* ಬೆಂಗಳೂರು ಲೈಫ್ ಇನ್ನಷ್ಟು ದುಬಾರಿಯಾಗಲಿದೆ ಹುಷಾರ್* ಬೆಂಗಳೂರು ಬದುಕು ದುಬಾರಿಯಾಗಲು ಕಾರಣವಾಗಲಿದೆ ಕಸ* ವಿದ್ಯುತ್ ಬಿಲ್‌ ಮೂಲಕ ಕಸ‌ ನಿರ್ವಹಣೆ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ‌ ನಿರ್ಧಾರ

ಬೆಂಗಳೂರು, (ಫೆ.02): ಸಿಲಿಕಾನ್ ಸಿಟಿ ಬೆಂಗಳೂರು ಲೈಫ್ (Bengaluru Life) ದುಬಾರಿಯಾಗಿದೆ. ಇದರ ಮಧ್ಯೆ ಇದೀಗ ವಿದ್ಯುತ್ ಬಿಲ್‌ ಮೂಲಕ ಕಸ‌ ನಿರ್ವಹಣೆ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ‌(Bruhat Bengaluru Mahanagara Palike) ನಿರ್ಧಾರಿಸಿದೆ.

ಇನ್ಮುಂದೆ ನಗರದ ಜನತೆ ಕರೆಂಟ್ ಬಿಲ್ ಜತೆ ಗಾರ್ಬೆಜ್ ಯೂಸರ್ ಶುಲ್ಕ (Garbage Tax )ಕೂಡ ಪಾವತಿಸುವುದು ಅನಿವಾರ್ಯವಾಗಲಿದೆ. ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿರುವ ಬಿಬಿಎಂಪಿ ಅಧಿಕಾರಿಗಳು ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಗಾರ್ಬೆಜ್ ಯೂಸರ್ ಶುಲ್ಕ ವಸೂಲಿ ಮಾಡಲು ಅವಕಾಶ ಮಾಡಿಕೊಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

Bengaluru Roads: ರಸ್ತೆಗಳು ದೀರ್ಘಾವಧಿಗೆ ಏಕೆ ಬಾಳಲ್ಲ ಎಂದು ಪ್ರಶ್ನಿಸಿದ ಹೈಕೋರ್ಟ್‌

ಸಧ್ಯ ಪಾವತಿಸುತ್ತಿರುವ ಗಾರ್ಬೆಜ್ ಸೆಸ್ ಜತೆಗೆ ಇನ್ಮುಂದೆ ಗಾರ್ಬೆಜ್ ಯೂಸರ್ ಶುಲ್ಕ ಪಾವತಿಸಲು ಜನ ಸಿದ್ದರಾಗಬೇಕಿದೆ.
ಕರೆಂಟ್ ಬಿಲ್ ಆಧಾರದ ಮೇಲೆ ಗಾರ್ಬೆಜ್ ಯೂಸರ್ ಶುಲ್ಕ ನಿಗಯಾಗಲಿದೆಯಂತೆ.

ಬಿಬಿಎಂಪಿ ಸಲ್ಲಿಸಿರುವ ಈ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಅಸ್ತು ಎಂದರೆ ಜನ ಡಬಲ್ ಟ್ಯಾಕ್ಸ್ ಕಟ್ಟಲು ರೆಡಿಯಾಗಬೇಕಿದೆ. ನಗರದ ಮನೆ ಮನೆಗಳಿಂದ ಬಿಬಿಎಂಪಿ ಕಸ ಸಂಗ್ರಹ ಮಾಡುತ್ತಿದ್ದು, ಕಸ(Garbage )ನಿರ್ವಹಣೆಗೆ ಕೋಟ್ಯಂತರ ರೂ. ಖರ್ಚಾಗುತ್ತಿದೆ. ಹೀಗಾಗಿ ಸಂಸ್ಥೆಗೆ ಹಾಗುವ ನಷ್ಟ ಭರಿಸಿಕೊಳ್ಳುವ ಉದ್ದೇಶದಿಂದ ಗಾರ್ಬೆಜ್ ಟ್ಯಾಕ್ಸ್ ವಿಸುವ ಐಡಿಯಾ ಕಂಡುಕೊಳ್ಳಲಾಗಿದೆ.

ನಗರದಲ್ಲಿ ವಾಸಿಸುತ್ತಿರುವ ಜನ ಪ್ರತಿವರ್ಷ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಆಸ್ತಿ ತೆರಿಗೆ ವಸೂಲಿ ಸಂದರ್ಭದಲ್ಲಿ ಗಾರ್ಬೆಜ್ ಸೆಸ್ ಹಾಕಲಾಗುತ್ತಿದೆ. ಈ ರೀತಿಯ ಸೆಸ್ ಹಣದಿಂದ ಕಸ ನಿರ್ವಹಣೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇರುವುದರಿಂದ ಹೊಸ ತೆರಿಗೆ ವಿಸಲು ಬಿಬಿಎಂಪಿ ಮುಂದಾಗಿದೆ.

2011ರಿಂದ ಆಸ್ತಿ ತೆರಿಗೆ ಮೇಲೆ‌ ಶೇ. 19 ರಷ್ಟು ಸೆಸ್ ಸಂಗ್ರಹಿಸಲಾಗುತಿತ್ತು. ಆದರೆ ಇದು ಕಸ‌ ನಿರ್ವಹಣಾ ವೆಚ್ಚದ ಶೇ. 15 ರಷ್ಟು ಸಂಗ್ರಹಣೆಯಾಗಲಿಲ್ಲ. ಈ ಹಿನ್ನಲೆಯಲ್ಲಿ ವಿದ್ಯುತ್ ಬಿಲ್‌ ಮೂಲಕ ಪ್ರತಿ ತಿಂಗಳು ಸಂಗ್ರಹಿಸಲು‌ ನಿರ್ಧಾರ ಮಾಡಿದೆ. 

ಕಸ‌ನಿರ್ವಹಣಾ ಸೆಸ್ ಸಂಗ್ರಹಕ್ಕೆ ಬೆಸ್ಕಾಂ‌ ನೆರವು ಕೋರಲು‌ ತೀರ್ಮಾನಿಸಿದ್ದು, ಬಿಬಿಎಂಪಿ ಆಡಳಿತಗಾರರಿಗೆ ಬಿಬಿಎಂಪಿ ಮುಖ್ಯ ಆಯುಕ್ತರಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ವಾರ್ಷಿಕ ಗೃಹ ತ್ಯಾಜ್ಯ ಉತ್ಪಾದಕರಿಂದ 585.17 ಕೋಟಿ ರೂ. ಸಂಗ್ರಹವಾಗಲಿದೆ. ಇನ್ನು ವಾಣಿಜ್ಯ ತ್ಯಾಜ್ಯ ಉತ್ಪಾದಕರಿಂದ 287.22 ಕೋಟಿ ರೂ. ಸಂಗ್ರಹವಾಗಲಿದೆ. ವಿದ್ಯುತ್ ಬಿಲ್ ಆಧಾರಿತ ಸೆಸ್ ಸಂಗ್ರಹದಿಂದ ವಾರ್ಷಿಕ ಒಟ್ಟಾರೆ 870.40 ಕೋಟಿ ರೂ. ಸಂಗ್ರಹ‌ ನಿರೀಕ್ಷಿಸಲಾಗಿದೆ

ಪ್ರಸ್ತುತ ಬಿಬಿಎಂಪಿ ವಾರ್ಷಿಕ ವೆಚ್ಚ ಮಾಡುತ್ತಿರುವ 1500 ಕೋಟಿ ಹಣದಲ್ಲಿ ಅರ್ಧಕ್ಕೂ ಹೆಚ್ಚು ಹಣ ಸೆಸ್ ನಿಂದ ಸಂಗ್ರಹವಾಗಲಿದೆ. ಆದರೆ, ಈಗಾಗಲೇ‌ ಬೆಲೆ ಏರಿಕೆಯಿಂದ ದುಬಾರಿಯಾಗಿರೋ ಬೆಂಗಳೂರು ಬದುಕು ಇನ್ನಷ್ಟು ದುಬಾರಿಯಾಗಲಿದೆ

* ಗೃಹ ತ್ಯಾಜ್ಯ ಉತ್ಪಾದಕರಿಗೆ ವಿದ್ಯುತ್ ಬಿಲ್ ಆಧರಿಸಿ ಪ್ರಸ್ತಾಪಿಸಿರುವ ಸೆಸ್ ವಿವರ ಹೀಗಿದೆ..
ವಿದ್ಯುತ್ ಬಿಲ್ - ಕಸ ಸೆಸ್
200 ರೂ. ವರೆಗೆ - 30 ರೂ.
200-500 ರೂ - 60 ರೂ.
500 - 1000 ರೂ - 100 ರೂ.
1001 - 2000 ರೂ - 200 ರೂ.
2001 - 3000 ರೂ - 350 ರೂ.
3000 ರೂ.ಗಿಂತ ಹೆಚ್ಚು - 500 ರೂ.

ಈ ರೀತಿ ಮಾಸಿಕ ಸೆಸ್ ಸಂಗ್ರಹದ‌ ಮೂಲಕ 48.76 ಕೋಟಿ ರೂ. ಸಂಗ್ರಹವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

* ವಾಣಿಜ್ಯ ತ್ಯಾಜ್ಯ ಉತ್ಪಾದಕರು (ಬೃಹತ್ ತ್ಯಾಜ್ಯ ಉತ್ಪಾದಕರನ್ನು ಹೊರತುಪಡಿಸಿ) ಪ್ರಸ್ತಾಪಿಸಿರುವ ಸೆಸ್ ವಿವರ ಹೀಗಿದೆ
ವಿದ್ಯುತ್ ಬಿಲ್ - ಕಸ ಸೆಸ್
200 ರೂ. ವರೆಗೆ - 75ರೂ.
200-500 ರೂ - 150 ರೂ.
500 - 1000 ರೂ - 300 ರೂ.
1001 - 2000 ರೂ - 600 ರೂ.
2001 - 3000 ರೂ - 800 ರೂ.
3000 ರೂ.ಗಿಂತ ಹೆಚ್ಚು - 1200 ರೂ.

ಈ ರೀತಿ ಮಾಸಿಕ ಸೆಸ್ ಸಂಗ್ರಹದ‌ ಮೂಲಕ ವಾಣಿಜ್ಯ ತ್ಯಾಜ್ಯ ಉತ್ಪಾದಕರಿಂದ 23.93 ಕೋಟಿ ರೂ. ಸಂಗ್ರಹದ ಅಂದಾಜು ಮಾಡಲಾಗಿದೆ.