Ballari; ಕೃಷಿ ಭೂಮಿಯಲ್ಲಿ ಇಟ್ಟಿಗೆ ಕಾರ್ಖಾನೆಗಳ ಹಾವಳಿ, ಮೌನವಹಿಸಿದ ತಾಲೂಕಾಡಳಿತ!
ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳನ್ನ ಸ್ಪಾಪಿಸಿದ್ರು ಕ್ರಮ ಕೈಗೊಳ್ಳದ ತಾಲೂಕಾಡಳಿತ. ಕಳೆದ 2 ವರ್ಷದಿಂದ ಬರೀ ನೋಟಿಸ್ ನೀಡಿ ಕಾಲಹರಣ ಮಾಡ್ತಿರೋ ಅಧಿಕಾರಿಗಳು. ಕಂಪ್ಲಿಯ ಅಕ್ರಮ ಇಟ್ಟಿಗೆ ಭಟ್ಟಿಗಳ ತೆರವು ಮಾಡೋರು ಯಾರು ?
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಆ.19): ಆ ಪಟ್ಟಣದ ಸುತ್ತಮುತ್ತ ಕೃಷಿ ಭೂಮಿಗಳಿವೆ. ಆ ಕೃಷಿಭೂಮಿಯಲ್ಲಿ ಫಲವತ್ತಾದ ಭತ್ತ ಕಬ್ಬು ಮತ್ತು ಬಾಳೆ ಸೇರಿದಂತೆ ಇತರೆ ಬೆಳೆಯನ್ನು ಬೆಳೆಯುತ್ತಾರೆ. ಆದ್ರೇ ಫಲವತ್ತಾದ ಫಸಲು ಬರೋ ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ಇಟ್ಟಿಗೆ ಭಟ್ಟಿಗಳ ಸ್ಪಾಪನೆ ಮಾಡಲಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ ಅರವತ್ತಕ್ಕೂ ಹೆಚ್ಚು ಇಟ್ಟಿಗೆ ಭಟ್ಟಿಗಳು ಅಕ್ರಮವಾಗಿ ತೆಲೆ ಎತ್ತಿದ್ರು ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನೂ ಅಕ್ರಮವಾಗಿ ಸ್ಪಾಪಿಸಿರೋ ಇಟ್ಟಿಗೆ ಭಟ್ಟಿಗಳಿಗೆ ನೋಟಿಸ್ ಜಾರಿ ಮಾಡೋ ಅಧಿಕಾರಿಗಳು ಅವರಿಂದಲೇ ಅಕ್ರಮವಾಗಿ ಹಣ ವಸೂಲಿ ಮಾಡ್ತಿದ್ದಾರೆ ಅನ್ನೋ ಆರೋಪ ಸಹ ಕೇಳಿ ಬರುತ್ತಿದೆ. ಇದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣ. ಈ ಪಟ್ಟಣಕ್ಕೆ ನೀವೂ ಎಂಟ್ರಿ ಕೊಟ್ರೆ ಸಾಕು ನಿಮ್ಮನ್ನ ಇಟ್ಟಿಗೆ ಭಟ್ಟಿಗಳು ಸ್ವಾಗತಿಸುತ್ತವೆ. ಎಲ್ಲಿ ನೋಡಿದ್ರಲ್ಲಿ ಅಕ್ರಮವಾಗಿ ಸ್ಪಾಪನೆಯಾಗಿರುವ ನೂರಾರು ಇಟ್ಟಿಗೆ ಭಟ್ಟಿಗಳ ಹೊಗೆ ಮತ್ತು ಅದರಿಂದ ಬರೋ ಧೂಳು ಮನೆಯ ಮೇಲೆ ಕೂರೋದ್ರಿಂದ ಎಲ್ಲರಿಗೂ ಈಗ ಸಾಕಾಗಿ ಹೋಗಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ.
ಹೆಚ್ಚು ಕಡಿಮೆ ಕೃಷಿ ಭೂಮಿಯಲ್ಲಿ ಅರವತ್ತಕ್ಕೂ ಹೆಚ್ಚು ಇಟ್ಟಿಗೆ ಭಟ್ಟಿಗಳ ಕಾರ್ಖಾನೆಗಳನ್ನ ಸ್ಪಾಪನೆ ಮಾಡಲಾಗಿದೆ. ರೈತರಿಗೆ ಅಲ್ವ ಸ್ವಲ್ಪ ಹಣ ಕೊಟ್ಟು ಕೃಷಿ ಭೂಮಿಯಲ್ಲಿ ಇಟ್ಟಿಗೆ ಭಟ್ಟಿಗಳನ್ನ ಸ್ಪಾಪನೆ ಮಾಡಿರುವುದರಿಂದ ಬೆಳೆ ಬೆಳೆಯೋ ಪ್ರಮಾಣ ಸಹ ಕಡಿಮೆಯಾಗ್ತಿದೆ. ಇದು ಭೂಮಿ ಲೀಜ್ ಕೊಟ್ಟವರಿ ಗಷ್ಟೇ ಅಲ್ಲ ಪಕ್ಕದವರಿಗೂ ಸಮಸ್ಯೆಯಾಗ್ತಿದೆಯಂತೆ.
45 ಲಕ್ಷ ಇಟ್ಟಿಗೆಯಿಂದ ನಿರ್ಮಾಣವಾಗಿದೆ ರಾಷ್ಟ್ರಪತಿ ಭವನ, ದೇಶದ ಪ್ರಥಮ ಪ್ರಜೆಯ ನಿವಾಸದ ಒಂದು ನೋಟ!
ಎಲ್ಲ ಗೊತ್ತಿದ್ದು, ಸುಮ್ಮನಿದ್ದಾರೆ ಅಧಿಕಾರಿಗಳು
ಇನ್ನೂ ಈ ಹಿಂದೆ ಹೊಸಪೇಟೆ ಎಸಿ ಎಲ್ಲ ಭಟ್ಟಿಗಳನ್ನ ತೆರವುಗೊಳಿಸಿದ್ರು. ಜಿಲ್ಲೆ ವಿಭಜನೆಗ ಬಳಿಕ ಕಂಪ್ಲಿ ಬಳ್ಳಾರಿಯ ವ್ಯಾಪ್ತಿಯಲ್ಲಿ ಬಂದಿದೆ. ಅಂದಿನ ಎಸಿ ತೆರವು ಮಾಡಿದ ಕೆಲ ದಿನಗಳಲ್ಲೇ ಮತ್ತೆ ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳು ಸ್ಪಾಪನೆಯಾಗಿವೆ. ಈ ವಿಚಾರ ತಾಲೂಕಾಡಳಿತಕ್ಕೆ ಗೊತ್ತಿದ್ರು ತಹಶೀಲ್ದಾರರು ಮಾತ್ರ ಕಳೆದ 2 ವರ್ಷದಿಂದ ಬರೀ ನೋಟಿಸ್ ಜಾರಿ ಮಾಡುತ್ತಲೇ ಕಾಲಹರಣ ಮಾಡ್ತಿದ್ದಾರೆ. ಕೆಲ ಅಧಿಕಾರಿಗಳು ತೆರವು ಮಾಡೋ ಹೆಸರಿನಲ್ಲಿ ಇಟ್ಟಿಗೆ ಭಟ್ಟಿಗಳ ಮಾಲೀಕರಿಂದ ಮಾಮೂಲು ಪಡೆದು ಸುಮ್ಮನೇ ಕಾಲಹರಣ ಮಾಡ್ತಿದ್ದಾರಂತೆ. ಆದ್ರೇ ಈ ಬಗ್ಗೆ ಕಂಪ್ಲಿ ತಹಶಿಲ್ದಾರರ ಗೌಸಿಯಾ ಬೇಗಂ ನೋಟಿಸ್ ಕೊಟ್ಟಿದ್ದೇವೆ ಶೀಘ್ರದಲ್ಲೇ ತೆರವು ಮಾಡೋದಾಗಿ ಹೇಳ್ತಿದ್ದಾರೆ.
ರಸ್ತೆಯಲ್ಲಿ ಬಿದ್ದ ಇಟ್ಟಿಗೆ ಬದಿಗಿಟ್ಟ ಫುಡ್ ಡೆಲಿವರಿ ಬಾಯ್, ದುಬೈ ರಾಜನಿಂದ ಭರ್ಜರಿ ಗಿಫ್ಟ್!
ಬೇಲಿಯೇ ಎದ್ದು ಹೊಲ ಮೇಯ್ದ ಕಥೆ
ಇದು ಅಕ್ಷರಶಃ ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಾಗಿದೆ ಎಲ್ಲೋ ಒಂದು ಕಡೆ ತಾಲೂಕು ಆಡಳಿತದ ಸಹಕಾರವಿಲ್ಲದೇ ಇಷ್ಟೇಲ್ಲ ನಡೆಯಲು ಸಾಧ್ಯವೇ ಇಲ್ಲ. ಹೀಗಾಗಿ ಇನ್ನೂ ಮುಂದೆಯಾದ್ರೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುತ್ತದೆಯೇ ಅನ್ನೋದನ್ನು ಕಾದು ನೋಡಬೇಕಿದೆ