ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೇತುವೆಯ ಫೌಂಡೇಶನ್ ಬೇರಿಂಗ್ ಕಟ್, ತಪ್ಪಿತು ಭಾರೀ ದುರಂತ!
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಸೇತುವೆಯ ಫೌಂಡೇಶನ್ ಬೇರಿಂಗ್ ಏಕಾಏಕಿ ತುಂಡಾಗಿದ್ದು, ಭಾರೀ ದುರಂತವೊಂದು ತಪ್ಪಿದೆ.
ಕಾರವಾರ (ಮೇ.20): ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಸೇತುವೆಯ ಫೌಂಡೇಶನ್ ಬೇರಿಂಗ್ ಏಕಾಏಕಿ ತುಂಡಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಹಟ್ಟಿಕೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಹಳೇ ಸೇತುವೆಯ ಫೌಂಡೇಶನ್ ಬೇರಿಂಗ್ ತುಂಡಾಗಿ ಸೇತುವೆ ಮೇಲ್ಭಾಗದ ಬದಿಯಲ್ಲೂ ಬಿರುಕು ಮೂಡಿದೆ. ಹಳೆ ಸೇತುವೆಯ ಬೇರಿಂಗ್ ತುಂಡಾದ ಬೆನ್ನಲ್ಲೇ ಆಡಳಿತ ಮಂಡಳಿ ಕೂಡಲೇ ಹೊಸ ಸೇತುವೆ ಮೇಲೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಹೀಗಾಗಿ ಭಾರೀ ಅಪಾಯದಿಂದ ವಾಹನ ಸವಾರರು ಪಾರಾಗಿದ್ದಾರೆ. ಅಂದಾಜು 40 ವರ್ಷದ ಹಿಂದೆ ಹಟ್ಟಿಕೇರಿ ಸೇತುವೆ ನಿರ್ಮಾಣವಾಗಿದೆ ಎನ್ನಲಾಗಿದೆ.
ಅವರ್ಸಾದಲ್ಲಿ ಬೆಂಕಿ ಅವಘಡ
ಅಂಕೋಲಾ: ಶಾರ್ಚ್ ಸಕ್ರ್ಯೂಟ್‌ನಿಂದ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ಸಾಮಾನುಗಳು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಅವರ್ಸಾದಲ್ಲಿ ನಡೆದಿದೆ.
ಬಾಲಚಂದ್ರ ಮಹಾಬಲೇಶ್ವರ ನಾಯ್ಕ ಎಂಬವರು ಈ ಮನೆಯಲ್ಲಿ ಬಾಡಿಗೆ ಇದ್ದ ವ್ಯಕ್ತಿ ಎನ್ನಲಾಗಿದೆ. ವಿದ್ಯುತ್ ಮೀಟರ ಬೋರ್ಡ್ ಹತ್ತಿರದಿಂದ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಸಂಪೂರ್ಣವಾಗಿ ಮನೆಗೆ ತಗುಲಿದೆ. ಮನೆಯಲ್ಲಿದ್ದ ಫ್ಯಾನ್ ಇನ್ನಿತರ ಉಪಕರಣಗಳು ಸೇರಿದಂತೆ ಮದುವೆಗೆ ತಂದಿಟ್ಟಿದ್ದ .40 ಸಾವಿರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಜೊತೆಗೆ ಸ್ಥಳೀಯರು ಕೂಡ ಬೆಂಕಿ ನಂದಿಸುವಲ್ಲಿ ಕೈಜೋಡಿಸಿದ್ದಾರೆ.
ಬೇಸಿಗೆ ದಟ್ಟಣೆ ತಪ್ಪಿಸಲು ವಿಶೇಷ ರೈಲು ಘೋಷಿಸಿದ ಭಾರತೀಯ ರೈಲ್ವೆ, ಕರ್ನಾಟಕಕ್ಕೆ ಅತೀ ಹೆಚ್ಚು!
ಮಾಂಗಲ್ಯ ಕಳವು ಯತ್ನ: ಆರೋಪಿ ಸೆರೆ
ಅಂಕೋಲಾ: ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಹರಿದು ಓಡಲೆತ್ನಿಸಿದ ಕಳ್ಳನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ತಾಲೂಕಿನ ಹಟ್ಟಿಕೇರಿಯಲ್ಲಿ ಶುಕ್ರವಾರ ನಡೆದಿದೆ. ಕುಮಟಾ ತಾಲೂಕಿನ ಹೊನ್ನಕೇರಿ ನಾಗೂರಿನ ಯಶ್ವಂತ ನೇಮಾ ನಾಯ್ಕ (28) ಬಂಧಿತ ಆರೋಪಿ.
ಹಟ್ಟಿಕೇರಿಯ ಈಶ್ವರ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಿಕೊಂಡು ಬರುತ್ತಿದ್ದ ವೇದಾ ಎನ್ನುವ ಮಹಿಳೆಗೆ ಎದುರಾದ ಅಪರಿಚಿತನೊಬ್ಬ ತನ್ನ ಕೈಲಿರುವ ಚೀಟಿಯೊಂದನ್ನು ತೋರಿಸಿ ಅದರಲ್ಲಿ ಏನು ಬರೆದಿದೆ ಎಂದು ಓದಿ ಹೇಳುವಂತೆ ತಿಳಿಸಿದ್ದಾನೆ. ಆಕೆಯ ಲಕ್ಷ್ಯವನ್ನು ಚೀಟಿಯತ್ತ ಸೆಳೆದು ಕೂಡಲೇ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿ ಎಳೆದಿದ್ದ. ಅಚಾನಕ್ಕಾಗಿ ನಡೆದ ಘಟನೆಯಿಂದ ಬೆದರಿದ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ.
ಯುವಕನ ಶಿರಚ್ಛೇದ ಮಾಡಿ, ತಲೆ ಮೆರವಣಿಗೆ ಮಾಡಿದ ಪಾಪಿ: ರಸ್ತೆಬದಿಯಲ್ಲಿ ಎಸೆದು ಪರಾರಿ
ಮಾಂಗಲ್ಯ ಸರ ಹರಿದ ಕಳ್ಳ ಸಂದಿ ಗೊಂದಿಗಳಲ್ಲಿ ಓಡಿ ಪರಾರಿಯಾಗಲೆತ್ನಿಸಿದ್ದ. ಸಂಶಯಾಸ್ಪದವಾಗಿ ಹೆದ್ದಾರಿ ದಾಟಿ ಹೋಗುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯರೇ ಹಿಡಿದು ಗೂಸಾ ನೀಡಿ ಅಂಕೋಲಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಸರ ಕಳವು ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.