ಇಂಡಿ [ಜ.07]:  ಅನೈತಿಕ ಸಂಬಂಧ ಶಂಕೆ ವ್ಯಕ್ತಪ​ಡಿ​ಸಿದ ಸಹೋ​ದರ ತನ್ನ ಅಕ್ಕನನ್ನೇ ಸನಿಕೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಸೋಮವಾರ ಸಂಭ​ವಿ​ಸಿದೆ. ನಂತರ ಆರೋಪಿಯುವ ಹತ್ಯೆಗೆ ಬಳಸಿದ ಸನಿಕೆ ಸಮೇತ ಪೊಲೀಸ್‌ ಠಾಣೆಗೆ ಹಾಜ​ರಾ​ಗಿ​ದ್ದಾನೆ.

ಸಾಲೋ​ಟಗಿ ಗ್ರಾಮದ ಗೀತಾ ನಾಯ್ಕೋಡಿ (24) ಕೊಲೆಗೀಡಾದ ಮಹಿಳೆ. ಯಲ್ಲಪ್ಪ ಹಾದಿಮನಿ (21) ಎಂಬಾ​ತನೇ ತನ್ನ ಅಕ್ಕ​ನನ್ನು ಕೊಲೆ ಮಾಡಿ, ನಂತರ ಠಾಣೆಗೆ ಶರಣಾಗಿರುವ ಆರೋಪಿ. 

ಅಕ್ಕ, ತಮ್ಮ ಆತ್ಮಹತ್ಯೆ: 2 ದಿನದ ನಂತರ ಸಿಕ್ತು ಮೃತದೇಹ...

ಗೀತಾಳನ್ನು ಗೋಳಸಾರ ಗ್ರಾಮದ ಅಡಿವೆಪ್ಪ ನಾಯ್ಕೋಡಿ ಎಂಬಾತ​ನಿಗೆ ಗೀತಾಳನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ ಆಕೆ ಗಂಡನನ್ನು ಬಿಟ್ಟು ತವರು ಮನೆಯಲ್ಲೇ ಇದ್ದಳು. ಅಲ್ಲದೆ ಸಾಲೋಟಗಿ ಗ್ರಾಮದ ವ್ಯಕ್ತಿಯೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಸುದ್ದಿ ತಿಳಿದು ಸಹೋ​ದರ ಯಲ್ಲಪ್ಪ ತಮ್ಮ ಜಮೀನಿನಲ್ಲೇ ಗೀತಾಳನ್ನು ಸನಿಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸನಿಕೆ ಸಮೇತ ಇಂಡಿ ಗ್ರಾಮೀಣ ಪೊಲೀಸ್‌ ಠಾಣೆಗೆ ಆರೋಪಿ ಹಾಜ​ರಾ​ಗಿ​ದ್ದಾನೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.