ್ದುಲ್‌ ಹಫೀಝ್‌ (20), ಕಾವೂರು ನಿವಾಸಿಗಳಾದ ಮುಹಮ್ಮದ್‌ ಫಯಾಝ್‌(27), ಖಲಂದರ್‌ ಬಾಷಾ(30), ಕುಂಜತ್‌ಬೈಲ್‌ ದೇವಿನಗರದ ನಾಸಿರುದ್ದೀನ್‌(32), ಅಡ್ಯಾರ್‌ ಕಣ್ಣೂರು ನಿವಾಸಿ ಮುಹಮ್ಮದ್‌ ಫಾರೂಕ್‌(32) ಬಂಧಿತ ಆರೋಪಿಗಳು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಲಭೆಗೆ ಸಂಬಂಧಿಸಿದಂತೆ ಇದುವರೆಗೆ 24 ಪ್ರಕರಣ ದಾಖಲಿಸಲಾಗಿವೆ. ವಿಡಿಯೋ ತುಣುಕುಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋಟೋಗಳ ಆಧಾರದಲ್ಲಿ ಆರೋಪಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಈ ಆರಂಭದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 12ಕ್ಕೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಮಂಗಳೂರು ಉತ್ತರ (ಬಂದರ್‌) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios