ಬಿಟ್ರನ್‌ ಅರಮನೆಯ ಸಾಕು ನಾಯಿ ವೆಲ್ಯ್ ಕೊರ್ಗಿ ತಳಿ ಮೂಲ್ಕಿಗೆ ಆಗಮನ

ಬ್ರಿಟನ್‌ ರಾಣಿಯ ಅರಮನೆಯ ಸಾಕುನಾಯಿ ವೆಲ್ಯ್ ಕೊರ್ಗಿ ಯ ತಳಿ ಈಗ ದಕ್ಷಿಣ ಕನ್ನಡದ ಮೂಲ್ಕಿಗೆ ಆಗಮಿಸಿದೆ. ವೆಲ್ಯ್ ಕೊರ್ಗಿ ಬುದ್ಧಿವಂತ ನಾಯಿಯಲ್ಲಿ 11ನೇ ಸ್ಥಾನ ಪಡೆದಿದ್ದು ಎರಡನೇ ರಾಣಿ ಎಲಿಜಬೆತ್‌ ಅವರು ರಾಯಲ್‌ ಕೊರ್ಗಿಯನ್ನು 70 ವರ್ಷಗಳಿಂದ ಸುಮಾರು 30ಕ್ಕೂ ಹೆಚ್ಚು ವೆಲ್ಯ್ ಕೊರ್ಗಿ ತಳಿಯ ನಾಯಿಯನ್ನು ಸಾಕುತ್ತಾ ಬಂದಿದ್ದಾರೆ.

Britain Palace famous pet  Welsh corgi breed in mulki gow

ಮಂಗಳೂರು (ಡಿ.15): ಬ್ರಿಟನ್‌ ರಾಣಿಯ ಅರಮನೆಯ ಸಾಕುನಾಯಿ ವೆಲ್ಯ್ ಕೊರ್ಗಿ ಯ ತಳಿ ಈಗ ದಕ್ಷಿಣ ಕನ್ನಡದ ಮೂಲ್ಕಿಗೆ ಆಗಮಿಸಿದೆ. ವೆಲ್ಯ್ ಕೊರ್ಗಿ ಬುದ್ಧಿವಂತ ನಾಯಿಯಲ್ಲಿ 11ನೇ ಸ್ಥಾನ ಪಡೆದಿದ್ದು ಎರಡನೇ ರಾಣಿ ಎಲಿಜಬೆತ್‌ ಅವರು ರಾಯಲ್‌ ಕೊರ್ಗಿಯನ್ನು 70 ವರ್ಷಗಳಿಂದ ಸುಮಾರು 30ಕ್ಕೂ ಹೆಚ್ಚು ವೆಲ್ಯ್ ಕೊರ್ಗಿ ತಳಿಯ ನಾಯಿಯನ್ನು ಸಾಕುತ್ತಾ ಬಂದಿದ್ದಾರೆ. ಅವರ ಬಳಿಕ ಈಗಲೂ ಅರಮನೆಯಲ್ಲಿ ಈ ನಾಯಿ ಸಾಕುತ್ತಿದ್ದಾರೆ. ವೆಲ್ಯ್ ಕೊರ್ಗಿ ನಾಯಿ, ಸಾಕಾಣೆ ಮಾಡಲು ಬಹಳ ಉಪಕಾರಿಯಾಗಿದ್ದು ಬ್ರಿಟನ್‌ ದೇಶದಲ್ಲಿ ಕೊರ್ಗಿಯ ಬೇಡಿಕೆ ಬಹಳವಿದ್ದ ಕಾರಣ ಅವುಗಳ ಸಂತತಿ ಕಡಿಮೆ ಆಗುತ್ತಿದೆ.

ನ್ಯೂಯಾರ್ಕ್, ಬೋಸ್ಟನ್‌, ಲಾಸ್‌ ಎಂಜಲೀಸ್‌, ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನೂರಾರು ನಾಯಿಗಳನ್ನು ಒಟ್ಟಾಗಿ ಸೇರಿಸಿ ಒಂದು ದಿನ ಸ್ನೇಹ ಸಮ್ಮೇಳನವನ್ನು ನಡೆಸುವ ಪದ್ಧತಿಯಿದೆ. ಅಮೆರಿಕನ್‌ ಕೆನ್‌ ಕ್ಲಬ್‌ನಿಂದ 2020ರಲ್ಲಿ ಬಹಳ ಬುದ್ಧಿವಂತ ಎಂಬ ಬಿರುದನ್ನು ವೆಲ್ಸ್‌ ಕೊರ್ಗಿ ಪಡೆದಿರುತ್ತದೆ.

ವೆಲ್ಯ್ ಕೊರ್ಗಿ ತಳಿಯ ಶ್ವಾನವನ್ನು ಹೊರ ದೇಶದಿಂದ ಆಮದು ಮಾಡಿ ದೆಹಲಿ ಮೂಲಕ ಮೂಲ್ಕಿಯ ರಾಯಲ್‌ ಪೆಟ್‌ ಶಾಪ್‌ ಮೂಲಕ ಮೂಲ್ಕಿಗೆ ತರಿಸಲಾಗಿದೆ. ವೆಲ್ಯ್ ಕೊರ್ಗಿ ಯ ಗಂಡು ಮತ್ತು ಹೆಣ್ಣು ಮರಿಯನ್ನು ಅನಿತಾ ಸೋನ್ಸ್‌ ಅವರಿಗೆ ರಾಯಲ್‌ ಪೆಟ್‌ ಶಾಪ್‌ನ ಎಲ್‌. ರೋಯ್‌ ಹಸ್ತಾಂತರಿಸಿದ್ದಾರೆ. ಈ ಶ್ವಾನ ಒಂದರ ಮಾರುಕಟ್ಟೆಬೆಲೆ 3 ಲಕ್ಷ ರುಪಾಯಿವರೆಗೂ ಇದೆ.

ಪ್ರತಿಭೆ ಪ್ರದರ್ಶಿಸಿದ ಡೊಂಕು ಬಾಲದ ನಾಯಕರು!
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಕಳೆದ ಭಾನುವಾರ ‘ಡೊಂಕು ಬಾಲದ ನಾಯಕ’ರದ್ದೇ ಹವಾ! ಬಗೆ ಬಗೆಯ ಶ್ವಾನಗಳು ತಮ್ಮ ವೈವಿಧ್ಯಮಯ ಪ್ರತಿಭೆಗಳನ್ನು ಪ್ರದರ್ಶಿಸಿ ಜನರನ್ನು ರಂಜಿಸಿದವು.

ಕರಾವಳಿ ಕೆನೈನ್‌ ಕ್ಲಬ್‌ ವತಿಯಿಂದ ನಡೆದ ಈ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಗಮನ ಸೆಳೆಯಿತು. ತರಹೇವಾರಿ ತಳಿಗಳ 250ಕ್ಕೂ ಅಧಿಕ ನಾಯಿಗಳು ಪಾಲ್ಗೊಂಡಿದ್ದವು. ಒಟ್ಟು 11 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

Kichcha Sudeep: ಸುದೀಪ್ ಶ್ವಾನ ಪ್ರೀತಿಗೆ ಮನಸೋತ ಅಭಿಮಾನಿ ಬಳಗ..!

ಬೆಂಗಳೂರು, ಮೈಸೂರು, ಚೆನ್ನೈ, ಮುಂಬೈ, ಹೈದರಾಬಾದ್‌ ಮೊದಲಾದ ಕಡೆಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಮೂರು ವೇದಿಕೆಗಳನ್ನು ಹಾಕಲಾಗಿದ್ದು, ಬೆಸ್ಟ್‌ ಪಪ್ಪಿ, ಬೆಸ್ಟ್‌ ಫಿಮೇಲ್‌, ಬೆಸ್ಟ್‌ ಮೇಲ್‌, ಬೆಸ್ಟ್‌ ಆಫ್‌ ಬ್ರೀಡ್‌, ಬೆಸ್ಟ್‌ ಆಫ್‌ ಬೆಸ್ಟ್‌, ಟಾಪ್‌ ವಿನ್ನರ್‌ ಇತ್ಯಾದಿ ವಿಭಾಗಗಳಲ್ಲಿ ನಾಯಿಗಳು ಸ್ಪರ್ಧಿಸಿದವು.

 

ನಾಯಿಗಳಿಂದ ರಕ್ಷಿಸಿಕೊಳ್ಳಲು ಎಟಿಎಂಗೆ ನುಗ್ಗಿದ್ದ ಜಿಂಕೆ

ಅಂತಾರಾಷ್ಟ್ರೀಯ ತೀರ್ಪುಗಾರರಾದ ಕೊರಿಯಾದ ಚೂಂಗ್‌- ಗೀ- ಎಎಚ್‌ಎನ್‌ ಮತ್ತು ವೂಂಗ್‌ ಜಾಂಗ್‌ ಲೀ, ರಾಷ್ಟ್ರೀಯ ತೀರ್ಪುಗಾರರಾದ ಸಂಜೀತ್‌ ಮೊಹಂತಿ ಸೇರಿದಂತೆ ಹಲವು ತೀರ್ಪುಗಾರರು ಭಾಗವಹಿಸಿದ್ದರು. ಕರಾವಳಿ ಕೆನೈನ್‌ ಕ್ಲಬ್‌ ಅಧ್ಯಕ್ಷ ನಾಗರಾಜ್‌ ಶೆಟ್ಟಿ, ಉಪಾಧ್ಯಕ್ಷ ಟಿ.ಪ್ರೀತಮ್‌, ಕಾರ್ಯದರ್ಶಿ ಪ್ರಸಾದ್‌ ಐತಾಳ್‌, ವಿಶ್ವನಾಥ ಕಾಮತ್‌ ಇದ್ದರು.

Latest Videos
Follow Us:
Download App:
  • android
  • ios