ಕೊಪ್ಪಳ(ಏ.26): ಅತ್ತ ಮದುವೆಯಾಗುತ್ತಿದ್ದಂತೆ ಇತ್ತ ವಧುವಿಗೆ ಸೋಂಕಿರುವುದು ದೃಢಪಟ್ಟಿದ್ದು, ಇದರಿಂದ ಮದುಮಗ ಸೇರಿದಂತೆ ಮದುವೆಯಲ್ಲಿ ಭಾಗಿಯಾದವರು ಆತಂಕಕ್ಕೀಡ ಪ್ರಸಂಗ ವಿಜಯಪುರದಲ್ಲಿ ನಡೆದಿದೆ. 

"

ಕೊಪ್ಪಳ ತಾಲೂಕಿನ ಕಿನ್ನಾಳ ನಿವಾಸಿಯನ್ನು ವಿಜಯಪುರಕ್ಕೆ ವಿವಾಹ ಮಾಡಿಕೊಡಲಾಗಿದೆ. ಕಳೆದ ವಾರ ವಿಜಯಪುರಕ್ಕೆ ಹೋಗಿ ಬಂದಿದ್ದ ವಧುವಿನ ಸ್ವ್ಯಾಬ್‌ ಅನ್ನು 3 ದಿನಗಳ ಹಿಂದೆ ಟೆಸ್ಟ್‌ಗೆ ಕೊಡಲಾಗಿತ್ತು. ಭಾನುವಾರ ವಿಜಯಪುರದಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ಸ್ವ್ಯಾಬ್‌ ವರದಿ ಕೊರೋನಾ ಪಾಸಿಟಿವ್‌ ಎಂದು ಬಂದಿದೆ. ಇದರಿಂದ ಮದುವೆ ಸಂಭ್ರಮದಲ್ಲಿದ್ದವರು ಭೀತಿಗೊಳಗಾಗಿದ್ದಾರೆ.

ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ

ಮದುಮಗಳು ಇದೀಗ ವಿಜಯಪುರದಿಂದ ಕಿನ್ನಾಳಕ್ಕೆ ಆಗಮಿಸುತ್ತಿದ್ದು, ಬಳಿಕವಷ್ಟೇ ಚಿಕಿತ್ಸೆಯನ್ನು ಪಡೆಯಲಿದ್ದಾರೆ. ಮದುವೆಯಲ್ಲಿ ಭಾಗಿಯಾದವರೆಲ್ಲರೂ ಪ್ರಾಥಮಿಕ ಸಂಪರ್ಕಿತರಾಗಲಿದ್ದಾರೆ.