Tumakur : ಎಲ್ಲರು ಸಮನಾಗಿ ಬಾಳಲು ಬಿಎಸ್‌ಪಿ ಅಧಿಕಾರಕ್ಕೆ ತನ್ನಿ

ದೇಶದಲ್ಲಿ ಎಲ್ಲಾ ಜಾತಿ ಧರ್ಮವರು ಸಮಾನವಾಗಿ ಬಾಳಲು ಜನತೆ ಬಿಎಸ್‌ಪಿ ಪಕ್ಷ ಅಧಿಕಾರಕ್ಕೆ ತನ್ನಿ. ಬಿಎಸ್‌ಪಿ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು. ಸಂವಿಧಾನವೇ ನಮ್ಮ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಏಕೈಕ ಪಕ್ಷ. ಯಾವುದಾದರೂ ಪಕ್ಷ ಸಂವಿಧಾನ ರಕ್ಷಣೆ ಬಗ್ಗೆ ಯಾತ್ರೆ ಮಾಡಿದ್ದರೆ ಅದು ಬಿಎಸ್‌ಪಿ ಪಕ್ಷ ಮಾತ್ರ ಎಂದು ರಾಜ್ಯಾಧ್ಯಕ್ಷ ಮಂಡ್ಯ ಕೃಷ್ಣಮೂರ್ತಿ ಹೇಳಿದರು.

   Bring BSP to power  in Next Assembly Election Mandya Krishnamurthy snr

  ಶಿರಾ (ನ.19):  ದೇಶದಲ್ಲಿ ಎಲ್ಲಾ ಜಾತಿ ಧರ್ಮವರು ಸಮಾನವಾಗಿ ಬಾಳಲು ಜನತೆ ಬಿಎಸ್‌ಪಿ ಪಕ್ಷ ಅಧಿಕಾರಕ್ಕೆ ತನ್ನಿ. ಬಿಎಸ್‌ಪಿ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು. ಸಂವಿಧಾನವೇ ನಮ್ಮ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಏಕೈಕ ಪಕ್ಷ. ಯಾವುದಾದರೂ ಪಕ್ಷ ಸಂವಿಧಾನ ರಕ್ಷಣೆ ಬಗ್ಗೆ ಯಾತ್ರೆ ಮಾಡಿದ್ದರೆ ಅದು ಬಿಎಸ್‌ಪಿ ಪಕ್ಷ ಮಾತ್ರ ಎಂದು ರಾಜ್ಯಾಧ್ಯಕ್ಷ ಮಂಡ್ಯ ಕೃಷ್ಣಮೂರ್ತಿ ಹೇಳಿದರು.

ಸಂವಿಧಾನದ ಸಂರಕ್ಷಣೆಗಾಗಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಕರ್ನಾಟಕ ರಾಜ್ಯವ್ಯಾಪಿ ಹಮ್ಮಿಕೊಂಡಿದ್ದ ಜೈ ಭೀಮ್‌ ಜನಜಾಗೃತಿ ಜಾಥಾ ಶಿರಾ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.

ಬಿಎಸ್‌ಪಿ (BSP)  ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ (Karnataka)  ಭ್ರಷ್ಟಾಚಾರ ಮಿತಿಮೀರಿದೆ. ಬಡವರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಮತಗಳನ್ನು ಖರೀದಿ ಮಾಡಿ ಅಧಿಕಾರದಲ್ಲಿರುವ ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಮಹಿಳೆಯರಿಗೆ ಸಬ್ಸಿಡಿಯಲ್ಲಿ ಗ್ಯಾಸ್‌ ಸಿಲಿಂಡರ್‌ ನೀಡಿ ಈಗ ಒಂದು ಸಿಲಿಂಡರ್‌ಗೆ 1100 ರುಪಾಯಿ ಅಡುಗೆ ಅನಿಲ ದರ ಮಾಡಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಹಾಗೂ ದಿನಬಳಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರನ್ನು ಇನ್ನಷ್ಟುಬಡವರನ್ನಾಗಿ ಮಾಡಿರುವ ಸರ್ಕಾರ ದೇಶದಲ್ಲಿ ಹೊಸ ಶಿಕ್ಷಣ ನೀತಿ ತಂದು ದಲಿತರಿಗೆ ಹಿಂದುಳಿದವರಿಗೆ ಶಿಕ್ಷಣವನ್ನು ವಂಚಿಸುವ ಪ್ರಯತ್ನ ಹಾಗೂ ಇದು ಮನುಸ್ಮೃತಿಯನ್ನು ಜಾರಿಗೆ ತರುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಇದು ನಡೆಯೋದಿಲ್ಲ. ರಾಜ್ಯದ ಎಲ್ಲಾ ಬಹುಜನರಾದ ಲಿಂಗಾಯತ, ಒಕ್ಕಲಿಗ, ಕುರುಬ, ಮಡಿವಾಳ, ಕಮ್ಮಾರ, ಎಸ್‌ಸಿ, ಎಸ್‌ಟಿ ಸೇರಿದಂತೆ ಹಲವು ತಳಸಮುದಾಯಗಳು ಅಭಿವೃದ್ಧಿ ಹೊಂದಬೇಕಾದರೆ ಮುಂದಿನ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದರು.

ಜೈ ಭೀಮ್‌ ಜನಜಾಗೃತಿ ಜಾಥಾವು ನಗರದ ಅಂಬೇಡ್ಕರ್‌ ಸರ್ಕಲ್‌ನಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರಾರ‍ಯಲಿ ನಡೆಸಿತು. ಈ ಸಂದರ್ಭದಲ್ಲಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರಸಂದ್ರ ಮುನಿಯಪ್ಪ, ಖಜಾಂಚಿ ಮಹಮದ್‌ ಆಸೀಫ್‌ ಇಕ್ಬಾಲ್‌, ರಾಜ್ಯ ಕಾರ್ಯದರ್ಶಿ ಶೂಲಯ್ಯ, ಜಿಲ್ಲಾಧ್ಯಕ್ಷ ಜೆ.ಎನ್‌.ರಾಜಸಿಂಹ, ತುಮಕೂರು ಜಿಲ್ಲೆ ಉಸ್ತುವಾರಿ ರುದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ.ರಂಗಧಾಮಯ್ಯ, ಜಿಲ್ಲಾ ಕಾರ್ಯದರ್ಶಿ ತಾಲೂಕು ಉಸ್ತುವಾರಿ ಗುಮ್ಮನಹಳ್ಳಿ ಮಂಜುನಾಥ, ತಾಲೂಕು ಅಧ್ಯಕ್ಷ ವೀರಕ್ಯಾತಯ್ಯ, ಉಪಾಧ್ಯಕ್ಷ ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಸಣ್ಣಭೂತಣ್ಣ, ನಗರ ಅಧ್ಯಕ್ಷ ಚಾಂದ್‌ ಪಾಷ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸುಳ್ಳು ಭರವಸೆಗಳೊಂದಿಗೆ 65 ವರ್ಷ ಅಧಿಕಾರ ಮಾಡಿದ ಕಾಂಗ್ರೆಸ್‌ ಈಗ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದರೆ ಇತ್ತ ದೇಶದಲ್ಲಿ ಈಗ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನ ಸಂಕಲ್ಪ ಯಾತ್ರೆ ಶುರು ಮಾಡಿದೆ. ಇದು ಯಾವ ಪುರುಷಾರ್ಥಕ್ಕೆ ಎಂದು ನಾನು ಪ್ರಶ್ನಿಸುತ್ತೇನೆ.

ಮಂಡ್ಯ ಕೃಷ್ಣಮೂರ್ತಿ ರಾಜ್ಯಾಧ್ಯಕ್ಷ,ಬಿಎಸ್‌ಪಿ

 ದೇಶದಲ್ಲಿ ಎಲ್ಲಾ ಜಾತಿ ಧರ್ಮವರು ಸಮಾನವಾಗಿ ಬಾಳಲು ಜನತೆ ಬಿಎಸ್‌ಪಿ ಪಕ್ಷ ಅಧಿಕಾರಕ್ಕೆ ತನ್ನಿ

ಬಿಎಸ್‌ಪಿ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು. ಸಂವಿಧಾನವೇ ನಮ್ಮ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಏಕೈಕ ಪಕ್ಷ.

ಯಾವುದಾದರೂ ಪಕ್ಷ ಸಂವಿಧಾನ ರಕ್ಷಣೆ ಬಗ್ಗೆ ಯಾತ್ರೆ ಮಾಡಿದ್ದರೆ ಅದು ಬಿಎಸ್‌ಪಿ ಪಕ್ಷ ಮಾತ್ರ ಎಂದ ರಾಜ್ಯಾಧ್ಯಕ್ಷ ಮಂಡ್ಯ ಕೃಷ್ಣಮೂರ್ತಿ

ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು - ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಬಡವರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ

Latest Videos
Follow Us:
Download App:
  • android
  • ios