Asianet Suvarna News Asianet Suvarna News

ಬಾಗಲಕೋಟೆ: ಸಾಮೂಹಿಕ ಹೋಳಿ ಆಚರಣೆಗೆ ಬ್ರೇಕ್‌..!

ಸಾಮೂಹಿಕ ಹೋಳಿ ಆಚರಣೆ ನಿಷೇಧ| ಜನರ ಆರೋಗ್ಯದ ದೃಷ್ಟಿಯಿಂದ ಈ ವರ್ಷ ಹೋಳಿ ಹಬ್ಬ ಸೀಮಿತವಾಗಿ ಆಚರಿಸುವ ಅವಶ್ಯಕತೆ| ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಪಾಲಿಸಿ: ಜಿಲಾಧಿಕಾರಿ ಸೂಚನೆ| 
 

Break to Mass Holi Celebrate at Bagalkot due to Coronavirus grg
Author
Bengaluru, First Published Mar 24, 2021, 1:46 PM IST

ಬಾಗಲಕೋಟೆ(ಮಾ.24): ನಗರದಲ್ಲಿ ಮಾ.29 ರಿಂದ 31ವರೆಗೆ ಮೂರು ದಿನಗಳ ಕಾಲ ಜರುಗಲಿರುವ ಹೋಳಿ ಆಚರಣೆಯಲ್ಲಿ ಬಣ್ಣದ ಬಂಡಿ ಮೆರವಣಿಗೆ, ರೇನ್‌ಡ್ಯಾನ್ಸ್‌ ಹಾಗೂ ಸಾಮೂಹಿಕವಾಗಿ ಆಚರಣೆಗೆ ಆಯೋಜನೆ ಮಾಡುವದನ್ನು ನಿಷೇ​ಧಿಸಲಾಗಿದೆ ಎಂದು ಡಿಸಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲಾ​ಧಿಕಾರಿಗಳ ಸಬಾಂಗಣದಲ್ಲಿ ಮಂಗಳವಾರ ಜರುಗಿದ ಹೋಳಿ ಆಚರಣೆ ಕುರಿತ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂಪ್ರದಾಯಿಕವಾಗಿ ಹಾಗೂ ಐತಿಹಾಸಿಕವಾಗಿ ಸುಮಾರು ವರ್ಷಗಳಿಂದ ಹೋಳಿ ಹಬ್ಬವನ್ನು ವಿಜೃಂಭನೆಯಿಂದ ಆಚರಿಸುತ್ತಾ ಬಂದಿದ್ದು, ಕಳೆದ ಒಂದು ವರ್ಷದಿಂದ ಕೋವಿಡ್‌ ಮಹಾಮಾರಿ ಸೋಂಕು ರೋಗದ ಹಾವಳಿಯಿಂದಾಗಿ ಜನರ ಆರೋಗ್ಯದ ದೃಷ್ಟಿಯಿಂದ ಈ ವರ್ಷ ಹೋಳಿ ಹಬ್ಬವನ್ನು ಸೀಮಿತವಾಗಿ ಆಚರಿಸುವ ಅವಶ್ಯಕತೆ ಇದೆ ಎಂದರು.

ಧಾರ್ಮಿಕವಾಗಿ ಕೈಗೊಳ್ಳುವ ಆಚರಣೆಗೆ ಸಂಬಂಧಿ​ಸಿದಂತೆ ವಿ​ವಿಧಾನಗಳನ್ನು ಪೂಜೆಗೆ ಸೀಮಿತಗೊಳಿಸಲಾಗಿದೆ. ತಮ್ಮ ಕುಟುಂಬ ಹಾಗೂ ಗೆಳೆಯರ ಜೊತೆ ಬಣ್ಣದ ಆಟವನ್ನು ಆಡಬಹುದಾಗಿದೆ. ಕೋವಿಡ್‌ 2ನೇ ಅಲೇ ಹರಡಬಹುದಾಗ ರೋಗದ ಗಂಭೀರತೆಯನ್ನು ಅರಿತು ಶಾಂತಿಯುತವಾಗಿ ಹಾಗೂ ಅರ್ಥಪೂರ್ಣವಾಗಿ ಹಬ್ಬ ಆಚರಿಸಬೇಕು. ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತದಿಂದ ಹೊರಡಿಸಲಾದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ತಿಳಿಸಿದರು.

'ಬಿಜೆಪಿ ಸರ್ಕಾರವೋ..ಸಿಡಿ ಸರ್ಕಾರವೋ'

ಮಾಸ್ಕ್‌ ಹಾಕಿ:

ಎಸ್ಪಿ ಲೋಕೇಶ ಜಗಲಾಸರ ಮಾತನಾಡಿ, ಕೋವಿಡ್‌ 2ನೇ ಅಲೇ ಹಿನ್ನಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಹೋಳಿ ಹಬ್ಬವನ್ನು ಸೀಮಿತ ಆಚರಣೆಗೆ ನಿರ್ಧರಿಸಲಾಗಿದೆ. ತಮ್ಮ ಪರಿವಾರದ ಜೊತೆ, ಗೆಳೆಯರ ಜೊತೆ ಹಾಗೂ ಓಣಿಗೆ ಸೀಮಿತವಾಗಿ ಹೊಳಿ ಆಚರಿಸಬೇಕು. ರೋಗ ಹರಡಲಿಕ್ಕೆ ಅವಕಾಶ ನೀಡದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಕೋವಿಡ್‌ ಹಿನ್ನಲೆಯಲ್ಲಿ ಮಾದರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿ. ಹಬ್ಬದ ಆಚರಣೆಯಲ್ಲಿ ಅಜಾಗರೂಕತೆ ಬೇಡ, ಸುರಕ್ಷತೆ ದೃಷ್ಟಿಯಿಂದ ಮಾಸ್ಕ್‌, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್‌ ಬಳಸುವಂತೆ ತಿಳಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಎಡಿಸಿ ಮಹಾದೇವ ಮುರಗಿ, ಉಪವಿಭಾಧಿಗಾ​ಕಾರಿ ಎಂ.ಗಂಗಪ್ಪ, ತಹಸೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ, ನಗರಸಭೆ ಪೌರಾಯುಕ್ತ ಮುನಿಷಾಮಪ್ಪ, ಆಚರಣೆ ಸಮಿತಿಯ ಮುಖಂಡರಾದ ಕಳಕಪ್ಪ ಬಾದೊಡಗಿ, ಬಸವರಾಜ ಕಟಗೇರಿ, ಅಶೋಕ ಮುತ್ತಿನಮಠ, ಶಾಂತತಾ ಸಮಿತಿಯ ಎ.ಎ.ದಾಂಡಿಯಾ, ಕುತುಬುದ್ದಿನ ಖಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios