Chitradurga: ಅದಿರು ಸಾಗಣೆ ಲಾರಿಗಳಿಗೆ ಸರ್ಕಾರದಿಂದ ಬ್ರೇಕ್: ಸಂಕಷ್ಟದಲ್ಲಿ ಲಾರಿ ಮಾಲೀಕರು!
ಒಂದು ಕಾಲದಲ್ಲಿ ಮೈನ್ಸ್ ಸಾಗಿಸುವ ಲಾರಿ ಮಾಲಿಕರು ಅಂದ್ರೆ ಅವರ ಗತ್ತು, ಗಮ್ಮತ್ತೇ ಬೇರೆಯಾಗಿತ್ತು. ಆದ್ರೆ ಇದೀಗ ದಾವಣಗೆರೆ ಸಂಸದ ಹಾಗು ಸಚಿವರ ಮುಸುಕಿನ ಗುದ್ದಾಟ ಲಾರಿ ಮಾಲಿಕರನ್ನು ಸಂಕಷ್ಟಕ್ಕೆ ಸಿಲುಕಿದ್ದು, ಹೀಗಾಗಿ ಅವರ ಸ್ಥಿತಿ ಬೀದಿಗೆ ಬಂದಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಸೆ.09): ಒಂದು ಕಾಲದಲ್ಲಿ ಮೈನ್ಸ್ ಸಾಗಿಸುವ ಲಾರಿ ಮಾಲಿಕರು ಅಂದ್ರೆ ಅವರ ಗತ್ತು, ಗಮ್ಮತ್ತೇ ಬೇರೆಯಾಗಿತ್ತು. ಆದ್ರೆ ಇದೀಗ ದಾವಣಗೆರೆ ಸಂಸದ ಹಾಗು ಸಚಿವರ ಮುಸುಕಿನ ಗುದ್ದಾಟ ಲಾರಿ ಮಾಲಿಕರನ್ನು ಸಂಕಷ್ಟಕ್ಕೆ ಸಿಲುಕಿದ್ದು, ಹೀಗಾಗಿ ಅವರ ಸ್ಥಿತಿ ಬೀದಿಗೆ ಬಂದಿದೆ. ಅಷ್ಟಕ್ಕು ಅಲ್ಲಾಗಿರುವ ಸಮಸ್ಯೆ ಆದ್ರು ಏನಂತೀರ..! ಹಾಗಾದ್ರೆ ಈ ಸ್ಟೋರಿ ನೋಡಿ. ನೋಡಿ ಹೀಗೆಸಾಲಾಗಿ ನಿಂತಿರುವ ಲಾರಿಗಳು, ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕುಳಿತ ಲಾರಿ ಮಾಲಿಕರು. ಈ ದೃಶ್ಯಗಳು ಕಂಡುಬಂದಿದ್ದು,ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿ. ಹೌದು, ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದ ಬಳಿಯ ಸರ್ವೆ ನಂಬರ್ 5 ಮತ್ತು 6 ರಲ್ಲಿ ಖಾಸಗಿ ಗಣಿ ಕಂಪನಿಯಿಂದ ಮೈನ್ಸ್ ಸರಬರಾಜನ್ನು ಲಾರಿಗಳು ಮಾಡುತಿದ್ದವು.
ಆದ್ರೆ ಲಾರಿಗಳು ಹಾದು ಹೋಗುವ ಆ ಜಮೀನಿನಲ್ಲಿರುವ ರಸ್ತೆಯು, ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ ಅಂತ ಆರ್ ಟಿ ಐ ಕಾರ್ಯಕರ್ತನೋರ್ವ ದೂರು ನೀಡಿದ ಹಿನ್ನಲೆಯಲ್ಲಿ ಕಳೆದ ಆರು ತಿಂಗಳಿಂದ ಆ ರಸ್ತೆಯನ್ನು ಸರ್ಕಾರ ಬಂದ್ ಮಾಡಿಸಿದೆ. ಹೀಗಾಗಿ ಮೈನ್ಸ್ ಸರಬರಾಜು ಮಾಡುತಿದ್ದ ಲಾರಿಮಾಲಿಕರು ಕೆಲಸವಿಲ್ಲದೇ,ಸಾಲದ ಸುಳಿಗೆ ಸಿಲುಕಿದ್ದಾರೆ. ಆದ್ರೆ ಈ ದೂರಿನ ಹಿಂದೆ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕೈವಾಡವಿರುವ ಶಂಕೆಯಿದ್ದು, ದಾವಣಗೆರೆ ಸಂಸದ, ಸಿದ್ದೇಶ್ವರ್ ಅವರ ವಿರುದ್ಧದ ಪಕ್ಷರಾಜಕಾರಣ ಹಾಗು ವೈಯಕ್ತಿಕ ದ್ವೇಷದಿಂದಾಗಿ, ಅವರ ಲಾರಿಗಳಿಗೆ ಕೆಲಸವಿಲ್ಲದಂತೆ ಮಾಡುವ ದುರುದ್ದೇಶದಿಂದ ಸಚಿವ ಮಲ್ಲಿಕಾರ್ಜುನ್ ಒತ್ತಡದ ಮೇರೆಗೆ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.
ಪ್ರೀತಿಗೆ ವಯಸ್ಸಿನ ಗಡಿ ಇಲ್ಲ: 75ರ ವಯಸ್ಸಿನಲ್ಲೂ 35ರ ಯುವತಿಗೆ ತಾಳಿ ಕಟ್ಟಿದ ಅಜ್ಜ!
ಹೀಗಾಗಿ ಅವರಿಬ್ಬರ ಮುಸುಕಿನ ಗುದ್ದಾಟದಿಂದಾಗಿ ಅಮಾಯಕರು ಎಂಬ ಆರೋಪ ಪರೋಕ್ಷವಾಗಿ ಕೇಳಿ ಬಂದಿದೆ. ಇನ್ನು ಅಪ್ಪ, ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ, ಸಚಿವ ಹಾಗು ಸಂಸದರ ರಿವೇಂಜ್ ರಾಜಕಾರಣದಿಂದಾಗಿ ಅಮಾಯಕ ಲಾರಿ ಮಾಲಿಕರು, ಚಾಲಕರು ಮತ್ತು ಕಾರ್ಮಿಕರೆಲ್ಲರು, ಒಂದೊತ್ತಿನ ಊಟಕ್ಕು ಹಣವಿಲ್ಲದೇ ಪರದಾಡುವಂತಾಗಿದೆ.ಹೀಗಾಗಿ ಜೀವನೋಪಾಯಕ್ಕಾಗಿ ಸರ್ವೆನಂಬರ್ 5 ಮತ್ತು 6ರ ಜಮೀನಿನಲ್ಲಿ ಎಂದಿನಂತೆ ಲಾರಿ ಸಂಚಾರಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ,ಅರಣ್ಯ, ಗಣಿ,ಮತ್ತು ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ರು ಯಾವ್ದೇ ಪ್ರಯೋಜನ ಆಗಿಲ್ಲ.
ಬರಗಾಲ ಘೋಷಣೆಗೆ ಮೂಹೂರ್ತ ತೆಗೆಸುತ್ತಿದ್ದೀರಾ: ಕಾಂಗ್ರೆಸ್ ಸರ್ಕಾರಕ್ಕೆ ಬೊಮ್ಮಾಯಿ ಪ್ರಶ್ನೆ?
ಹೀಗಾಗಿ ಮನನೊಂದ ಲಾರಿ ಮಾಲಿಕರು,ಡಿಸಿ ಕಚೇರಿ ಬಳಿ ಸತತ ಮೂರು ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಒಟ್ಟಾರೆ ಗಣಿ ಸಚಿವ ಹಾಗು ಸಂಸದ ಮುಸುಕಿನ ಗುದ್ದಾಟ ಲಾರಿ ಮಾಲಿಲರನ್ನು ಬೀದಿಗೆ ತಂದು ನಿಲ್ಲಿಸಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಹಿತ ಕಾಯುವ ಬದಲಾಗಿ ಪಕ್ಷ ರಾಜಕಾರಣ ಹಾಗು ದ್ವೇಷ ರಾಜಕಾರಣ ಮಾಡ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸತತ ಆರು ತಿಂಗಳಿಂದ ಕೆಲಸವಿಲ್ಲದೇ ಕಂಗಾಲಾದ ಲಾರಿ ಮಾಲಿಕರು ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ. ಇನ್ನಾದ್ರು ಸರ್ಕಾರ ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.