ಪಿರಿಯಾಪಟ್ಟಣ [ಮಾ.17]:  ಮದುವೆ ಹಿಂದಿನ ದಿನ ವಧು ಚಿನ್ನಾಭರಣ ಹಾಗೂ ನಗದಿನೊಂದಿಗೆ ಬೇರೊಬ್ಬನ ಜೊತೆ ಓಡಿ ಹೋಗಿದ್ದು, ಆಕೆಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸುವಂತೆ ಆಕೆಯ ತಾಯಿ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದ ಭಾಗ್ಯ ಕಾಣೆಯಾಗಿರುವ ಯುವತಿ. ಇವರಿಗೆ ಮಾ. 15ರಂದು ತಾಲೂಕಿನ ಕಿರನಲ್ಲಿಯ ಸೋಮೇಶ್‌ ಎಂಬ ವರನೊಂದಿಗೆ ಮದುವೆ ನಿಶ್ಚಯವಾಗಿದ್ದು, ಪಟ್ಟಣದ ಕಮಲಮ್ಮ ಕರಿಗೌಡರ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. 

ಮದುವೆ ಹಿಂದಿನ ದಿನ ಯುವತಿ ರಾತ್ರಿ ಸಮಯ ಮನೆಯಿಂದ ಹೊರಹೋದವಳು ಪತ್ತೆಯಾಗಿಲ್ಲ, ಸಂಬಂಧಿಕರು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆತಿಲ್ಲ. 

ಫಸ್ಟ್‌ನೈಟಿಗೂ ಮುನ್ನ ಪತ್ನಿಯ ರಾಸಲೀಲೆ ಲೀಕ್‌! ಪತಿಯ ಮೊಬೈಲ್ ಗೆ ಬಂದ ವಿಡಿಯೋ

ನಮ್ಮ ಗ್ರಾಮದ ಶಿವು ಎಂಬ ಯುವಕನೊಂದಿಗೆ ಓಡಿ ಹೋಗಿದ್ದು, ಅಂದಿನಿಂದ ಗ್ರಾಮದಲ್ಲಿ ಶಿವು ಕೂಡ ಕಾಣುತ್ತಿಲ್ಲ, ಮದುವೆಗೆಂದು ಮಾಡಿಸಿದ್ದ ಚಿನ್ನಾಭರಣ ಹಾಗೂ ನಗದು 50 ಸಾವಿರ ರು. ತೆಗೆದುಕೊಂಡು ಹೋಗಿದ್ದು, ಭಾಗ್ಯಳನ್ನು ಪತ್ತೆ ಮಾಡಿಕೊಡುವಂತೆ ಆಕೆಯ ತಾಯಿ ಪದ್ಮಮ್ಮ ಪಟ್ಟಣದ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.